logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

Ulster custom
ನಾಮವಾಚಕ
ಅಲ್ಸ್‍ಟರ್‍ ಹಿಡುವಳಿ ಪದ್ಧತಿ; ಐರ್ಲೆಂಡಿನ ಅಲ್ಸ್‍ಟರ್‍ ಪ್ರದೇಶದಲ್ಲಿ ಬಳಕೆಯಿದ್ದ, ಜಮೀನು ಹಿಡುವಳಿ ಪದ್ಧತಿ.

Ulsterman
ನಾಮವಾಚಕ
ಐರ್ಲಂಡಿನ ಅಲ್ಸ್‍ಟರ್‍ನಲ್ಲಿ ಹುಟ್ಟಿದವನು.

Ulsterwoman
ನಾಮವಾಚಕ
ಐರ್ಲಂಡಿನ ಅಲ್ಸ್‍ಟರ್‍ನಲ್ಲಿ ಹುಟ್ಟಿದವಳು.

ult.
ಸಂಕ್ಷಿಪ್ತ
ultimo.

ulterior
ಗುಣವಾಚಕ
  • ಆಚೆಯ; ದೂರದ.
  • ಸದ್ಯದ್ದಲ್ಲದ; ಭವಿಷ್ಯದ; ಕಾಲದಲ್ಲಿ ಮುಂದಿನ, ದೂರದ: ulterior action ಭವಿಷ್ಯದ ಕ್ರಿಯೆ, ಕಾರ್ಯ.
  • ಹಿನ್ನೆಲೆಯಲ್ಲಿರುವ; ಕಾಣುವುದಕ್ಕಿಂತ, ಹೇಳುವುದಕ್ಕಿಂತ ಮೀರಿ ಇರುವ; ಗುಪ್ತ; ಅಗೋಚರ; ಅವ್ಯಕ್ತ: ulterior motive ಗುಪ್ತ ಉದ್ದೇಶಗಳು. ulterior plans ಅಗೋಚರ ಹಂಚಿಕೆಗಳು.

  • ulteriorly
    ಕ್ರಿಯಾವಿಶೇಷಣ
    ಭವಿಷ್ಯದಲ್ಲಿ; ಮುಂದಿನ ಘಟ್ಟದಲ್ಲಿ; ಮುಂದಿನ ಘಟ್ಟಕ್ಕೆ.

    ultima
    ನಾಮವಾಚಕ
    ಒಂದು ಶಬ್ದದ ಕೊನೆಯ, ಅಂತಿಮ ಉಚ್ಚಾರಾಂಶ.

    ultima Thule
    ನಾಮವಾಚಕ
  • ಅತ್ಯಂತ ದೂರದ, ಅಜ್ಞಾತ ಪ್ರದೇಶ, ಸ್ಥಳ.
  • (ರೂಪಕವಾಗಿ) (ಯಾವುದರದೇ) ಗರಿಷ್ಠಮಿತಿ; ತುತ್ತತುದಿ; ಪರಾಕಾಷ್ಠೆ.

  • ultimate
    ಗುಣವಾಚಕ ಪದಗುಚ್ಛ
  • ಕಟ್ಟಕಡೆಯ; ಕೊನೆಯ; ಆತ್ಯಂತಿಕ; ಅಂತಿಮ; ಆಖೈರಿನ; ಅಂತ್ಯದ; ಅದರ ತರುವಾಯ ಏನೂ ಇರದ ಯಾ ಇರಲು ಸಾಧ್ಯವಿಲ್ಲದ. ultimate result ಕಟ್ಟಕಡೆಯ ಫಲಿತಾಂಶ.
  • ಮೂಲವಾದ; ಮೂಲಭೂತವಾದ: ultimate principles ಮೂಲತತ್ತ್ವಗಳು. ultimate truth ಮೂಲಭೂತ ಸತ್ಯ.
  • ಅತ್ಯಂತ ಹೆಚ್ಚಿನ ಪ್ರಮಾಣದ; ಪರಮಾವಧಿಯ; ಗರಿಷ್ಠ (ಮಿತಿಯ): ultimate tensile strength ಅತ್ಯಂತ ಹೆಚ್ಚು ಬಿಗುವು ಪಡೆಯುವ ಶಕ್ತಿ.

  • ultimate
    ನಾಮವಾಚಕ
  • ಸರ್ವೋತ್ಕೃಷ್ಟ; ಪರಮೋತ್ಕೃಷ್ಟ; ಸರ್ವಶ್ರೇಷ್ಠ; ಸಾಧನೆಯಲ್ಲಿ ಯಾ ಕಲ್ಪನೆಯಲ್ಲಿ ಅತ್ಯುಚ್ಚವಾದುದು.
  • ಅಂತಿಮ ಯಾ ಮೂಲಭೂತ ಸತ್ಯ ಯಾ ಸಂಗತಿ.


  • logo