logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

laver
ನಾಮವಾಚಕ
ಲೇವರ್‍; ಕಡಲ – ಪಾಚಿ, ಶೈವಲ, ಹಾವಸೆ; ಹಾಳೆಯಂಥ ಪರ್ಣಾಂಗಗಳುಳ್ಳ, ಮುಖ್ಯವಾಗಿ ಪಾರ್ಹಿರ ಅಂಬಿಲಿಕ್ಯಾಲಿಸ್‍ ಕುಲಕ್ಕೆ ಸೇರಿದ, ತಿನ್ನಬಹುದಾದ, ಬಗೆಬಗೆಯ ಕಡಲ ಪಾಚಿಗಳಲ್ಲಿ ಒಂದು.

laver
ನಾಮವಾಚಕ
  • (ಬೈಬ್‍ಲ್‍) ಪ್ರಕ್ಷಾಲನ ಪಾತ್ರೆ; ಯೆಹೂದ್ಯ ಪಾದ್ರಿಗಳು ಕೈ, ಮುಖ ಮಜ್ಜನಕ್ಕಾಗಿ ಯಾ ಶಾಸ್ತ್ರಸ್ನಾನಕ್ಕಾಗಿ ಬಳಸುವ ಗಂಗಾಳ, ಬೋಗುಣಿ, ದೊಡ್ಡ ಹಿತ್ತಾಳೆ ಪಾತ್ರೆ.
  • (ಪ್ರಾಚೀನ ಪ್ರಯೋಗ)
    1. ಸ್ನಾನದ ಯಾ ಕೈ, ಮುಖ ತೊಳೆಯುವ ಬೋಗುಣಿ.
    2. ಚಿಲುಮೆ ಬೋಗುಣಿ.
    3. ತೀರ್ಥ ಪಾತ್ರೆ.

  • laver bread
    ನಾಮವಾಚಕ
    ಲೇವರ್‍ ಬ್ರೆಡ್ಡು; ಲೇವರ್‍ ಪಾಚಿಯನ್ನು ಕುದಿಸಿ, ಓಟ್ಸ್‍ ಹಿಟ್ಟಿನಲ್ಲಿ ಅದ್ದಿ ಕರಿದ, ವೇಲ್ಸ್‍ನ ಒಂದು ಬಗೆಯ ಭಕ್ಷ್ಯ.

    lavish
    ಗುಣವಾಚಕ
  • ಯಥೇಚ್ಛ; ಯಥೇಷ್ಟ; ವಿಪುಲ; ಪುಷ್ಕಲ; ಅದ್ದೂರಿ; ದುಂದಿನ; ಅತಿ ಧಾರಾಳದ; ಧಾರಾಳವಾಗಿ ಕೊಡುವ ಯಾ ಉತ್ಪತ್ತಿ ಮಾಡುವ.
  • ಅತ್ಯಧಿಕ; ದಂಡಿ; ವಿಪರೀತ; ಅಮಿತ; ಅತಿಯಾದ; ಸಮೃದ್ಧವಾದ; ಹೇರಳ; ಯಥೇಚ್ಛ.
  • ಕೊಡುಗೈಯ; ಧಾರಾಳವಾದ; ಕೃಪಣತೆಯಿಲ್ಲದ; ಕಾರ್ಪಣ್ಯವಿಲ್ಲದ.

  • lavish
    ಸಕರ್ಮಕ ಕ್ರಿಯಾಪದ
    (ಹಣ, ಪ್ರಯತ್ನ, ರಕ್ತ, ಮೆಚ್ಚಿಕೆ, ಮೊದಲಾದವನ್ನು) ಧಾರಾಳವಾಗಿ – ಖರ್ಚು ಮಾಡು, ಚೆಲ್ಲು, ಸುರಿ, ಸುರಿಸು; ಯಥೇಚ್ಛವಾಗಿ – ಮಾಡು, ನೀಡು, ಕೊಡು.

    lavishly
    ಕ್ರಿಯಾವಿಶೇಷಣ
  • ಯಥೇಷ್ಟವಾಗಿ; ವಿಪುಲವಾಗಿ; ಪುಷ್ಕಲವಾಗಿ; ಅದ್ದೂರಿಯಾಗಿ; ಧಾರಾಳವಾಗಿ; ದುಂದಿನಿಂದ.
  • ವಿಪರೀತವಾಗಿ; ಹೇರಳವಾಗಿ; ದಂಡಿಯಾಗಿ; ಸಮೃದ್ಧವಾಗಿ; ಯಥೇಚ್ಛವಾಗಿ.

  • lavishness
    ನಾಮವಾಚಕ
  • ವಿಪುಲತೆ; ಪುಷ್ಕಲತೆ; ಅದ್ದೂರಿತನ.
  • ದುಂದುಗಾರಿಕೆ; ಅತಿ ಧಾರಾಳತನ.

  • law
    ನಾಮವಾಚಕ ಪದಗುಚ್ಛ ನುಡಿಗಟ್ಟು
  • ನ್ಯಾಯಶಾಸನ; ವಿಧಿನಿಬಂಧನೆ; ನ್ಯಾಯಸಂಹಿತೆ; ಕಾನೂನುಸಂಹಿತೆ; ಕಾನೂನು ಕಟ್ಟಳೆ; ಒಂದು ಸಮಾಜವು ಅನುಸರಿಸಲು ಬದ್ಧವೆಂದು ಅಂಗೀಕರಿಸಿರುವ, ಶಾಸನಸಭೆಯಿಂದ ರಚಿತವಾದ ಅಥವಾ ಸಂಪ್ರದಾಯರೂಢಿಯಿಂದ ಸಿದ್ಧವಾದ ನಿಯಮಗಳು, ಕಟ್ಟಳೆಗಳು, ರಿವಾಜುಗಳು ಯಾ ಅವುಗಳ ಮೂರ್ತರೂಪ: the law forbids, allows ಕಾನೂನು ನಿಷೇಧಿಸುತ್ತದೆ, ಅವಕಾಶ ಕೊಡುತ್ತದೆ. the law of the land ನಾಡಿನ ಕಾನೂನು; ದೇಶದ ನ್ಯಾಯಶಾಸನ. forbidden under the Indian law ಭಾರತದ ಕಾನೂನಿನ ಪ್ರಕಾರ ನಿಷೇಧಿಸಲಾಗಿದೆ.
  • ವಿಧಿ; ನಿಯಮ; ಕಟ್ಟಳೆ; ಕಾನೂನು; ಕಾಯಿದೆ; ನ್ಯಾಯಶಾಸನದ ಒಂದು ನಿಯಮ.
  • ಕಾನೂನುಗಳ – ನಿಯಂತ್ರಣ ಶಕ್ತಿ, ಅಧಿಕಾರ, ಪ್ರಭಾವ.
  • ಕಾನೂನುಪಾಲನೆ; ಸಮಾಜದ ನ್ಯಾಯಪರಿಪಾಲಿತ ಸ್ಥಿತಿ; ನ್ಯಾಯಪರಿಪಾಲನೆ; ನ್ಯಾಯದ ಬಗ್ಗೆ ಗೌರವ, ಭಯಭಕ್ತಿ: law and order ಕಾನೂನು ವ್ಯವಸ್ಥೆ; ನ್ಯಾಯ ಪರಿಪಾಲನೆ ಮತ್ತು ಶಿಸ್ತು; ಶಾಸನ ಮತ್ತು ವ್ಯವಸ್ಥೆ.
  • ನ್ಯಾಯಶಾಸ್ತ್ರ; ವಿಧಿಶಾಸ್ತ್ರ; ವ್ಯವಹಾರ ಧರ್ಮಶಾಸ್ತ್ರ; ಸಾಮಾಜಿಕ ವ್ಯವಸ್ಥೆಯಾಗಿ ಯಾ ಅಧ್ಯಯನದ ವಿಷಯವಾಗಿ ಕಾನೂನುಗಳ ಸಂಹಿತೆ, ಸಮೂಹ: learned in the law ನ್ಯಾಯಶಾಸ್ತ್ರ ಪ್ರವೀಣ, ಪರಿಣತ; ನ್ಯಾಯಶಾಸ್ತ್ರದಲ್ಲಿ ವಿಶೇಷ ಜ್ಞಾನ ಪಡೆದ. read law ನ್ಯಾಯಶಾಸ್ತ್ರ ಓದು; ಕಾನೂನುಗಳನ್ನು, ಕಾಯಿದೆಗಳನ್ನು ಅಭ್ಯಾಸ ಮಾಡು.
  • ನ್ಯಾಯಶಾಸ್ತ್ರದ – ಒಂದು ವಿಭಾಗ, ಶಾಖೆ; ನಿರ್ದಿಷ್ಟ ಶಾಖೆಗೆ ಸಂಬಂಧಪಟ್ಟ ಕಾನೂನುಗಳು, ಕಾಯಿದೆಗಳು: commercial law ವಾಣಿಜ್ಯ ನ್ಯಾಯಶಾಸ್ತ್ರ. law of contract ಕರಾರು – ಕಾಯಿದೆ, ನ್ಯಾಯ, ಕಾನೂನು; ಕರಾರಿಗೆ ಸಂಬಂಧಿಸಿದ ಕಾಯಿದೆ.
  • ಕಾನೂನು; ಕಟ್ಟಪ್ಪಣೆ; ನಿರ್ಬಂಧಕ್ಕೊಳಪಡಿಸುವ, ಬದ್ಧಪಡಿಸುವ, ಕಟ್ಟುಮಾಡುವ – ಶಕ್ತಿ, ಬಲ: their word is law ಅವರ ಮಾತೇ ಕಾನೂನು.
  • ವಕೀಲಿ; ನ್ಯಾಯವೃತ್ತಿ; ನ್ಯಾಯವಾದಿ ವೃತ್ತಿ, (ಸಾಮಾನ್ಯವಾಗಿ) the law ವಕೀಲ ವೃತ್ತಿ. bred to the law ವಕೀಲವೃತ್ತಿಗೆ ತರಪೇತು ಪಡೆದ.
  • (ಆಡುಮಾತು) ಪೊಲೀಸರು; ಕಾನೂನು ರಕ್ಷಕರು: the law ಪೊಲೀಸರು.
  • (ಧರ್ಮ ಯಾ ನೈತಿಕ ನ್ಯಾಯಕ್ಕೆ ಎದುರು ಪದವಾಗಿ) ಕಾನೂನುನ್ಯಾಯ; ಶಾಸನ ನ್ಯಾಯ; ಶಾಸನಸಭೆಯಿಂದ ಅಂಗೀಕೃತವಾದ ಮತ್ತು ಲೋಕ ವ್ಯವಹಾರದಲ್ಲಿ ರೂಢಿಯಿಂದ ಒಪ್ಪಿರುವ, ನ್ಯಾಯ.
  • (ಬಹುವಚನದಲ್ಲಿ) = jurisprudence.
  • ಕೋರ್ಟು ಪರಿಹಾರ; ಕಾನೂನು (ಮೂಲಕದ) ಪರಿಹಾರ.
  • ಪರಿಹಾರ ಕೋರ್ಟು; ಪರಿಹಾರ (ಕೊಡುವ) ನ್ಯಾಯಾಲಯ.
  • ಕೋರ್ಟು ವ್ಯವಹಾರ; ನ್ಯಾಯಸ್ಥಾನದಲ್ಲಿ ಕಟ್ಟಳೆ, ವ್ಯವಹಾರ: go to law ಕೋರ್ಟಿಗೆ ಹೋಗು; ಖಟ್ಲೆಹಾಕು; ದಾವಾ ಹಾಕು; ಕಾನೂನು, ಕಾಯಿದೆ – ಕ್ರಮ ಜರುಗಿಸು.
  • (ಆಟ, ಜೀವನರಂಗ, ಕಲಾವಿಧಾನ, ಮೊದಲಾದವುಗಳಲ್ಲಿನ) ನಿಯಮ; ರೀತಿ; ರಿವಾಜು; ಕ್ರಮ; ವಿಧಾನ; ನಡವಳಿಕೆ; ಕಾರ್ಯವಿಧಿ; ಕಾರ್ಯ ನಡೆಸುವ ನಿಯಮ ಯಾ ರೀತಿ.
  • ಪ್ರಕೃತಿ, ನಿಸರ್ಗ – ನಿಯಮ; ನಿಸರ್ಗದ ಕ್ರಮಬದ್ಧತೆ, ನಿಯತತೆ; ಪ್ರಕೃತಿಯ ಘಟನೆಗಳಲ್ಲಿನ ನಿಯಮಾನುಸರಣೆ: where they saw chance, we see law ಅವರು ಆಕಸ್ಮಿಕ ಎಂದು ಕಂಡುದರಲ್ಲಿ ನಾವು (ಪ್ರಕೃತಿ) ನಿಯಮವನ್ನು ಕಾಣುತ್ತೇವೆ. the law of nature ಪ್ರಕೃತಿ ನಿಯಮ.
  • ಸೂತ್ರ; ವಿಧಿ; ನಿಮಯ; (ಮುಖ್ಯವಾಗಿ) ನಿರ್ದಿಷ್ಟ ಪರಿಸ್ಥಿತಿಗಳ, ಘಟನೆಗಳ ಸರಣಿಯಲ್ಲಿ ಕಂಡುಬರುವ, ನಿಯತವಾದ ಅನುಕ್ರಮವನ್ನು ಯಾ ಸಂಬಂಧವನ್ನು ತಿಳಿಸುವ, ಸೂತ್ರಬದ್ಧವಾದ ಯಾ ವಿವರಣಾತ್ಮಕವಾದ ನಿರೂಪಣೆ: the law of gravitation ಗುರುತ್ವಾಕರ್ಷಣ ಸೂತ್ರ. Newton’s law ನ್ಯೂಟನ್ನನ ಸೂತ್ರ, ನಿಯಮ.
  • ದೇವಾದೇಶಗಳು; ಧರ್ಮಸಂಹಿತೆ; ಬೈಬಲ್ಲಿನಲ್ಲಿ ಯಾ ಇತರ ಮೂಲಗಳಲ್ಲಿ ಪ್ರಕಟವಾದ ದೈವಾಜ್ಞೆಗಳು, ಭಗವದುಪದೇಶಗಳು.
  • (ಮೋಸಿಸ್ಸನು ರಚಿಸಿದುದೆಂದು ಪ್ರತೀತಿಯುಳ್ಳ) ಬೈಬಲ್ಲಿನ ಹಳೆಯ ಒಡಂಬಡಿಕೆಯ ಮೊದಲ ಐದು ಪ್ರಕರಣಗಳ – ವಿಧಿಗಳು, ಉಪದೇಶಗಳು: Law of Moses ಮೋಸಿಸ್ಸನ ವಿಧಿಗಳು.
  • ನ್ಯಾಯಪದ್ಧತಿ; ನ್ಯಾಯವ್ಯವಸ್ಥೆ: court of law ನ್ಯಾಯಸ್ಥಾನ; ನ್ಯಾಯಾಲಯ; ನ್ಯಾಯ ಕಚೇರಿ.
  • ( ಆಖ್ಯಾತಕ ಪ್ರಯೋಗ) (ತೀರ್ಪುಗಳು, ತೀರ್ಮಾನಗಳು, ಅಭಿಪ್ರಾಯಗಳು, ಮೊದಲಾದವುಗಳ ವಿಷಯದಲ್ಲಿ) ಒಪ್ಪಿಗೆಯಾದುದು; ಅಂಗೀಕೃತವಾದುದು; ಸಮ್ಮತವಾದುದು; ಸಂಗತವಾದದ್ದು; ಸರಿಯಾದದ್ದು: good law ಸಂಗತ ಕಾನೂನುಗಳಿಂದ ಸಿದ್ಧಿಸಿದ್ದು. bad law ಸಂಗತ ಕಾನೂನುಗಳಿಂದ ಸಿದ್ಧವಾಗದ್ದು. it may be commonsense, but it is not law ವ್ಯವಹಾರದೃಷ್ಟಿಯಿಂದ ಅದು ಸರಿ, ಆದರೆ ಕಾಯಿದೆ ದೃಷ್ಟಿಯಿಂದಲ್ಲ; ಅದು ವ್ಯವಹಾರಸಮ್ಮತವಾಗಿರಬಹುದು, ಆದರೆ ಕಾನೂನುಸಮ್ಮತವಲ್ಲ.
  • ಕಾನೂನರಿವು; ನ್ಯಾಯಶಾಸ್ತ್ರಜ್ಞಾನ; ಕಾನೂನು ತಿಳಿವಳಿಕೆ.
  • (ಕ್ರೀಡೆ) ಬೇಟೆಪ್ರಾಣಿಗೆ ಯಾ ಪಂದ್ಯದಲ್ಲಿ ಸ್ಪರ್ಧಿಗೆ ಕೊಟ್ಟ ರಿಯಾಯತಿ, ಕಾಲಾವಕಾಶ, ಪ್ರಾರಂಭಾನುಕೂಲ: the fox having obtained a little law of its pursuers, slips away ಬೆನ್ನಟ್ಟಿದವರಿಂದ ಸ್ವಲ್ಪ ಕಾಲಾವಕಾಶ (ರಿಯಾಯಿತಿ) ಪಡೆದು ನರಿ ತಪ್ಪಿಸಿಕೊಂಡು ಹೋಗುತ್ತದೆ.
  • (ಸಾಮಾನ್ಯ ಅರ್ಥದಲ್ಲಿ) ಸವಡು; ಕಾಲರಿಯಾಯಿತಿ; ಕಾಲಾವಕಾಶ; ಬಿಡುವು; ವಿರಾಮ; ವ್ಯವಧಾನ; ರಿಯಾಯಿತಿಯಾಗಿ ಕೊಟ್ಟ ಹೆಚ್ಚು ಅವಧಿ.

  • law
    ಭಾವಸೂಚಕ ಅವ್ಯಯ
    lawk ಎನ್ನುವುದರ ರೂಪಾಂತರ.

    law agent
    ನಾಮವಾಚಕ
    (ಸ್ಕಾಟ್ಲಂಡ್‍) = solicitor.


    logo