logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

actressy
ಗುಣವಾಚಕ
ನಟಿಯಂಥ; ವೃತ್ತಿನಿರತ ನಟಿಯ ಯಾ ನಟಿಯನ್ನು ಹೋಲುವ.

ACTU
ಸಂಕ್ಷಿಪ್ತ
Australian Council of Trade Unions.

actual
ಗುಣವಾಚಕ
  • ವಾಸ್ತವಿಕ; ಯಥಾರ್ಥ; ನಿಜವಾದ; ಪ್ರತ್ಯಕ್ಷವಾದ.
  • ಪ್ರಸ್ತುತ; ಈಗಿನ; ನಡೆಯುತ್ತಿರುವ; ಸದ್ಯದ; ಚಾಲ್ತಿಯ.

  • actualise
    ಸಕರ್ಮಕ ಕ್ರಿಯಾಪದ
    = actualize.

    actualism
    ನಾಮವಾಚಕ
  • ಸಚೇತನವಾದ; ಜಗತ್ತು ಜಡವಲ್ಲ, ಚೇತನಾತ್ಮಕವಾದುದು ಯಾ ಕ್ರಿಯಾತ್ಮಕವಾದುದು ಎಂಬ ವಾದ.
  • ವೇದನಾಸಂಘಾತವಾದ; ಆತ್ಮವೆಂಬುದು ಸಂವೇದನ ಪರಂಪರೆಗಳ ಮೊತ್ತವೇ ವಿನಾ ಬೇರೊಂದು ಸ್ವತಂತ್ರ ವಸ್ತುವಲ್ಲ ಎಂಬ ವಾದ.

  • actuality
    ನಾಮವಾಚಕ
  • ವಾಸ್ತವತೆ; ಯಥಾರ್ಥತೆ.
  • (ಬಹುವಚನ) ವಸ್ತುಸ್ಥಿತಿಗಳು; ವಿದ್ಯಮಾನಗಳು.
  • (ವರ್ಣನೆ ಯಾ ಚಿತ್ರಣಗಳ ವಿಷಯದಲ್ಲಿ) ವಾಸ್ತವಿಕತೆ; ಯಥಾರ್ಥತೆ.

  • actualization
    ನಾಮವಾಚಕ
  • ಯಥಾರ್ಥೀಕರಣ; ವಾಸ್ತವೀಕರಣ; ವಾಸ್ತವವನ್ನಾಗಿ ಮಾಡುವುದು.
  • ಕಾರ್ಯತಃ ಸಾಧಿಸುವಿಕೆ; ವಾಸ್ತವವಾಗಿ ಉಂಟು ಮಾಡುವುದು.

  • actualize
    ಸಕರ್ಮಕ ಕ್ರಿಯಾಪದ
  • ವಾಸ್ತವೀಕರಿಸು; ಯಥಾರ್ಥಗೊಳಿಸು.
  • ಕಾರ್ಯತಃ ಸಾಧಿಸು.
  • ಕಣ್ಣಿಗೆ ಕಟ್ಟುವಂತೆ ವರ್ಣಿಸು ಯಾ ನಿರೂಪಿಸು.

  • actually
    ಕ್ರಿಯಾವಿಶೇಷಣ
  • ವಾಸ್ತವವಾಗಿ; ಯಥಾರ್ಥವಾಗಿ.
  • ಪ್ರಸ್ತುತದಲ್ಲಿ; ಸದ್ಯದಲ್ಲಿ.
  • ನಿಜಕ್ಕೂ; ನಿಜವಾಗಿಯೂ: she actually spoke Latin ಅವಳು ನಿಜವಾಗಿಯೂ ಲ್ಯಾಟಿನ್‍ನಲ್ಲಿ ಮಾತನಾಡಿದಳು.

  • actuarial
    ಗುಣವಾಚಕ
    ವಿಮಾ ಗಣಿತದ.


    logo