logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

zigzag
ಗುಣವಾಚಕ
ಪರ್ಯಾಯವಾಗಿ ಎಡಬಲ ಮುರವುಗಳುಳ್ಳ; ವಂಕಿವಂಕಿಯಾದ; ಸೊಟ್ಟಪಟ್ಟನಾದ; ಅಂಕುಡೊಂಕುಗಳಿರುವ: a zigzag road ಅಂಕುಡೊಂಕು ರಸ್ತೆ.

zigzag
ಕ್ರಿಯಾವಿಶೇಷಣ
ಅಂಕುಡೊಂಕಾಗಿ; ವಂಕಿವಂಕಿಯಾಗಿ; ಸೊಟ್ಟಪಟ್ಟನಾಗಿ ತಿರುಗಿ.

zigzag
ನಾಮವಾಚಕ
  • (ಅನೇಕವೇಳೆ ಬಹುವಚನದಲ್ಲಿ) ವಂಕಿವಂಕಿ ತಿರುವು.
  • ಅಂಕುಡೊಂಕು; ತಿರುವು ಮುರುವು – ರೇಖೆ ಯಾ ಹಾದಿ; (ಮುಖ್ಯವಾಗಿ ಕಡಿದಾದ ಬೆಟ್ಟ ಹತ್ತುವಾಗ, ರಸ್ತೆ ಏರುವಾಗ) ಪರ್ಯಾಯವಾಗಿ ಎಡಕ್ಕೂ ಬಲಕ್ಕೂ ತಿರುಗುತ್ತಾ ಹೋಗುವ ರಸ್ತೆ.

  • zigzag
    ಅಕರ್ಮಕ ಕ್ರಿಯಾಪದ
    (ಭೂತರೂಪ & ಭೂತಕೃದಂತ zigzagged; ವರ್ತಮಾನ ಕೃದಂತ zigzagging). ಪರ್ಯಾಯವಾಗಿ ಎಡಕ್ಕೂ ಬಲಕ್ಕೂ ತಿರುಗು; ವಂಕಿವಂಕಿಯಾಗಿ ಚಲಿಸು; ಸೊಟ್ಟಪಟ್ಟನಾಗಿ ಹೋಗು; ಅಂಕುಡೊಂಕಾಗಿ ಚಲಿಸುತ್ತ ಮುಂದುವರಿ, ಸಾಗು.

    zigzaggedly
    ಕ್ರಿಯಾವಿಶೇಷಣ
    ಪರ್ಯಾಯವಾಗಿ ಎಡಕ್ಕೂ ಬಲಕ್ಕೂ ತಿರುಗುವಂತೆ; ಅಂಕುಡೊಂಕಾಗಿ.

    zilch
    ನಾಮವಾಚಕ
    (ಮುಖ್ಯವಾಗಿ ಅಮೆರಿಕನ್‍ ಪ್ರಯೋಗ) (ಅಶಿಷ್ಟ) ಇಲ್ಲಮೆ; ಏನೂ ಇಲ್ಲ.

    zillah
    ನಾಮವಾಚಕ
    (ಭಾರತದಲ್ಲಿ ಕಂದಾಯ ಆಡಳಿತ ವಿಭಾಗವಾದ) ಜಿಲ್ಲೆ; ಹಲವು ತಾಲ್ಲೂಕುಗಳನ್ನುಳ್ಳ, ಪರ್ಗಣಗಳನ್ನುಳ್ಳ ವಿಭಾಗ.

    zillion
    ನಾಮವಾಚಕ
    (ಅಮೆರಿಕನ್‍ ಪ್ರಯೋಗ) (ಆಡುಮಾತು) ಅಗಣಿತ ಭಾರಿಸಂಖ್ಯೆ; ಅನಿರ್ದಿಷ್ಟ ದೊಡ್ಡ ಸಂಖ್ಯೆ.

    zillionth
    ಗುಣವಾಚಕ
    (ಅಮೆರಿಕನ್‍ ಪ್ರಯೋಗ) ಅನಿರ್ದಿಷ್ಟ ದೊಡ್ಡ ಸಂಖ್ಯೆಯ.

    zillionth
    ನಾಮವಾಚಕ
    (ಅಮೆರಿಕನ್‍ ಪ್ರಯೋಗ) ಅನಿರ್ದಿಷ್ಟ ದೊಡ್ಡ ಸಂಖ್ಯೆ.


    logo