logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

cable-head
ನಾಮವಾಚಕ
ಕೇಬಲುವಾರ್ತೆ ಕಳಿಸುವ ಯಾ ಪಡೆವ–ಜಾಗ; ಕೇಬಲ್‍ ಕಚೇರಿ.

cable-laid
ಗುಣವಾಚಕ ಪದಗುಚ್ಛ
(ಹಗ್ಗದ ವಿಷಯದಲ್ಲಿ) ಮುಪ್ಪುರಿಯಾದ; ಒಂದೊಂದರಲ್ಲಿಯೂ ಮೂರು ಎಲೆಗಳಿರುವ; ಮೂರು ಹಗ್ಗಗಳಿಂದಾದ. cable-laid rope ಮೂರೆಳೆಹಗ್ಗ; ಮುಪ್ಪುರಿಹೊರಜಿ; ಮೂರು ಎಲೆಗಳಿರುವ ಹಗ್ಗ; ಒಂದೊಂದರಲ್ಲಿಯೂ ಮೂರು ಎಳೆಗಳಿರುವ ಹಗ್ಗ.

cablegram
ನಾಮವಾಚಕ
= 1cable(5).

cableman
ನಾಮವಾಚಕ
ಕೇಬಲ್‍–ಹಾಕುವವ, ಕೆಲಸಗಾರ.

cablese
ನಾಮವಾಚಕ
ಕೇಬಲುಭಾಷೆ; ಕೇಬ್ಲೀಸ್‍; ಪದಗಳನ್ನು ಬಿಟ್ಟುಬಿಡುವುದು, ಸೇರಿಸುವುದು, ಸಂಕ್ಷೇಪಗೊಳಿಸುವುದು ಮೊದಲಾದ ಪ್ರಯೋಗಗಳಿಂದ ಕೂಡಿದ ಭಾಷೆ.

cablet
ನಾಮವಾಚಕ
ತೆಳು, ಸಣ್ಣ–ಕೇಬಲ್ಲು; ಹತ್ತು ಅಂಗುಲಕ್ಕೆ ಕಡಿಮೆ ದಪ್ಪವಿರುವ (ಮುಖ್ಯವಾಗಿ ಮೂರೆಳೆ) ಹಗ್ಗ.

cableway
ನಾಮವಾಚಕ
ಕೇಬಲ್ಲು ಹಾದಿ; ಎರಡು ಎತ್ತರವಾದ ಗೋಪುರಗಳಿಂದ ನೇತುಹಾಕಿರುವ ಹಗ್ಗದ ಯಾ ಹಗ್ಗಗಳ ಸಹಾಯದಿಂದ ಸಾಮಾನುಗಳನ್ನು ತುಂಬಿದ ಗಾಡಿ ಯಾ ವಾಹಕಗಳನ್ನು ಎಳೆದುಕೊಳ್ಳಬಹುದಾದ ವರ್ಗಾವಣೆ ವ್ಯವಸ್ಥೆ.

cabman
ನಾಮವಾಚಕ
ಕ್ಯಾಬ್‍ಚಾಲಕ; ಕ್ಯಾಬ್‍ವಾಲಾ; ಟಾಂಗಾವಾಲಾ; ಟ್ಯಾಕ್ಸಿವಾಲಾ; ಲಾರಿ, ರೈಲು, ಟ್ಯಾಕ್ಸಿ, ಕುದುರೆ ಗಾಡಿ ಮೊದಲಾದವುಗಳನ್ನು ನಡೆಸುವವನು.

cabochon
ನಾಮವಾಚಕ ಪದಗುಚ್ಛ
ಹೊಳಪುಕೊಟ್ಟ, ಆದರೆ ಪಟ್ಟೆ ಹೊಡೆದಿಲ್ಲದ, ರತ್ನ (ಪಡಿ). en cabochon (ರತ್ನದ ವಿಷಯದಲ್ಲಿ) ಹೊಳಪು ಕೊಟ್ಟ, ಆದರೆ ಪಟ್ಟೆ ಹೊಡೆದಿಲ್ಲದ.

caboodle
ನಾಮವಾಚಕ ಪದಗುಚ್ಛ
(ಅಶಿಷ್ಟ) (ವ್ಯಕ್ತಿಗಳ ಯಾ ವಸ್ತುಗಳ ವಿಷಯದಲ್ಲಿ) ಸಾರಾಸಗಟು; ಒಟ್ಟು; ತಮಾಮು; ಎಲ್ಲ; ಇಡೀ; ಅಷ್ಟೂ. the whole caboodle = caboodle.


logo