logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

impudently
ಕ್ರಿಯಾವಿಶೇಷಣ
  • ನಾಚಿಕೆಯಿಲ್ಲದೆ ಮುಂದೆ ಬಿದ್ದು ಹೋಗಿ.
  • ನಿರ್ಲಜ್ಜನಾಗಿ; ನಾಚಿಕೆ ಬಿಟ್ಟು.
  • ಸೊಕ್ಕಿನಿಂದ; ಔದ್ಧತ್ಯದಿಂದ.

  • impudicity
    ನಾಮವಾಚಕ
    ನಾಚಿಕೆಗೇಡಿತನ; ನಿರ್ಲಜ್ಜತೆ; ಮಾನಮರ್ಯಾದೆ, ನಾಚಿಕೆ ಹೇಸಿಕೆ ಇಲ್ಲದಿರುವುದು.

    impugn
    ಸಕರ್ಮಕ ಕ್ರಿಯಾಪದ
    (ಹೇಳಿಕೆ, ಕಾರ್ಯ, ಮೊದಲಾದವನ್ನು) ಮಾತಿನಿಂದ ಪ್ರತಿಭಟಿಸು; ವಾಚಾ – ಆಕ್ಷೇಪಿಸು, ಖಂಡಿಸು.

    impugnable
    ಗುಣವಾಚಕ
    (ಹೇಳಿಕೆ, ಕಾರ್ಯ, ಮೊದಲಾದವುಗಳ ವಿಷಯದಲ್ಲಿ) ಖಂಡನಾರ್ಹ; ಆಕ್ಷೇಪಾರ್ಹ; ಪ್ರತಿಭಟಿಸಬಹುದಾದ.

    impugnment
    ನಾಮವಾಚಕ
    ಖಂಡನೆ; ಪ್ರತಿಭಟನೆ; ಆಕ್ಷೇಪ; (ಹೇಳಿಕೆ, ಕಾರ್ಯ, ಮೊದಲಾದವನ್ನು) ಮಾತಿನಿಂದ, ವಾಚಾ – ಪ್ರತಿಭಟಿಸುವುದು.

    impuissance
    ನಾಮವಾಚಕ
    ದುರ್ಬಲತೆ; ಅಶಕ್ತತೆ; ನಿರ್ವೀರ್ಯತೆ; ಬಲಹೀನತೆ; ಶಕ್ತಿಹೀನತೆ.

    impuissant
    ಗುಣವಾಚಕ
    ದುರ್ಬಲ; ಅಶಕ್ತ; ನಿರ್ವೀರ್ಯ; ಬಲವಿಲ್ಲದ; ಶಕ್ತಿಯಿಲ್ಲದ: a prey to impuissant enemies ದುರ್ಬಲರಾದ ಶತ್ರುಗಳಿಗೆ ತುತ್ತಾದ.

    impulse
    ನಾಮವಾಚಕ
  • ಮುಂದೊತ್ತುವುದು; ಥಟ್ಟನೆ ನೂಕುವುದು; ಚಿಮ್ಮುವಿಕೆ; ರಭಸದ ನೂಕಲು.
  • ಒಳಪ್ರೇರಣೆ; ಅಂತಃಪ್ರೇರಣೆ; ಅಂತಃಪ್ರಚೋದನೆ; ಮನಸ್ಸಿನ ಪ್ರಚೋದನೆ; ಆಂತರಿಕ ಆವೇಗ.
  • (ಭೌತವಿಜ್ಞಾನ) ಆವೇಗ; ಅತ್ಯಲ್ಪಕಾಲ ಪ್ರಯೋಗವಾಗಿ ಸಾಂತ ಆವೇಗ ವ್ಯತ್ಯಾಸವನ್ನುಂಟುಮಾಡುವ ಅಧಿಕ ಪ್ರಮಾಣದ ಬಲ.
  • (ಸ್ನಾಯುವಿನಲ್ಲಿ ಕ್ರಿಯೆಯನ್ನೋ ತಾಟಸ್ಥ್ಯವನ್ನೋ ಉಂಟುಮಾಡುವಂತೆ ನರದಲ್ಲಿ ಆಗುವ) ಉದ್ರೇಕ(ದ ಅಲೆ).
  • ಉದ್ರೇಕ; ಕೆರಳುವಿಕೆ; ಮನಸ್ಸು ಉದ್ರೇಕಗೊಳ್ಳುವುದು.
  • (ಯೋಚನೆ ಮಾಡದೆ, ಥಟ್ಟನೆ ಕೆಲಸ ಮಾಡುವ) ಹಠಾತ್ತಾದ ಪ್ರವೃತ್ತಿ: did it on (an) impulse ಹಠಾತ್‍ ಪ್ರವೃತ್ತಿಯಿಂದ ಮಾಡಿದನು.
  • ಚಾಲಕಶಕ್ತಿ; ಪ್ರಚೋದನೆ; ಯಾವುದನ್ನೇ ಚಲಿಸುವಂತೆ ಮಾಡುವ ಶಕ್ತಿ.

  • impulse buying
    ನಾಮವಾಚಕ
    ತಿಕ್ಕಲು ಕೊಳ್ಳಿಕೆ; ಮೊದಲು ಕೊಳ್ಳಬೇಕೆಂಬ ಮನಸ್ಸಿರದೆ ಆಮೇಲೆ ಇದ್ದಕ್ಕಿದ್ದಂತೆ ತಿಕ್ಕಲು ಹತ್ತಿ, ವಸ್ತುಗಳನ್ನು ಕೊಳ್ಳುವುದು; ಹಠಾತ್‍ ಕೊಳ್ಳುವಿಕೆ.

    impulsion
    ನಾಮವಾಚಕ
  • ಥಟ್ಟನೆ ತಳ್ಳುವುದು; ಮುಂದೊತ್ತುವುದು; ಮುನ್ನೂಕಲು; ಚಿಮ್ಮಿಕೆ.
  • ಒಳಪ್ರೇರಣೆ; ಅಂತಃಪ್ರಚೋದನೆ; ಮನಸ್ಸಿನ ಪ್ರಚೋದನೆ; ಆಂತರಿಕ ಆವೇಗ.
  • ಚಾಲಕ ಶಕ್ತಿ; ಮುನ್ನೂಕುವ, ಚಾಲನಗೊಳಿಸುವ – ಶಕ್ತಿ.


  • logo