logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

Cape doctor
ನಾಮವಾಚಕ
(ದಕ್ಷಿಣ ಆಹ್ರಿಕದ) ಬಿರುಸು ಆಗ್ನೇಯ ಗಾಳಿ; ರಭಸವಾಗಿ ಬೀಸುವ ಆಗ್ನೇಯ ಮಾರುತ.

Cape Dutch
ನಾಮವಾಚಕ
ದಕ್ಷಿಣ ಆಹ್ರಿಕದ ಡಚ್‍ ಭಾಷೆ; ಆಹ್ರಿಕಾನ್ಸ್‍ ಭಾಷೆ.

Cape gooseberry
ನಾಮವಾಚಕ
(ಸಸ್ಯವಿಜ್ಞಾನ) ಕೇಪ್‍ ಗೂಸ್‍ಬೆರಿ; ಹೈಸಾಲಿಸ್‍ ಪರೂವಿಯಾನ ಕುಲದ, ಹೃದಯಾಕಾರದ, ಕೂದಲು ತುಂಬಿದ ಎಲೆಗಳುಳ್ಳ, ನಸು ಹಳದಿ ಹೂಗಳನ್ನೂ, ತಿನ್ನಬಲ್ಲ ಹಳದಿ ದುಂಡು ಹಣ್ಣುಗಳನ್ನೂ ಬಿಡುವ, ಉಷ್ಣವಲಯದ ಒಂದು ಗಿಡ.

Cape smoke
ನಾಮವಾಚಕ
(ಚರಿತ್ರೆ) ದಕ್ಷಿಣ ಆಹ್ರಿಕದ ಬ್ರಾಂದಿ.

Cape wine
ನಾಮವಾಚಕ
ಕೇಪ್‍ವೈನು; ದಕ್ಷಿಣ ಆಹ್ರಿಕದ ಕೇಪ್‍ ಪ್ರಾಂತದಲ್ಲಿ ತಯಾರಾಗುವ ವೈನು.

caped
ಗುಣವಾಚಕ
ಜುಬ್ಬ ತೊಟ್ಟಿರುವ; ಮೇಲಂಗಿಯುಳ್ಳ.

capella
ನಾಮವಾಚಕ
(ಖಗೋಳ ವಿಜ್ಞಾನ) ಕಪೆಲ ನಕ್ಷತ್ರ; ಬ್ರಹ್ಮ ಹೃದಯ; ಉತ್ತರ ದಿಕ್ಕಿನ ಆರೈಗ ನಕ್ಷತ್ರಪುಂಜದಲ್ಲಿರುವ ಒಂದು ನಕ್ಷತ್ರ.

caper
ನಾಮವಾಚಕ
  • (ದಕ್ಷಿಣ ಯೂರೋಪಿನ) ಮುಳ್ಳುಪೊದೆ; ಮುಳ್ಳುಗಂಟಿ.
  • (ಬಹುವಚನದಲ್ಲಿ) ಉಪ್ಪಿನಕಾಯಿ ಹಾಕಿದ ಇದರ ಕಾಯಿ ಮತ್ತು ಮೊಗ್ಗುಗಳು.

  • caper
    ನಾಮವಾಚಕ ನುಡಿಗಟ್ಟು
    cut a caper ವಿಚಿತ್ರವಾಗಿ ವರ್ತಿಸು; ಯಾ ಹುಚ್ಚುಹುಚ್ಚಾಗಿ ಆಡು.
  • ಕುಪ್ಪಳಿಕೆ; ಖುಷಿನೆಗೆತ; ನೆಗೆದಾಟ; ಕುಣಿದಾಟ.
  • (ರೂಪಕವಾಗಿ) ವಿಚಿತ್ರ - ಚರ್ಯೆ, ವರ್ತನೆ; ಹುಚ್ಚಾಟ; ಹುಚ್ಚು ಕುಣಿತ.
  • (ಅಶಿಷ್ಟ) ಯಾವುದೇ ಚಟುವಟಿಕೆ ಯಾ ಕೆಲಸ.

  • caper
    ಅಕರ್ಮಕ ಕ್ರಿಯಾಪದ
    ನೆಗೆದಾಡು; ಕುಣಿದಾಡು; ಕುಣಿದು ಕುಪ್ಪಳಿಸು.


    logo