logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

capercaillie
ನಾಮವಾಚಕ
ಟೆಟ್ರಓ ಯೂರಗಲಸ್‍ ಕುಲದ, ಯುರೋಪಿನ, ಕೋಳಿಜಾತಿಯ ಒಂದು ದೊಡ್ಡ ಹಕ್ಕಿ.

capercailzie
ನಾಮವಾಚಕ
= capercaillie.

caperer
ನಾಮವಾಚಕ
  • ನೆಗೆದಾಡುವವ; ಕುಣಿದಾಡುವವ; ಕುಪ್ಪಳಿಗ.
  • ಕ್ಯಾಡಿಸ್‍ ನೊಣ; ವಕ್ರವಾಗಿ ಹಾರಾಡುವ ನೊಣ.

  • capeskin
    ನಾಮವಾಚಕ
    ಕೇಪ್‍ಚರ್ಮ; ದಕ್ಷಿಣ ಆಹ್ರಿಕದ ಕುರಿ ತೊಗಲಿನಿಂದ ತಯಾರಿಸಿದ, ಮೃದು ಚರ್ಮ.

    capful
    ನಾಮವಾಚಕ ನುಡಿಗಟ್ಟು
    ಟೋಪಿತುಂಬ; ಕುಲಾವಿ ಭರ್ತಿ. a capful of wind (ನೌಕಾಯಾನ) ಥಟ್ಟನೆ ಬೀಸಿ ನಿಲ್ಲುವ ಗಾಳಿ; ಹೊಯ್ಗಾಳಿ.

    capias
    ನಾಮವಾಚಕ
    (ನ್ಯಾಯಶಾಸ್ತ್ರ) ದಸ್ತಗಿರಿ ಹುಕುಂ; ದಸ್ತಗಿರಿ–ಆಜ್ಞೆ, ವಾರಂಟು; ಕೈದು ಆಜ್ಞೆ; ಬಂಧನದ ಆಜ್ಞೆ.

    capillarity
    ನಾಮವಾಚಕ
  • ಲೋಮನಾಳತೆ; ಬಹು ಸಣ್ಣ ರಂಧ್ರದ ನಾಳವಾಗಿರುವಿಕೆ.
  • (ಭೌತವಿಜ್ಞಾನ) ಲೋಮನಾಳಕರ್ಷಣ; ಲೋಮನಾಳಕ್ರಿಯೆ; ಯಾವುದೇ ದ್ರವವು ಒಂದು ಘನಕಾಯಕ್ಕೆ ತಗುಲಿಕೊಂಡಿರುವಾಗ, ಆ ದ್ರವದ ಅಸಂಚಕ ಯಾ ಸುಸಂಚಕ ಗುಣಗಳನ್ನು ಅವಲಂಬಿಸಿ ದ್ರವದ ತಲವು ಕಾಯದ ಪಕ್ಕದಲ್ಲಿ ಮೇಲೇರುವ ಯಾ ಕೆಳಗಿಳಿಯುವ ಕ್ರಿಯೆ; ಲೋಮನಾಳವನ್ನು ದ್ರವದಲ್ಲಿ ಅದ್ದಿದಾಗ ಅದರ ಒಳಗಡೆಯ ದ್ರವದ ತಲವು ಹೊರಗಿರುವುದಕ್ಕಿಂತ ಮೇಲ್ಗಡೆ ಯಾ ಕೆಳಗಡೆ ಇರುವುದು.

  • capillary
    ನಾಮವಾಚಕ
  • ಲೋಮನಾಳ; ಬಹುಸಣ್ಣ ರಂಧ್ರದ ನಾಳ.
  • (ಅಂಗರಚನಾಶಾಸ್ತ್ರ) ಲೋಮರಕ್ತನಾಳ; ಲೋಮಧಮನಿ; ಅಪಧಮನಿಯು ಕೊನೆಗೊಂಡು ಅಭಿಧಮನಿ ಪ್ರಾರಂಭವಾಗುವ ಮುನ್ನ ಕಾಣಬರುವ, ಕೂದಲಿಗಿಂತ ತೆಳುವಾದ ರಕ್ತನಾಳ.

  • capillary
    ಗುಣವಾಚಕ
  • (ನಾಳದ ವಿಷಯದಲ್ಲಿ) ಸೂಕ್ಷ್ಮವಾದ ಯಾ ಕೂದಲಿನಷ್ಟು–ವ್ಯಾಸವುಳ್ಳ.
  • (ಅಂಗರಚನಾಶಾಸ್ತ್ರ) ಲೋಮಧಮನಿಯ; ಲೋಮಧಮನಿಯಂಥ.
  • (ಭೌತವಿಜ್ಞಾನ) ಲೋಮನಾಳಾಕರ್ಷಣದ; ಲೋಮನಾಳಕ್ರಿಯೆಯ.
  • ಕೂದಲಿನ; ಲೋಮದ.
  • ಕೂದಲಂತಿರುವ; ಲೋಮ ಸದೃಶ.
  • ಕೂದಲಿನಷ್ಟು–ಸೂಕ್ಷ್ಮವಾದ, ತೆಳುವಾದ.

  • capillary attraction
    ನಾಮವಾಚಕ
    ಲೋಮನಾಳಾಕರ್ಷಣ; ಲೋಮನಾಳಕ್ರಿಯೆಯ ಪರಿಣಾಮವಾಗಿ ಕಾಣಿಸಿಕೊಳ್ಳುವ ಆಕರ್ಷಣ.


    logo