logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

machinery
ನಾಮವಾಚಕ
  • ಯಂತ್ರ ಸಾಧನಗಳು; ಯಂತ್ರೋಪಕರಣಗಳು.
  • ಯಂತ್ರದ ಘಟಕಗಳು, ಅಂಗಗಳು.
  • (ಯಾವುದೇ ಕ್ರಿಯೆಯ) ಕಾರ್ಯ ತಂತ್ರ; ಕ್ರಿಯಾವಿಧಾನ.
  • (ಪರಿಣಾಮ ಸಾಧಿಸಲೆಂದು ಒಂದು ಸಾಹಿತ್ಯ ಕೃತಿಯಲ್ಲಿ ಬಳಸುವ, ಮುಖ್ಯವಾಗಿ ಅಲೌಕಿಕ ಪಾತ್ರಗಳು, ಘಟನೆಗಳು, ಮೊದಲಾದ) ತಂತ್ರಗಳು.
  • ವ್ಯವಸ್ಥಿತವಾದ ಯೋಜನೆ, ಏರ್ಪಾಟು.
  • ಸಾಧನ; ಸಾಧನೋಪಾಯ: the machinery for decision making ತೀರ್ಮಾನ ಕೈಗೊಳ್ಳಲು ಬೇಕಾದ ಸಾಧನೋಪಾಯ.

  • machinist
    ನಾಮವಾಚಕ
  • ಯಂತ್ರಶಿಲ್ಪಿ; ಯಂತ್ರಕಾರ; ಯಂತ್ರ ತಯಾರಿಸುವವನು.
  • ಯಂತ್ರಚಾಲಕ; ಯಂತ್ರ ನಡೆಸುವವನು; (ಮುಖ್ಯವಾಗಿ ಹೊಲಿಗೆ) ಯಂತ್ರದಲ್ಲಿ ಕೆಲಸ ಮಾಡುವವನು.

  • machismo
    ನಾಮವಾಚಕ
  • ಪುಂಸ್ತ ಪ್ರದರ್ಶನ; ಪುರುಷತ್ವ ಪ್ರದರ್ಶನ.
  • ಪುರುಷ ತ್ವಾತಿರೇಕ; ತನ್ನ ಗಂಡುತನವನ್ನು ಅತಿಯಾಗಿ ತೋರಿಸುವುದು, ಪ್ರದರ್ಶಿಸುವುದು.

  • Machmeter
    ನಾಮವಾಚಕ
    ಮ್ಯಾಕ್‍ ಮೀಟರ್‍; ಮ್ಯಾಕ್‍ ಸಂಖ್ಯೆಯಲ್ಲಿ ವಾಯುವೇಗವನ್ನು ಸೂಚಿಸುವ ಉಪಕರಣ.

    macho
    ಗುಣವಾಚಕ
    ಪುಂಸ್ತ್ವ ಪ್ರದರ್ಶಕ; ಪುರುಷತ್ವ ಪ್ರದರ್ಶಕ; ಗಂಡುತನವನ್ನು ಅತಿಯಾಗಿ ಪ್ರದರ್ಶಿಸುವ.

    macho
    ನಾಮವಾಚಕ
  • ಪುಂಸ್ತ್ವ ಪ್ರದರ್ಶಕ; ಗಂಡಸುತನವನ್ನು ಪ್ರದರ್ಶಿಸುವವ.
  • = machismo.

  • machtpolitik
    ನಾಮವಾಚಕ
    ಶಕ್ತಿ ರಾಜಕೀಯ; ಶಕ್ತಿ, ಬಲ ಯಾ ಪ್ರಭಾವವನ್ನು ಆಧರಿಸಿದ ರಾಜಕೀಯ ಕ್ರಿಯೆ, ಚಟುವಟಿಕೆ.

    macintosh
    ನಾಮವಾಚಕ
    = mackintosh.

    mack
    ನಾಮವಾಚಕ
    (ಆಡುಮಾತು) mackintosh ಎಂಬುದರ ಸಂಕ್ಷಿಪ್ತ.

    mackerel
    ನಾಮವಾಚಕ ಪದಗುಚ್ಛ
    ಮ್ಯಾಕರಲ್‍; ಬಂಗಡೆ ಮೀನು; ಬೇಸಗೆಯಲ್ಲಿ ಮೊಟ್ಟೆ ಇಡಲು ಹಿಂಡುಹಿಂಡಾಗಿ ದಡದ ಬಳಿಗೆ ಬರುವ, ಆಹಾರಯೋಗ್ಯವಾದ, ಉತ್ತರ ಅಟ್ಲಾಂಟಿಕ್‍ ಸಾಗರದ ಒಂದು ಬಗೆಯ ಕಡಲ ಮೀನು.
  • mackerel breeze ಮ್ಯಾಕರಲ್‍ ಗಾಳಿ, ಮಾರುತ; ಮ್ಯಾಕರಲ್‍ ಮೀನು ಹಿಡಿಯಲು ಅನುಕೂಲವಾದ ಜೋರುಗಾಳಿ.
  • mackerel gale = ಪದಗುಚ್ಛ\((1)\).
  • mackerel sky ಮಾಕರಲ್‍ ಆಕಾಶ; ಚಿಕ್ಕಚಿಕ್ಕ ಬಿಳಿಯ ಮೋಡಗಳ ಸಾಲುಗಳಿಂದ ಕೂಡಿ ಮ್ಯಾಕರಲ್‍ ಮೀನಿನ ಮೈಯಂತೆ ಕಾಣುವ ಆಕಾಶ.


  • logo