ಆಮ್ಲೆಟ್; ಮೊಟ್ಟೆ ದೋಸೆ; ತತ್ತಿ ದೋಸೆ; ಕಡೆದ ಮೊಟ್ಟೆಯ ಲೋಳೆಯನ್ನು ಬೆಂದ ಕಾವಲಿಯ ಮೇಲೆ ಹಾಕಿಸುರುಳಿ ಸುತ್ತಿ (ಅನೇಕ ವೇಳೆ ಇತರ ಪದಾರ್ಥಗಳಿಂದ ರುಚಿಕಟ್ಟಿ) ಮಾಡಿದ ಒಂದು ಬಗೆಯ ದೋಸೆ.
cannot make an omelette without breaking eggs ಹಿಟ್ಟು ಬೀಸದೆ ರೊಟ್ಟಿಯಾಗದು; ಬೆಣ್ಣೆ ಕಾಯಿಸದೆ ತುಪ್ಪವಾಗದು; (ಉದ್ದೇಶಿಸಿದ್ದನ್ನು ಪಡೆಯಲು ಯಾವುದನ್ನಾದರೂ ಸ್ವಲ್ಪ ತ್ಯಾಗ ಮಾಡಬೇಕು ಎಂಬರ್ಥದಲ್ಲಿ)
savoury omelette ರುಚಿಕಟ್ಟಿದ ಆಮ್ಲೆಟ್.
sweet omelette ಸಿಹಿ ಆಮ್ಲೆಟ್.
omen
ನಾಮವಾಚಕ
ಶಕುನ; ನಿಮಿತ್ತ; ಒಳ್ಳೆಯದನ್ನೋ ಕೆಟ್ಟದ್ದನ್ನೋ ಸೂಚಿಸುವ ಘಟನೆ ಯಾ ವಸ್ತು.
ಭವಿಷ್ಯದ ಮೂನ್ಸೂಚನೆ: it is of good omen ಅದೊಂದು ಶುಭಶಕುನ.
omen
ಸಕರ್ಮಕ ಕ್ರಿಯಾಪದ
(ಸಾಮಾನ್ಯವಾಗಿ ಕರ್ಮಣಿಯಲ್ಲಿ ಪ್ರಯೋಗ) (ಮುಂದೆ ಆಗುವುದನ್ನು) ಮುನ್ಸೂಚಿಸು; ಭವಿಷ್ಯವನ್ನು ಸೂಚಿಸು; ಶಕುನ ತೋರು.
omened
ಗುಣವಾಚಕ
ಶಕುನ ಹೇಳಿದ; ಶಕುನ ಸೂಚಿಸಿದ.
omental
ಗುಣವಾಚಕ
ಓಮೆಂಟಮ್‍ನ ಯಾ ಅದಕ್ಕೆ ಸಂಬಂಧಿಸಿದ.
omentum
ನಾಮವಾಚಕ
(ಅಂಗರಚನಾಶಾಸ್ತ್ರ) ಓಮೆಂಟಮ್; ಜಠರವನ್ನು ಕರುಳು ಮೊದಲಾದ ಇತರ ಒಳಾಂಗಗಳೊಡನೆ ಸಂಬಂಧಿಸುವ ಪೆರಿಟೋನಿಯಮ್‍ನ ಮಡಿಕೆ.
omerta
ನಾಮವಾಚಕ
Italian(‘ಮಾಹಿಯಾ’ ತಂಡದವರ) ಮೌನಸೂತ್ರ; ಮೌನಸಂಹಿತೆ.
omicron
ನಾಮವಾಚಕ
ಅಮೈಕ್ರನ್; ಗ್ರೀಕ್ ವರ್ಣಮಾಲೆಯ ‘ಓ’ ಎಂಬ 15ನೆಯ ಅಕ್ಷರ (O, o).
ominous
ಗುಣವಾಚಕ
ಭಯಸೂಚಕ; ಭೀತಿ ಹುಟ್ಟಿಸುವ; ವಿಪತ್ತು ಯಾ ಕಷ್ಟವನ್ನು ಸೂಚಿಸುವ.
ಅಪಶಕುನದ; ಅಶುಭಕರ; ಅನಿಷ್ಟಸೂಚಕ.
(ಒಳ್ಳೆಯ ಯಾ ಕೆಟ್ಟ) ಶಕುನ ತೋರುವ; ಭವಿಷ್ಯಸೂಚಕ; ಮುನ್ಸೂಚಕ.