ವಾಷ್‍ಬೇಸಿನ್ನು; (ಕೈ, ಮುಖ) ತೊಳೆಯುವ ಬೋಗುಣಿ, ತೊಟ್ಟಿ, ಯಾ ಪಾತ್ರೆ.
lavage
ನಾಮವಾಚಕ
(ವೈದ್ಯಶಾಸ್ತ್ರ) ತೊಳೆತ; (ಪ್ರಯೋಗ)ಕ್ಷಾಲನ; ದೇಹದೊಳಗಿನ ಕೋಶವನ್ನು, ಉದಾಹರಣೆಗೆ ದೊಡ್ಡಕರುಳು ಯಾ ಹೊಟ್ಟೆಯನ್ನು, ಔಷಧ ದ್ರವದಿಂದ ಯಾ ನೀರಿನಿಂದ ತೊಳೆಯುವುದು.
lavation
ನಾಮವಾಚಕ
(ಔಪಚಾರಿಕ) ತೊಳೆಯುವುದು; ತೊಳೆತ; ಕ್ಷಾಲನ; ಪ್ರಕ್ಷಾಲನ.
lavatorial
ಗುಣವಾಚಕ
(ಮುಖ್ಯವಾಗಿ ಹಾಸ್ಯದ ವಿಷಯದಲ್ಲಿ) ಕಕ್ಕಸಿನ; ಶೌಚಾಲಯದ; ಕಕ್ಕಸಿಗೆ ಸಂಬಂಧಿಸಿದ ಯಾ ಅವುಗಳ ಬಳಕೆಗೆ ಸಂಬಂಧಿಸಿದ.
lavatory
ನಾಮವಾಚಕ
ಕಕ್ಕಸು; ಪಾಯಿಖಾನೆ; ಮಲಮೂತ್ರಗಳನ್ನು ವಿಸರ್ಜಿಸುವ, ಸಾಮಾನ್ಯವಾಗಿ ಅವುಗಳನ್ನು ಹೊರ ಸಾಗಿಸಲು ಹರಿಯುವ ನೀರಿನ ಏರ್ಪಾಟಿರುವ ಪಾತ್ರೆ ಇರುವ–
ಕೋಣೆ; ಶೌಚದ ಕೋಣೆ.
ಮನೆ; ಶೌಚಾಲಯ.
ವಿಭಾಗ.
(ಅಮೆರಿಕನ್ ಪ್ರಯೋಗ) ಕೈ, ಮುಖ ತೊಳೆಯುವ ವ್ಯವಸ್ಥೆ ಇರುವ ಕೋಣೆ, ವಿಭಾಗ.
lavatory paper
ನಾಮವಾಚಕ
= toilet paper.
lave
ಸಕರ್ಮಕ ಕ್ರಿಯಾಪದ
(ಸಾಹಿತ್ಯಕ)
(ಮೈ) ತೊಳೆ; ಸ್ನಾನಮಾಡಿಸು; ಮೀಯಿಸು.
(ಹೊಳೆ ಮೊದಲಾದವು)
ಹರಿ; ಪ್ರವಹಿಸು.
(ಒಂದಕ್ಕೆ) ತಾಗು; ಬಡಿ; ಹೊಡೆ; ಅಪ್ಪಳಿಸು.
lavender
ನಾಮವಾಚಕ
ನುಡಿಗಟ್ಟು
lay up in lavender ಮುಂದಿನ ಉಪಯೋಗಕ್ಕಾಗಿ – ಎಚ್ಚರಿಕೆಯಿಂದ ತೆಗೆದಿಡು, ಜೋಪಾನ ಮಾಡು.
ಲ್ಯಾವಿಂಡರ್ (ಸಸ್ಯ): ಸುವಾಸನಾ ದ್ರವ್ಯಕ್ಕಾಗಿ ಬೆಳೆಯುವ, ನೀಲಿ, ನೇರಳೆ ಯಾ ಗುಲಾಬಿ ಬಣ್ಣದ ಸುಗಂಧಭರಿತ ಹೂಗಳನ್ನು ಬಿಡುವ, ಲವಂಡುಲ ಕುಲಕ್ಕೆ ಸೇರಿದ, ನಿತ್ಯಹರಿದ್ವರ್ಣದ ಹಲವಾರು ಚಿಕ್ಕಪೊದೆಗಳಲ್ಲಿ ಒಂದು.
(ಬಟ್ಟೆ, ಲಿನನ್, ಮೊದಲಾದವುಗಳಿಗೆ ಹುಳು ತಿನ್ನದಂತೆ ಸುವಾಸನೆ ಬರಿಸಲು ಬಳಸುವ) ಲ್ಯಾವಿಂಡರ್ ಸಸ್ಯದ ಒಣಗಿಸಿದ ಹೂವುಗಳು ಮತ್ತು ಕಾಂಡಗಳು ಯಾ ಕಡ್ಡಿಗಳು.
ನಸುಕೆನ್ನೀಲಿ ಬಣ್ಣ; ಸ್ವಲ್ಪ ಕೆಂಪು ಛಾಯೆಗೂಡಿದ ನಸುನೀಲಿಯ ಬಣ್ಣ.