(ವಿರಳ ಪ್ರಯೋಗ) ಗ್ರಂಥಲೋಪ ಯಾ ವಾಕ್ಯಲೋಪ; ಪುಸ್ತಕ ಮೊದಲಾದವುಗಳಲ್ಲಿ ಗ್ರಂಥಭಾಗಗಳನ್ನು ಬಿಟ್ಟುಬಿಡುವುದು.
elite
ನಾಮವಾಚಕ
(ಗುಂಪಿನಲ್ಲಿ) ಆಯ್ದಭಾಗ; ಹೆಕ್ಕಿ ತೆಗೆದದ್ದು; ಉತ್ಕೃಷ್ಟ ಭಾಗ; ಸಾರ.
ಗಣ್ಯರು.
(ಬೆರಳಚ್ಚಿನಲ್ಲಿ) ಅಕ್ಷರಗಳ ಗಾತ್ರ (ಒಂದು ಅಂಗುಲಕ್ಕೆ 12).
elitism
ನಾಮವಾಚಕ
ಪಂಚರ ಪ್ರಭುತ್ವ; ಗಣ್ಯರ ನಾಯಕತ್ವ; ಸಮಾಜದ ಒಂದು ಆಯ್ದ ಗುಂಪಿನವರು ಮಾತ್ರ ನಾಯಕತ್ವ ವಹಿಸಲು, ಪ್ರಭುತ್ವ ನಡೆಸಲು ಅರ್ಹರೆಂದು ಪ್ರತಿಪಾದಿಸುವುದು ಯಾ ಅಂಥ ನಾಯಕರಲ್ಲಿ ಮಾತ್ರ ವಿಶ್ವಾಸ ಇಡುವುದು.
ವಿದ್ಯಾಭ್ಯಾಸ, ಶಿಕ್ಷಣ, ಮೊದಲಾದವುಗಳ ಗುರಿ ಗಣ್ಯರನ್ನು, ಶ್ರೇಷ್ಠರನ್ನು ತಯಾರಿಸುವುದು ಎಂಬ ಭಾವನೆ.
ಗಣ್ಯಪ್ರಜ್ಞೆ; ತಾನು ಸಮಾಜದ ಗಣ್ಯವರ್ಗಕ್ಕೆ ಸೇರಿದವನೆಂಬ ಅರಿವು ಯಾ ಅಭಿಮಾನ.
elitist
ನಾಮವಾಚಕ
ಪಂಚರ ಪ್ರಭುತ್ವವಾದಿ; ಗಣ್ಯರ ನಾಯಕತ್ವವಾದಿ; ಸಮಾಜದ ಒಂದು ಆಯ್ದ ಗುಂಪಿನವರು ಮಾತ್ರ ನಾಯಕರಾಗಬಲ್ಲರೆಂದು, ಪ್ರಭುತ್ವ ನಡೆಸಬಲ್ಲರೆಂದು ಪ್ರತಿಪಾದಿಸುವವನು.
ಸಂಜೀವಿನಿ; ಪರಮೌಷಧ; ರಾಜೌಷಧ; ದಿವ್ಯೌಷಧ; ಸರ್ವೌಷಧ; ಎಲ್ಲ ರೋಗಗಳಿಗೂ ಮದ್ದು.
(ಔಷಧಶಾಸ್ತ್ರ) ಸುಗಂಧ ದ್ರಾವಣ; ಔಷಧವಾಗಿ ಯಾ ರುಚಿಕೊಡಲು ಬಳಸುವ ಆಲ್ಕಹಾಲ್, ನೀರು ಮತ್ತು ಪರಿಮಳ ದ್ರವ್ಯಗಳ ಮಿಶ್ರಣ.
Elizabethan
ನಾಮವಾಚಕ
ಒಂದನೆಯ ಯಾ ಎರಡನೆಯ ಇಲಿಜಬೆತ್ ರಾಣಿಯ ಕಾಲದವನು.
ಆ ಕಾಲದ ಲೇಖಕ, ಗ್ರಂಥಕರ್ತ.
Elizabethan
ಗುಣವಾಚಕ
ಒಂದನೆಯ ಯಾ ಎರಡನೆಯ ಎಲಿಜಬೆತ್ ರಾಣಿಯ ಕಾಲದ.
elk
ನಾಮವಾಚಕ
ಎಲ್ಕ್; ಉತ್ತರ ಯೂರೋಪ್ ಮತ್ತು ಉತ್ತರ ಅಮೆರಿಕದ ಪ್ರಾಂತಗಳಲ್ಲಿನ, ಆಲ್ಸಿಸ್ ಆಲ್ಸಿಸ್ ಕುಲದ ಹೆಜ್ಜಿಂಕೆ.
ಜಿಂಕೆ, ಸಾರಂಗ, ಕಡವೆ, ಚಿಗರಿ, ಮೊದಲಾದ ಜಾತಿಗಳ ಗ.
(ಅಮೆರಿಕನ್ ಪ್ರಯೋಗ) (Elk) ಎಲ್ಕ್ ಎಂಬ ಸಾಮಾಜಿಕ ಮತ್ತು ಧಾರ್ಮಿಕ ಸಂಸ್ಥೆಯೊಂದರ ಸದಸ್ಯ.
elk-hound
ನಾಮವಾಚಕ
ಎಲ್ಕ್ ಬೇಟೆ ನಾಯಿ; ಸ್ಕ್ಯಾಂಡಿನೇವಿಯದ ದಪ್ಪಚರ್ಮವುಳ್ಳ ದೊಡ್ಡ ಬೇಟೆ ನಾಯಿ.
ell
ನಾಮವಾಚಕ
ಪದಗುಚ್ಛ
ನುಡಿಗಟ್ಟು
(ಚರಿತ್ರೆ) ಎಲ್; ಉದ್ದದ ಒಂದು ಅಳತೆ. English ell 45 ಅಂಗುಲ. give him an inch and he’ll take an ell ಬೆರಳು ತೋರಿಸಿದರೆ ಹಸ್ತ ನುಂಗುತ್ತಾನೆ; ಇತ್ತಿತ್ತ ಬಾ ಎಂದರೆ ಇದ್ದದ್ದನ್ನೇ ಕಿತ್ತುಕೊಂಡ.