logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

aculeation
ನಾಮವಾಚಕ
ಮೊನಚಾಗಿರುವುದು.

aculeus
ನಾಮವಾಚಕ
  • (ಪ್ರಾಣಿವಿಜ್ಞಾನ) ಚುಚ್ಚುಕೊಂಡಿ.
  • (ಸಸ್ಯವಿಜ್ಞಾನ) ಮುಳ್ಳು.

  • acumen
    ನಾಮವಾಚಕ
  • ತೀಕ್ಷ್ಣ ಬುದ್ಧಿ; ತೀವ್ರ ವಿವೇಚನಾ ಶಕ್ತಿ; ಸೂಕ್ಷ್ಮದೃಷ್ಟಿ; ಕುಶಾಗ್ರಮತಿ.
  • (ಪ್ರಾಣಿವಿಜ್ಞಾನ) (ಕೆಲವು ಜಾತಿಯ ಚಿಪ್ಪಿನ ಪ್ರಾಣಿಗಳ ಮೇಲಿರುವ) ಮುಳ್ಳು.
  • (ಸಸ್ಯವಿಜ್ಞಾನ) (ಎಲೆ ಮೊದಲಾದವುಗಳ) ಮೊನಚಾದ ತುದಿ; ಸೂಚ್ಯಗ್ರ.

  • acuminate
    ಗುಣವಾಚಕ
    (ಸಸ್ಯವಿಜ್ಞಾನ) ಮೊನಚಾದ; ತೀಕ್ಷ್ಣಾಗ್ರ; ಸೂಚ್ಯಗ್ರ.

    acuminate
    ಸಕರ್ಮಕ ಕ್ರಿಯಾಪದ
  • ಮೊನಚು ಮಾಡು; ಚೂಪುಗೊಳಿಸು; ಮೊನೆಯಾಗಿಸು.
  • (ರೂಪಕವಾಗಿ) (ದುಃಖ ಮೊದಲಾದವುಗಳನ್ನು) ತೀವ್ರಗೊಳಿಸು; ತೀಕ್ಷ್ಣಗೊಳಿಸು.

  • acumination
    ನಾಮವಾಚಕ
  • ಮೊನಚು ಮಾಡುವಿಕೆ; ಚೂಪುಗೊಳಿಸುವಿಕೆ; ಮೊನೆಗೊಳಿಸುವಿಕೆ.
  • ಚೂಪಾದುದು; ಮೊನೆ.
  • (ರೂಪಕವಾಗಿ) (ದುಃಖ ಮೊದಲಾದವನ್ನು) ತೀವ್ರಗೊಳಿಸುವಿಕೆ; ತೀಕ್ಷ್ಣಗೊಳಿಸುವಿಕೆ.

  • acupuncture
    ನಾಮವಾಚಕ
  • ಸೂಜಿ ಚಿಕಿತ್ಸೆ; ದೇಹದ ಬೇರೆ ಬೇರೆ ಭಾಗಗಳಿಗೆ ಸೂಜಿಗಳನ್ನು ಚುಚ್ಚಿ ರೋಗಗಳನ್ನು ಗುಣಪಡಿಸುವ, ಚೀನ ದೇಶದ ಒಂದು ಚಿಕಿತ್ಸಾ ವಿಧಾನ.
  • ಸೂಚೀರಂಧ್ರಣ; ದ್ರವಗಳನ್ನು ತೆಗೆಯಲು ಯಾ ನೋವು ಕಳೆಯಲು ಚರ್ಮವನ್ನು ಸೂಜಿಗಳಿಂದ ಚುಚ್ಚಿ ರಂಧ್ರಮಾಡುವುದು.

  • acushla
    ನಾಮವಾಚಕ
    (ಐರ್ಲಂಡ್‍ನಲ್ಲಿ ಪ್ರಯೋಗ) ಅಚ್ಚುಮೆಚ್ಚಿನವ(ಳು); ಪ್ರಿಯತಮ(ಮೆ).

    acute
    ಗುಣವಾಚಕ
  • ಮೊನೆಯಾದ; ಮೊನಚಾದ; ಚೂಪಾದ; ಕೂರಾದ.
  • (ಬುದ್ಧಿಶಕ್ತಿ, ವಿವೇಚನೆ, ದೃಷ್ಟಿ, ತಾರ್ಕಿಕ ಸಾಮರ್ಥ್ಯ, ಮೊದಲಾದವುಗಳ ವಿಷಯದಲ್ಲಿ) ಚುರುಕಾದ; ತೀಕ್ಷ್ಣವಾದ.
  • (ನೋವು, ರೋಗಗಳ ವಿಷಯದಲ್ಲಿ) ತೀವ್ರವಾದ; ಉತ್ಕಟವಾದ; ಉಲ್ಬಣಗೊಂಡ.
  • (ವಿವಾದ, ಕಷ್ಟ, ಕೊರತೆ, ಬಡತನಗಳ ವಿಷಯದಲ್ಲಿ) ತೀವ್ರ; ಉಗ್ರ; ಉತ್ಕಟ.
  • (ಧ್ವನಿಗಳ ವಿಷಯದಲ್ಲಿ) ಕೀರಲು; ತೀಕ್ಷ್ಣ.
  • ಒಳಹೊಕ್ಕು ನೋಡುವ; ತೀಕ್ಷ್ಣ; ಮಾರ್ಮಿಕ; ಮರ್ಮ ಭೇದಕ; ಮರ್ಮಜ್ಞ: an acute critic ಮರ್ಮಜ್ಞ ವಿಮರ್ಶಕ.

  • acute accent
    ನಾಮವಾಚಕ
    ಉದಾತ್ತ ಚಿಹ್ನೆ; ಸ್ವರಾಘಾತ ಚಿಹ್ನೆ; (ಕೆಲವು ಭಾಷೆಗಳಲ್ಲಿ ಧ್ವನಿಯ ಸ್ವರೂಪ, ಗುಣ, ದೀರ್ಘತೆ, ಉಚ್ಚಾರಣೆ, ಮೊದಲಾದವನ್ನು ಸೂಚಿಸಲು ಯಾವುದೇ ಅಕ್ಷರದ ಮೇಲೆ ಹಾಕುವ) ಓರೆಯಾದ ರೇಖೆ($’$).


    logo