logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

ice-skater
ನಾಮವಾಚಕ
ಐಸ್‍ಸ್ಕೇಟರ್‍; ನೀರ್ಗಲ್ಲ ಮೇಲೆ (ಜಾರುಮೆಟ್ಟು ಹಾಕಿಕೊಂಡು) ಜಾರುವವ(ಳು).

ice-water
ನಾಮವಾಚಕ
ಐಸ್‍ನೀರು; ಮಂಜುಗಡ್ಡೆಯಿಂದ ತಯಾರಿಸಿದ ಯಾ ಮಂಜುಗಡ್ಡೆ ಹಾಕಿ ತಣ್ಣಗಾಗಿಸಿದ ನೀರು.

ice-wool
ನಾಮವಾಚಕ
ಮಂಜು ಉಣ್ಣೆ(ದಾರ); ಕ್ರೋಷೇ ಮೊದಲಾದ ಹೆಣಿಗೆ ಕೆಲಸದಲ್ಲಿ ಬಳಸುವ, ಹೊಳಪಿನ ಉಣ್ಣೆದಾರ.

ice-yacht
ನಾಮವಾಚಕ
= ice-boat(a).

iceberg
ನಾಮವಾಚಕ ಪದಗುಚ್ಛ
tip of the iceberg
  • ಹಿಮಗುಡ್ಡ; ನೀರ್ಗಲ್ಲ ಬಂಡೆ; (ಸಾಮಾನ್ಯವಾಗಿ) ಧ್ರುವ ಪ್ರದೇಶಗಳಲ್ಲಿ ಹಿಮನದಿಯಿಂದ ಬೇರ್ಪಟ್ಟು ಸಮುದ್ರದಲ್ಲಿ ತೇಲುತ್ತಿರುವ ಮಂಜುಗಡ್ಡೆಯ ಭಾರೀ ಗುಡ್ಡ. Figure: iceberg
  • (ರೂಪಕವಾಗಿ) ನಿರ್ಭಾವುಕ; ಜಡಪ್ರಕೃತಿಯವನು(ಳು); ಭಾವಶೂನ್ಯ ವ್ಯಕ್ತಿ.

  • iceblink
    ನಾಮವಾಚಕ
    ಹಿಮಪ್ರಭೆ; ಹಿಮಗಡ್ಡೆಯಿಂದ ಪ್ರತಿಫಲಿತವಾಗಿ ದಿಗಂತದಲ್ಲಿ ಕಾಣುವ ಪ್ರಭೆ.

    Iceland
    ನಾಮವಾಚಕ
    ಐಸ್ಲಂಡ್‍; ನಾರ್ವೆಗೂ ಗ್ರೀನ್‍ಲಂಡಿಗೂ ನಡುವಣ ಒಂದು ದೊಡ್ಡ ದ್ವೀಪ.

    Iceland lichen
    ನಾಮವಾಚಕ
    ಐಸ್ಲಂಡ್‍ ಕಲ್ಲುಹೂವು; ಉತ್ತರಧ್ರುವ ಪ್ರದೇಶದಲ್ಲಿ ಸಿಕ್ಕುವ, ಆಹಾರಕ್ಕೂ ಔಷಧಿಗೂ ಬಳಸುವ, ಒಂದು ಬಗೆಯ ಕಲ್ಲುಹೂವು.

    Iceland moss
    ನಾಮವಾಚಕ
    = Iceland lichen.

    Iceland poppy
    ನಾಮವಾಚಕ
    ಐಸ್ಲಂಡ್‍ ಗಸಗಸೆ; ಉತ್ತರಧ್ರುವ ಪ್ರದೇಶದಲ್ಲಿ ಬೆಳೆಯುವ ಹಳದಿ ಗಸಗಸೆ.


    logo