logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

laundrette
ನಾಮವಾಚಕ
= launderette.

laundry
ನಾಮವಾಚಕ
  • ಲಾಂಡ್ರಿ; ದೋಬಿಖಾನೆ; ಅಗಸನ, ಮಡಿವಾಳನ – ಅಂಗಡಿ; ಬಟ್ಟೆಗಳನ್ನು ಒಗೆದು ಚಲುವೆ ಮಾಡುವ ಅಂಗಡಿ, ಮನೆ.
  • ದೋಬಿ, ಅಗಸನ – ಬಟ್ಟೆಗಳು; ಒಗೆಯುವ ಬಟ್ಟೆಗಳು; ಚಲುವೆಗಾಗಿ, ಮಡಿಮಾಡಲು ಕಳುಹಿಸಿದ ಬಟ್ಟೆಗಳು.
  • ಒಗೆದ ಬಟ್ಟೆಗಳು; ಚಲುವೆಯಾದ, ಮಡಿಮಾಡಿದ – ಬಟ್ಟೆಗಳು.

  • laureate
    ಗುಣವಾಚಕ
  • ಲಾರೆಲ್‍ಧಾರಿ; ಲಾರೆಲ್‍ ಎಲೆಗಳ ದಂಡೆಯನ್ನು ಧರಿಸಿದ; ಲಾರೆಲ್‍ ಕಿರೀಟಪತ್ರ ಧರಿಸಿದ.
  • (ದಂಡೆಯ ವಿಷಯದಲ್ಲಿ) ಲಾರೆಲ್‍ ಎಲೆಯಿಂದ ಮಾಡಿದ ಯಾ ಕೂಡಿದ.
  • ಕವಿಪ್ರಶಸ್ತಿಗೆ ಅರ್ಹನಾದ; ಕವಿ ಗೌರವಕ್ಕೆ ಯೋಗ್ಯನಾದ; ಕವಿಯಾಗಿ ಲಾರೆಲ್‍ ಎಲೆಗಳ ಶಿರೋಮಾಲೆಗೆ ಯಾ ಕಿರೀಟಕ್ಕೆ ಅರ್ಹನಾದ.

  • laureate
    ನಾಮವಾಚಕ ಪದಗುಚ್ಛ
    Poet Laureate = 2laureate(2).
  • ಪ್ರಶಸ್ತಿ ವಿಜೇತ; ಶ್ರೇಷ್ಠ ಸೃಜನಶೀಲ ಯಾ ಬೌದ್ಧಿಕ ಸಾಧನೆಗಾಗಿ ಗೌರವಿಸಲ್ಪಡುವ ವ್ಯಕ್ತಿ: Nobel laureate ನೊಬೆಲ್‍ ಪ್ರಶಸ್ತಿವಿಜೇತ.
  • (Laureate) ಆಸ್ಥಾನಕವಿ; ರಾಜಕವಿ; ಬ್ರಿಟನ್ನಿನ ಅರಮನೆಯ ಸದಸ್ಯನೆಂದು ಪರಿಗಣಿಸಲ್ಪಟ್ಟು ಗೌರವ ಧನವನ್ನು ಪಡೆಯುತ್ತಾ ರಾಜ್ಯದ ವಿಶೇಷ ಸಂದರ್ಭಗಳಿಗಾಗಿ ಕವನಗಳನ್ನು ಬರೆಯುವ ಕವಿ.

  • laureateship
    ನಾಮವಾಚಕ
    ಆಸ್ಥಾನ ಕವಿಯ ಪದವಿ; ರಾಜಕವಿಯ ಹುದ್ದೆ.

    laurel
    ನಾಮವಾಚಕ ಪದಗುಚ್ಛ ನುಡಿಗಟ್ಟು
  • (ಪ್ರಾಚೀನ ಪ್ರಯೋಗ) = $^1$bay(1).
  • (ಏಕವಚನ ಯಾ ಬಹುವಚನದಲ್ಲಿ) ವಿಜಯಮಾಲೆ; ಜಯಪರ್ಣ; ಜಯಪತ್ರೆ; ಜಯದ ಯಾ ಕವಿತಾ ಪ್ರಶಸ್ತಿಯ ಸಂಕೇತವಾದ ‘ಬೇ’ ಮರದ ಎಲೆಗಳು.
  • (ಬಹುವಚನ ದಲ್ಲಿ) ಗೌರವ; ವಿಶೇಷ ಮನ್ನಣೆ.
  • ‘ಬೇ’ ಮರದ ಎಲೆಯಂತೆ ಹೊಳೆಯುವ ಕಡುಹಸುರು ಎಲೆಗಳುಳ್ಳ ಯಾವುದೇ ಸಸ್ಯ: cherry laurel, Japanese laurel, mountain laurel.

  • laurel
    ಸಕರ್ಮಕ ಕ್ರಿಯಾಪದ
    ಲಾರಲ್‍ ಮಾಲೆ, ಹಾರ, ದಂಡೆ – ಮುಡಿಸು, ಹಾಕು.

    laurustinus
    ನಾಮವಾಚಕ
    ಲಾರಸ್ಟೈನಸ್‍; ವೈಬರ್ನಮ್‍ ಟೈನಸ್‍ ಕುಲದ, ಚಳಿಗಾಲದಲ್ಲಿ ಒತ್ತಾಗಿಯೂ ಹೊಳಪಾಗಿಯೂ ಇರುವ ಹಸಿರು ಎಲೆಗಳನ್ನೂ, ಬಿಳಿ ಯಾ ನಸುಗುಲಾಬಿ ಬಣ್ಣದ ಹೂವುಗಳನ್ನೂ ಬಿಡುವ, ನಿತ್ಯಹರಿದ್ವರ್ಣದ ಒಂದು ಪೊದೆ.

    lav
    ನಾಮವಾಚಕ
    (ಬ್ರಿಟಿಷ್‍ ಪ್ರಯೋಗ) (ಆಡುಮಾತು) lavatory (ಎಂಬುದರ ಸಂಕ್ಷಿಪ್ತ).

    lava
    ನಾಮವಾಚಕ
    ಲಾವ:
  • ಕಲ್ಲುನೀರು; ಶಿಲಾರಸ; ಶಿಲಾದ್ರವ; ಜ್ವಾಲಾಮುಖಿಯಿಂದ ಹರಿಯುವ ದ್ರವರೂಪದ ಶಿಲೆ, ಕಲ್ಲು.
  • ಲಾವ ಶಿಲೆ; ಜ್ವಾಲಾಮುಖಿಯ ಕಿಟ್ಟ; ಶಿಲಾದ್ರವ ಆರಿದ ಮೇಲೆ ಆಗುವ ಘನ ಪದಾರ್ಥ.


  • logo