(ಕಂಪ್ಯೂಟರ್) ಪಂಚ್ ಮಾಡಿದ ಕಾರ್ಡುಗಳೇ ಮೊದಲಾದ ದತ್ತಾಂಶ ಸಂಗ್ರಹಾಗಾರದಿಂದ ಪಟ್ಟಿಗಳನ್ನು ಯಾ ಕೋಷ್ಟಕಗಳನ್ನು ತಯಾರಿಸುವ ಯಂತ್ರ.
tac-au-tac
ನಾಮವಾಚಕ
(ಕತ್ತಿವರಸೆ) ಏಟು ತಪ್ಪಿಸಿಕೊಂಡು ಪ್ರತಿ ಏಟು ಹೊಡೆಯುವುದು; ಏಟಿಗೆ ಏಟು.
tacamahac
ನಾಮವಾಚಕ
(ಮುಖ್ಯವಾಗಿ ಬರ್ಸರ, ಪ್ರೋಡಿ(ಷಿ)ಯಮ್ ಮತ್ತು ಕ್ಯಾಹಿಲಮ್ ಕುಲಗಳಿಗೆ ಸೇರಿದ, ಉಷ್ಣವಲಯದ ಕೆಲವು ಮರಗಳಿಂದ ತೆಗೆಯುವ) ಅಂಟು; ರಾಳ.
ಗುಗ್ಗುಳ ಮರ.
ಗುಗ್ಗುಳ ಮರದ ರಾಳ ಯಾ ಅಂಟು.
tacet
ಅಕರ್ಮಕ ಕ್ರಿಯಾಪದ
(ಸಂಗೀತದಲ್ಲಿ ನಿರ್ದಿಷ್ಟ ವಾದ್ಯಕ್ಕೆ ಯಾ ಕಂಠಕ್ಕೆ ಯಾ ಮೌನ ಕೊಡುವ ಸೂಚನೆ) ‘ಮೌನ ವಹಿಸಲಿ’; ‘ನುಡಿಯದಿರಲಿ’.
tachism
ನಾಮವಾಚಕ
ಭಾವಪ್ರಚೋದಕ ಚಿತ್ರಣ; ಒಳಮನಸ್ಸಿನ ಭಾವನೆಯನ್ನು ಎಬ್ಬಿಸಲು, ಅಡ್ಡಾದಿಡ್ಡಿಯಾಗಿ ಬಣ್ಣಗಳನ್ನು ತೊಡೆದ, ಕ್ರಿಯಾ ಚಿತ್ರಣದ (action painting) ಒಂದು ಬಗೆ.
tachisme
ನಾಮವಾಚಕ
= tachism.
tachistoscope
ನಾಮವಾಚಕ
(ಒಂದು ರೀತಿಯ) ದೃಷ್ಟಿಮಾಪಕ; ಮನಸ್ಸಿನ ಗ್ರಹಣ ಶಕ್ತಿಯನ್ನು ಪರೀಕ್ಷಿಸಲು ಫಕ್ಕನೆ ಕಣ್ಣ ಮುಂದೆ ಚಿತ್ರ, ಅಕ್ಷರ, ಶಬ್ದ, ಮೊದಲಾದ ಭಾವಪ್ರಚೋದಕ ವಸ್ತುಗಳನ್ನು ಕ್ಷಣಕಾಲ ಪ್ರದರ್ಶಿಸಿ ತೆಗೆದುಬಿಡುವ ಯಂತ್ರ.