logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

omnibus train
ನಾಮವಾಚಕ
ಸಕಲೋಪಯೋಗಿ ರೈಲು; ಎಲ್ಲ ನಿಲ್ದಾಣಗಳಲ್ಲೂ ನಿಲ್ಲುವ ರೈಲು.

omnibus volume
ನಾಮವಾಚಕ
= omnibus book.

omnicompetence
ನಾಮವಾಚಕ
  • ಸರ್ವಸಾಮರ್ಥ್ಯ; ಎಲ್ಲ ವಿಷಯಗಳಲ್ಲೂ ದಕ್ಷತೆ, ಸಾಮರ್ಥ್ಯ ಇರುವಿಕೆ.
  • ಸರ್ವಾಧಿಕಾರ; ಎಲ್ಲಾ ವ್ಯವಹಾರಗಳಲ್ಲೂ ಅಧಿಕಾರವ್ಯಾಪ್ತಿ ಹೊಂದಿರುವಿಕೆ.

  • omnicompetent
    ಗುಣವಾಚಕ
  • ಸರ್ವತೋಧಿಕಾರದ; ಸರ್ವಾಧಿಕಾರದ; ಎಲ್ಲ ವ್ಯವಹಾರಗಳಲ್ಲೂ ಅಧಿಕಾರವ್ಯಾಪ್ತಿಯುಳ್ಳ, ವ್ಯವಹರಿಸಬಲ್ಲ.
  • ಸರ್ವಸಮರ್ಥ; ಎಲ್ಲ ವಿಷಯಗಳಲ್ಲೂ ದಕ್ಷ, ಸಮರ್ಥ – ಆಗಿರುವ.

  • omnidirectional
    ಗುಣವಾಚಕ
    (ಏರಿಯಲ್‍ನ ವಿಷಯದಲ್ಲಿ) ಸರ್ವದಿಕ್ಕಿನ; ಎಲ್ಲ ದಿಕ್ಕುಗಳಿಂದಲೂ ಗ್ರಹಿಸುವ ಯಾ ಎಲ್ಲ ದಿಕ್ಕುಗಳಲ್ಲೂ ಪ್ರಸಾರ ಮಾಡುವ.

    omnifarious
    ಗುಣವಾಚಕ
    ಎಲ್ಲ ಬಗೆಯ; ಎಲ್ಲ ತೆರನ; ಸರ್ವ, ಸಕಲ–ವಿಧ(ವಾದ).

    omnific
    ಗುಣವಾಚಕ
    ಸರ್ವಸರ್ಜಕ; ಸರ್ವಸ್ರಷ್ಟಾರ; ಎಲ್ಲವನ್ನೂ ಸೃಷ್ಟಿಸುವ.

    omnigenous
    ಗುಣವಾಚಕ
    ಎಲ್ಲಾಬಗೆಗಳ; ಎಲ್ಲಾ ಜಾತಿಗಳ; ಸರ್ವಪ್ರಕಾರದ; ಸರ್ವವಿಧದ.

    omnipotence
    ನಾಮವಾಚಕ
  • ಸರ್ವಶಕ್ತಿ; ಅನಂತಶಕ್ತಿ.
  • ದೇವರು; ಭಗವಂತ
  • ಮಹತ್ತಾದ ಪ್ರಭಾವ.

  • omnipotent
    ಗುಣವಾಚಕ ಪದಗುಚ್ಛ
    the Omnipotent ಸರ್ವಶಕ್ತ; ದೇವರು; ಭಗವಂತ.
  • ಪೂರ್ಣ, ನಿರಂಕುಶ ಯಾ ನಿರುಪಾಧಿಕ–ಅಧಿಕಾರವುಳ್ಳ.
  • ಬಹಳ ಪ್ರಭಾವಶಾಲಿಯಾದ.
  • ಸರ್ವಶಕ್ತ; ಬಹಳ ಶಕ್ತಿಯುಳ್ಳ.


  • logo