omnibus bar, wire, etc. ವಿದ್ಯುತ್ಪ್ರವಾಹದ ಒಟ್ಟು ರಾಶಿಯೆಲ್ಲ ಹರಿಯುವ ಕಂಬಿ, ತಂತಿ, ಮೊದಲಾದವು.
ಬಹೂದ್ದೇಶಕ; ವಿವಿಧೋದ್ದೇಶಕ; ಒಂದೇ ಬಾರಿಗೆ ಹಲವು ಗುರಿಗಳನ್ನು, ಉದ್ದೇಶಗಳನ್ನು ಹೊಂದಿರುವ.
ಬಹ್ವಂಶಕ; ಒಂದೇ ಬಾರಿಗೆ ಹಲವು ಅಂಶಗಳನ್ನು ಒಳಗೊಂಡಿರುವ: an omnibus bill ಬಹ್ವಂಶಕ ಮಸೂದೆ; ಹಲವು ಅಂಶಗಳನ್ನೊಳಗೊಂಡ ಠರಾವು. an omnibus clause ಬಹ್ವಂಶಕ ಕಲಮು; ಅನೇಕ ಅಂಶಗನ್ನೊಳಗೊಂಡ ಕಲಮು.
omnibus book
ನಾಮವಾಚಕ
(ಸಾಮಾನ್ಯವಾಗಿ ಒಬ್ಬನೇ ಲೇಖಕನ ಹಲವು ಕಥೆಗಳು, ನಾಟಕಗಳು, ಮೊದಲಾದವನ್ನುಳ್ಳ ಎಲ್ಲರೂ ಕೊಳ್ಳಲು ಅನುಕೂಲಿಸುವಂತೆ ಅಗ್ಗದ ಬೆಲೆ ಹಾಕಿ ಪ್ರಕಟಿಸಿದ) ಗ್ರಂಥ ಸಂಪುಟ; ಕೃತಿಸಂಪುಟ.
omnibus box
ನಾಮವಾಚಕ
(ಸಂಗೀತ, ನಾಟಕ, ಮೊದಲಾದವುಗಳ ಶಾಲೆಯ ಕುಳಿಯಲ್ಲಿಯ ಅಂತಸ್ತುಗಳಲ್ಲಿ) ಹಲವು ಮಂದಿ ಚಂದಾದಾರರು ಒಟ್ಟಿಗೆ ಬಳಸುವ ದೊಡ್ಡ ಅಂಕಣ, ವಿಭಾಗ.