logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

elfish
ಗುಣವಾಚಕ
  • ಸಣ್ಣ; ಗಿಡ್ಡ; ಪುಟಾಣಿ.
  • ಪುಟ್ಟ ಅತಿಮಾನುಷ ವ್ಯಕ್ತಿಗಳ ಯಾ ಅವರಿಗೆ ಸಂಬಂಧಿಸಿದ.
  • ತುಂಟ; ಕೀಟಲೆ ಮಾಡುವ; ತಂಟಲುಮಾರಿ; ಚೇಷ್ಟೆ ಸ್ವಭಾವದ: elfish pranks ಕೀಟಲೆಗಳು; ಚೇಷ್ಟೆಗಳು; ಕಿತಾಪತಿಗಳು.

  • elicit
    ಸಕರ್ಮಕ ಕ್ರಿಯಾಪದ
  • (ಸಾಮಾನ್ಯವಾಗಿ ರೂಪಕವಾಗಿ) (ಗೂಢವಾಗಿ, ಅವ್ಯಕ್ತವಾಗಿ ಇರುವುದನ್ನು) ಹೊರಸೆಳೆ; ಹೊರದೆಗೆ.
  • (ದತ್ತಾಂಶಗಳಿಂದ ತತ್ತ್ವಾಂಶಗಳನ್ನು) ಹೊರಡಿಸು; ಪ್ರಕಾಶಗೊಳಿಸು; ಅನುಮಾನಿಸು.
  • (ಒಬ್ಬನಿಂದ ಒಪ್ಪಿಗೆ, ಉತ್ತರ, ಸುದ್ದಿ, ಮೊದಲಾದವನ್ನು) ಹೊರಡಿಸು; ಹೊರಸೆಳೆ; ಬಯಲಿಗೆ ತರು.

  • elide
    ಸಕರ್ಮಕ ಕ್ರಿಯಾಪದ
    (ಸ್ವರವನ್ನು, ಉಚ್ಚಾರಾಂಶವನ್ನು) ಉಚ್ಚಾರಣೆಯಲ್ಲಿ ನುಂಗು, ಬಿಟ್ಟುಬಿಡು, ಲೋಪಮಾಡು.

    eligibility
    ನಾಮವಾಚಕ
  • ಅರ್ಹತೆ; ಯೋಗ್ಯತೆ.
  • ಅಪೇಕ್ಷಣೀಯತೆ.
  • (ಮುಖ್ಯವಾಗಿ ಮದುವೆಯಾಗಲು) ಅನುರೂಪತೆ; ವರಣೀಯತೆ.

  • eligible
    ಗುಣವಾಚಕ
  • (ಅಧಿಕಾರ, ಪ್ರಶಸ್ತಿ, ಮೊದಲಾದವಕ್ಕೆ) ಅರ್ಹ; ಯೋಗ್ಯ; ಆರಿಸಲು ತಕ್ಕ; ಆಯ್ಕೆಗೆ ತಕ್ಕ; ಆಯತಕ್ಕ; ಚುನಾಯಿಸಲು ಅರ್ಹವಾದ.
  • ಅಪೇಕ್ಷಣೀಯ; ವರಣೀಯ; ಬಯಸತಕ್ಕ.
  • (ಮುಖ್ಯವಾಗಿ ವಿವಾಹದಲ್ಲಿ ಸಂಗಾತಿಯಾಗಿ) ಅನುರೂಪ; ತಕ್ಕ; ಉಚಿತ; ಅರ್ಹ; ಯೋಗ್ಯ: eligible bridegroom ಅನುರೂಪನಾದ ವರ.

  • eligibly
    ಕ್ರಿಯಾವಿಶೇಷಣ
    ಅರ್ಹ ರೀತಿಯಲ್ಲಿ; ಯೋಗ್ಯ ರೀತಿಯಲ್ಲಿ; ಉಚಿತವಾಗಿ.

    eliminable
    ಗುಣವಾಚಕ
  • ವರ್ಜ್ಯ; ವರ್ಜನಯೋಗ್ಯ; ತೆಗೆದುಹಾಕಬಹುದಾದ; ಬಿಟ್ಟುಬಿಡಬಹುದಾದ.
  • ಹೊರಹಾಕಬಲ್ಲ; ಹೊರದೂಡಬಲ್ಲ; ವಿಸರ್ಜನೀಯ:
    1. (ಶರೀರ ವಿಜ್ಞಾನ) (ವ್ಯರ್ಥ ಪದಾರ್ಥಗಳ ವಿಷಯದಲ್ಲಿ) ಅಂಗಾಂಶಗಳಿಂದ ಹೊರಹಾಕಬಹುದಾದ.
    2. (ರಸಾಯನವಿಜ್ಞಾನ) (ಸಂಯುಕ್ತದ ಯಾವುದೇ ಭಾಗದ ವಿಷಯದಲ್ಲಿ) ಸಂಯುಕ್ತದಿಂದ ಹೊರಹಾಕಬಹುದಾದ.
  • (ಪ್ರಶ್ನೆಯ ಭಾಗ ಮೊದಲಾದವುಗಳ ವಿಷಯದಲ್ಲಿ) ಕಡೆಗಣಿಸಬಹುದಾದ; ನಿರ್ಲಕ್ಷಿಸಬಹುದಾದ; ಉಪೇಕ್ಷಿಸಬಹುದಾದ; ಬಿಟ್ಟುಬಿಡಬಹುದಾದ; ತ್ಯಜಿಸಬಹುದಾದ.
  • (ಬೀಜಗಣಿತ) (ಯಾವುದೇ ಪರಿಮಾಣದ ವಿಷಯದಲ್ಲಿ) ಸಮೀಕರಣದಿಂದ ತೆಗೆದುಹಾಕಬಹುದಾದ.
  • (ಅನುಚಿತ ಪ್ರಯೋಗ) ಪ್ರತ್ಯೇಕಿಸಬಹುದಾದ; ಹೊರಸೆಳೆಯಬಹುದಾದ.

  • eliminate
    ಸಕರ್ಮಕ ಕ್ರಿಯಾಪದ
  • ತೆಗೆದುಹಾಕು; ಕಳೆದುಬಿಡು; ತಳ್ಳಿಬಿಡು; ವರ್ಜಿಸು.
  • ಹೊರಹಾಕು; ಹೊರದೂಡು; ವಿಸರ್ಜಿಸು:
    1. (ಶರೀರ ವಿಜ್ಞಾನ) ವ್ಯರ್ಥ ಪದಾರ್ಥಗಳನ್ನು ಶರೀರದಿಂದ ಹೊರಕ್ಕೆ ಕಳುಹಿಸು.
    2. (ರಸಾಯನವಿಜ್ಞಾನ) ಸಂಯುಕ್ತದಿಂದ ಯಾವುದೇ ಭಾಗವನ್ನು ತೆಗೆದುಹಾಕು.
  • (ಪ್ರಶ್ನೆಯ ಭಾಗ ಮೊದಲಾದವನ್ನು ಅಮುಖ್ಯ ಯಾ ಅನಗತ್ಯವೆಂದು) ಗಣನೆಮಾಡದಿರು; ಕಡೆಗಣಿಸು; ಉಪೇಕ್ಷಿಸು; ಲೆಕ್ಕಿಸದಿರು; ಬಿಟ್ಟುಬಿಡು.
  • (ಬೀಜಗಣಿತ) ತೆಗೆದುಹಾಕು; ಸಮೀಕರಣದಲ್ಲಿನ ಯಾವುದೇ ಪರಿಮಾಣ ಇಲ್ಲದಂತೆ ಮಾಡು: add the two equations and eliminate ‘y’ ಎರಡು ಸಮೀಕರಣಗಳನ್ನೂ ಕೂಡಿ ‘y’ ಅನ್ನು ತೆಗೆದುಹಾಕು.
  • (ಅನುಚಿತ ಪ್ರಯೋಗ) (ರೂಪಕವಾಗಿ ಸಹ) ಹೊರಸೆಳೆ; ಪ್ರತ್ಯೇಕಿಸು: roots eliminate nitrogen from the soil ಬೇರುಗಳು ಮಣ್ಣಿನಿಂದ ನೈಟ್ರೊಜನ್ನನ್ನು ಪ್ರತ್ಯೇಕಿಸುತ್ತವೆ.
  • (ಸೋಲಿಸುವುದರ ಮೂಲಕ ಸ್ಪರ್ಧೆ ಮೊದಲಾದವುಗಳಿಂದ) ಹೊರಹಾಕು; ಹೊರದೂಡು.

  • elimination
    ನಾಮವಾಚಕ
  • ವರ್ಜನೆ; ಬಿಟ್ಟುಬಿಡುವುದು.
  • ಹೊರಹಾಕುವಿಕೆ; ಹೊರದೂಡುವಿಕೆ; ವಿಸರ್ಜನೆ:
    1. (ಶರೀರ ವಿಜ್ಞಾನ) ವ್ಯರ್ಥ ಪದಾರ್ಥಗಳನ್ನು ಶರೀರದಿಂದ ಹೊರಕ್ಕೆ ಕಳುಹಿಸುವಿಕೆ.
    2. (ರಸಾಯನವಿಜ್ಞಾನ) ಸಂಯುಕ್ತದಿಂದ ಯಾವುದೇ ಭಾಗವನ್ನು ತೆಗೆದುಹಾಕುವಿಕೆ.
  • (ಪ್ರಶ್ನೆಯ ಭಾಗ ಮೊದಲಾದವುಗಳ ವಿಷಯದಲ್ಲಿ) ಕಡೆಗಣಿಸುವಿಕೆ; ಬಿಟ್ಟುಬಿಡುವಿಕೆ.
  • (ಬೀಜಗಣಿತ) ಬಹಿರ್ವಹನ; ಹೊರಹಾಕುವುದು; ಸಮೀಕರಣಗಳನ್ನು ಒಂದರೊಡನೊಂದು ಸೇರಿಸುವ ಮುಖಾಂತರ ಯಾವುದೇ ಪರಿಮಾಣವನ್ನು ತೆಗೆದುಹಾಕುವುದು.
  • (ಸೋಲಿಸುವುದರ ಮೂಲಕ ಸ್ಪರ್ಧೆ, ಪಂದ್ಯ, ಮೊದಲಾದವುಗಳಿಂದ) ವರ್ಜನ; ತೆಗೆದುಹಾಕುವುದು ; ಹೊರಹಾಕುವುದು.
  • (ಬಹುವಚನದಲ್ಲಿ) ಮೂತ್ರ, ಮಲ, ಮೊದಲಾದ ವಿಸರ್ಜಿಸಿದ ವಸ್ತುಗಳು.

  • eliminator
    ನಾಮವಾಚಕ
    ವಿಸರ್ಜಕ:
  • ಯಾವುದನ್ನೇ ತೆಗೆದುಹಾಕುವಂಥದು.
  • ಎಲಿಮಿನೇಟರು; ಮುಖ್ಯವಾಗಿ ಸಾರ್ವಜನಿಕ ಸರಬರಾಜಿನ ವಿದ್ಯುಚ್ಛಕ್ತಿಯನ್ನು ಬಳಸಿಕೊಂಡು ಬ್ಯಾಟರಿಯಿಂದ ನಡೆಯುವುದಕ್ಕೆ ರೂಪಿಸಿದ ಮಂಡಲಕ್ಕೆ ವಿದ್ಯುತ್ತನ್ನು ಸರಬರಾಜುಮಾಡುವ ಸಾಧನ.


  • logo