logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

improvable
ಗುಣವಾಚಕ
  • ಸುಧಾರಣೀಯ; ಸುಧಾರಿಸಬಹುದಾದ; ಉತ್ತಮಗೊಳಿಸಬಹುದಾದ; ಅಭಿವರ್ಧನೀಯ; ಉತ್ತಮಪಡಿಸಲು ಸಾಧ್ಯವಿರುವ.
  • ಕೃಷಿಯೋಗ್ಯ; ಬೇಸಾಯಕ್ಕೆ ತಕ್ಕ.
  • (ಜಈನಿನ ವಿಷಯದಲ್ಲಿ) ಹೆಚ್ಚು ಫಲವತ್ತಾಗಿಸಬಹುದಾದ.

  • improvableness
    ನಾಮವಾಚಕ
    = improvability.

    improve
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ ನುಡಿಗಟ್ಟು
  • ಮೇಲ್ಪಡಿಸು; ಉತ್ತಮಗೊಳಿಸು; ಸುಧಾರಿಸು; ತಿದ್ದು; ಅಭಿವೃದ್ಧಿಪಡಿಸು.
  • (ಸಂದರ್ಭವನ್ನು, ಅವಕಾಶವನ್ನು) ಸದುಪಯೋಗಪಡಿಸಿಕೊ; ಸರಿಯಾಗಿ ಬಳಸಿಕೊ; ಲಾಭದಾಯಕವಾಗಿ ಮಾಡಿಕೊ: improved the opportunity to make friends ಆ ಅವಕಾಶವನ್ನು ಹೊಸ ಸ್ನೇಹಿತರನ್ನು ಮಾಡಿಕೊಳ್ಳಲು ಬಳಸಿಕೊಂಡ.
  • (ಸೌಕರ್ಯಗಳನ್ನು ಕಲ್ಪಿಸಿ, ಅಭಿವೃದ್ಧಿಗೊಳಿಸಿ ಮನೆ, ಜಈನು, ಮೊದಲಾದವುಗಳ) ಬೆಲೆ ಹೆಚ್ಚಿಸು.
  • (ವರ್ತಮಾನ ಕೃದಂತದಲ್ಲಿ) ನೈತಿಕವಾಗಿ ಸುಧಾರಿಸುವ: an improving book ನೈತಿಕವಾಗಿ ಸುಧಾರಿಸುವ ಪುಸ್ತಕ.

  • improvement
    ನಾಮವಾಚಕ
  • ಸದುಪಯೋಗ: the improvement of one’s time in reading ಅಧ್ಯಯನದಲ್ಲಿ ತನ್ನ ಕಾಲಾವಕಾಶದ ಸದುಪಯೋಗ.
  • ಏಳಿಗೆ, ಅಭಿವೃದ್ಧಿ: professional improvement ಯೋಗ್ಯತೆ ಯಾ ಕೌಶಲದಲ್ಲಿ ಏಳಿಗೆ.
  • ಸುಧಾರಣೆ; ಸುಧಾರಿತ ಸ್ಥಿತಿ: improvement in his health ಅವನ ಆರೋಗ್ಯದಲ್ಲಿ ಸುಧಾರಣೆ.
  • (ಹೊಲ, ಮನೆ, ಮೊದಲಾದವುಗಳ ಬೆಲೆ ಹೆಚ್ಚಿಸುವ) ಮೇಲ್ಮೆ; ಮೇಲ್ಪಾಡು; ಉತ್ತಮಿಕೆ; ಅಭಿವೃದ್ಧಿ: a number of improvements in the town ನಗರದಲ್ಲಿ ಆಗಿರುವ ಅನೇಕ ಅಭಿವೃದ್ಧಿ ಕಾರ್ಯಗಳು.

  • improver
    ನಾಮವಾಚಕ
  • (ಬ್ರಿಟಿಷ್‍ ಪ್ರಯೋಗ) ಕೌಶಲಾರ್ಥಿ; ಒಂದು ಕಸಬಿನಲ್ಲಿ ತನ್ನ ಕಾರ್ಯಕೌಶಲವನ್ನು ಅಭಿವೃದ್ಧಿಪಡಿಸಿಕೊಳ್ಳಲು ಕೂಲಿಯಿಲ್ಲದೆ ಯಾ ಕಡಮೆ ಕೂಲಿಗೆ ಕೆಲಸಮಾಡುವವನು.
  • = dress-improver.
  • ಗುಣವರ್ಧಕ; ಒಂದು ವಸ್ತುವಿನ ಗುಣ ಮೊದಲಾದವನ್ನು ಉತ್ತಮ ಪಡಿಸಲು ಬಳಸುವ ಇನ್ನೊಂದು ವಸ್ತು.
  • ಅಭಿವರ್ಧಕ; ಯಾವುದನ್ನೇ ಉತ್ತಮಪಡಿಸುವವನು ಯಾ ಉತ್ತಮಪಡಿಸುವಂಥದು.

  • improvidence
    ನಾಮವಾಚಕ
  • ಮುಂದಾಲೋಚನೆಯಿಲ್ಲದಿರುವುದು.
  • ನಿರ್ಲಕ್ಷ್ಯ; ಮುನ್ನೆಚ್ಚರಿಕೆಯಿಲ್ಲದಿರುವುದು.
  • ದುಂದುಗಾರಿಕೆ; ಕೈಹಿಡಿತವಿಲ್ಲದಿರುವುದು.

  • improvident
    ಗುಣವಾಚಕ
  • ಮುನ್‍ದೃಷ್ಟಿ ಇಲ್ಲದ; ಮುಂದಾಲೋಚನೆಯಿಲ್ಲದ.
  • ನಿರ್ಲಕ್ಷ್ಯದ; ಮುನ್ನೆಚ್ಚರಿಕೆಯಿಲ್ಲದ.
  • ಕೈಹಿಡಿತವಿಲ್ಲದ; ದುಂದುವೆಚ್ಚ ಮಾಡುವ; ದುಂದುಗಾರಿಕೆಯ; ಪೋಲು ಮಾಡುವ.

  • improvidently
    ಕ್ರಿಯಾವಿಶೇಷಣ
  • ಮುಂದಾಲೋಚನೆಯಿಲ್ಲದೆ.
  • ಮುನ್ನೆಚ್ಚರಿಕೆಯಿಲ್ಲದೆ; ನಿರ್ಲಕ್ಷ್ಯದಿಂದ.
  • ಕೈಹಿಡಿತವಿಲ್ಲದೆ.

  • improving
    ಗುಣವಾಚಕ
  • ಸುಧಾರಕ; ಅಭಿವೃದ್ಧಿಕಾರಿ; ಉತ್ತಮಗೊಳಿಸುವ.
  • ಉದಾತ್ತಗೊಳಿಸುವ; ಮೇಲ್ಮೆಗೊಯ್ಯುವ.
  • ಸತ್ಪರಿಣಾಮಕಾರಿಯಾದ; ನೈತಿಕ ಪ್ರಭಾವ ಉಂಟುಮಾಡುವ: an improving book ಸತ್ಪರಿಣಾಮಕಾರಿಯಾದ ಪುಸ್ತಕ.

  • improvisation
    ನಾಮವಾಚಕ
  • ಆಶುರಚನೆ; ಆಶುಭಾಷಣ ಯಾ ಆಶುಗಾಯನ; ಸಮಯಸ್ಫೂರ್ತಿಯಿಂದ ಕವಿತೆ ಮೊದಲಾದವನ್ನು ಕಟ್ಟುವುದು ಯಾ ಹಾಡುವುದು.
  • ಸಾಮಯಿಕ ಕಲ್ಪನೆ, ರಚನೆ, ಕ್ರಿಯೆ: it was not an improvisation, a sudden, last minute, desperate measure ಅದೊಂದು ಸಾಮಯಿಕ ಕಲ್ಪನೆ, ಒಂದು ತಕ್ಷಣದ, ಕೊನೆಗಳಿಗೆಯ, ಬೇರೆ ದಾರಿಯಿಲ್ಲದ ಕಾರ್ಯಕ್ರಮ ಆಗಿರಲಿಲ್ಲ.


  • logo