logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

capacity
ನಾಮವಾಚಕ ಪದಗುಚ್ಛ ನುಡಿಗಟ್ಟು
measure of capacity (ಪಾತ್ರೆ, ದ್ರವ, ಧಾನ್ಯ, ಮೊದಲಾದವುಗಳನ್ನು ಅಳೆಯಲು ಬಳಸುವ) ಅಳತೆ. to capacity ಪೂರ್ಣವಾಗಿ; ಪೂರ್ತಿಯಾಗಿ; ಭರ್ತಿ: working to capacity ಪೂರ್ಣವಾಗಿ ಕೆಲಸ ಮಾಡುತ್ತಿರುವ.
  • (ಸುಖ, ಶಾಖ, ಕಣ್ಣು ಮೊದಲಾದವುಗಳ ವಿಷಯದಲ್ಲಿ) ಧಾರಣಶಕ್ತಿ; ಗ್ರಹಣ ಶಕ್ತಿ; ಹಿಡಿದಿಟ್ಟುಕೊಳ್ಳುವ, ಒಳಗೊಳ್ಳುವ, ಸ್ವೀಕರಿಸುವ, ಅನುಭವಿಸುವ ಯಾ ಉತ್ಪತ್ತಿ ಮಾಡುವ–ಆಪು, ಅಳವು, ಶಕ್ತಿ, ಸಾಮರ್ಥ್ಯ: capacity of heat ಶಾಖಧಾರಣಸಾಮರ್ಥ್ಯ.
  • (ಹಿಡಿದಿಟ್ಟುಕೊಳ್ಳುವುದು, ಉತ್ಪತ್ತಿ ಮಾಡುವುದು ಮೊದಲಾದವುಗಳ ವಿಷಯದಲ್ಲಿ) ಗರಿಷ್ಠ–ಪ್ರಮಾಣ, ಮೊತ್ತ.
  • (ಪಾತ್ರೆ, ಉರುಳೆ ಮೊದಲಾದವುಗಳ) ಘನ ಅಳತೆ.
  • ಬುದ್ಧಿಶಕ್ತಿ; ಮನಶ್ಶಕ್ತಿ; ಮೇಧಾಶಕ್ತಿ; ಪ್ರಜ್ಞಾಶಕ್ತಿ.
  • ತಕ್ಕುಮೆ; ಯೋಗ್ಯತೆ; ಅರ್ಹತೆ; ಸಾಮರ್ಥ್ಯ.
  • ಅಧಿಕಾರ; ಸ್ಥಾನ: in my capacity as critic ನನ್ನ ವಿಮರ್ಶಕಸ್ಥಾನದಿಂದ; ವಿಮರ್ಶಕನಾಗಿ.
  • (ಭೌತವಿಜ್ಞಾನ) = capacitance.
  • (ನ್ಯಾಯಶಾಸ್ತ್ರ) ಶಾಸನಬದ್ಧವಾದ ಅರ್ಹತೆ; ಕಾನೂನುಬದ್ಧ ಅಧಿಕಾರ.
  • (ಯಂತ್ರ ಮೊದಲಾದವುಗಳ) ಉತ್ಪಾದನಶಕ್ತಿ; ಸೃಷ್ಟಿಶಕ್ತಿ.

  • capacity
    ಗುಣವಾಚಕ
    ಪೂರ್ತಿಯಾಗಿ ತುಂಬಿದ; ಕಿಕ್ಕಿರಿದುಹೋಗಿರುವ; ಭರ್ತಿಯಾದ: capacity house ಕ್ಕಿಕ್ಕಿರಿದು ತುಂಬಿದ ನಾಟಕಶಾಲೆ ಮೊದಲಾದವು. capacity audience ಪೂರ್ತಿ ತುಂಬಿರುವ ಯಾ ಭರ್ತಿಯಾದ–ಪ್ರೇಕ್ಷಕರು.

    caparison
    ನಾಮವಾಚಕ
  • (ಸಾಮಾನ್ಯವಾಗಿ ಬಹುವಚನದಲ್ಲಿ) (ಕುದುರೆಯ ಜೀನಿನ ಮೇಲೆ ಹಾಕುವ) ಚಿತ್ರಹೊದಿಕೆ; ಸಿಂಗಾರಗವುಸು. Figure: caparison
  • ಒಡವೆವಸ್ತ್ರ; ಸಜ್ಜು; ಬೆಲೆಬಾಳುವ ಉಡಿಗೆತೊಡಿಗೆ ಮತ್ತು ಆಭರಣಗಳು.

  • caparison
    ಸಕರ್ಮಕ ಕ್ರಿಯಾಪದ
  • (ಕುದುರೆಗೆ) ಗವುಸು ಹೊದಿಸು.
  • (ಒಡವೆ ವಸ್ತ್ರಗಳಿಂದ) ಸಿಂಗರಿಸು; ಅಲಂಕರಿಸು; ಮುಸ್ತೈದು ಮಾಡು; ಸಜ್ಜುಗೊಳಿಸು.

  • cape
    ನಾಮವಾಚಕ
    (ತೋಳಿಲ್ಲದ) ಜುಬ್ಬ; ಮೇಲಂಗಿ; ಅಂಗಿಯ ಯಾ ಕೋಟಿನ ಭಾಗವಾಗಿ ಸೇರಿಸಿದ, ಯಾ ಅಂಗಿಯಿಂದ ಬೇರ್ಪಡಿಸಬಹುದಾದ, ಬೇರೆಯೇ ಆಗಿ ಹೊಲೆದಿರುವ, ತೋಳಿಲ್ಲದ ಮೇಲಂಗಿ.

    cape
    ನಾಮವಾಚಕ
    ಭೂಶಿರ; ಸಮುದ್ರ ಮೊದಲಾದವುಗಳೊಳಕ್ಕೆ ಚಾಚಿಕೊಂಡಿರುವ ಭೂಮಿಯ ತುದಿ.

    Cape
    ನಾಮವಾಚಕ ಪದಗುಚ್ಛ
    the Cape = 3Cape(1).
  • (ದಕ್ಷಿಣ ಆಹ್ರಿಕದ) ಗುಡ್‍ಹೋಪ್‍ ಭೂಶಿರ.
  • ಕೇಪ್‍ ಪ್ರಾಂತ; ಗುಡ್‍ಹೋಪ್‍ ಭೂಶಿರವನ್ನೊಳಗೊಂಡಿರುವ, ದಕ್ಷಿಣ ಆಹ್ರಿಕದ ಪ್ರಾಂತ.

  • Cape cart
    ನಾಮವಾಚಕ
    (ದಕ್ಷಿಣ ಆಹ್ರಿಕ) ಎರಡು ಚಕ್ರದ ಕುದುರೆ ಬಂಡಿ.

    Cape Coloured
    ನಾಮವಾಚಕ
    ಮಿಶ್ರಸಂತತಿಯ, ದಕ್ಷಿಣ ಆಹ್ರಿಕದ ಕೇಪ್‍ ಪ್ರಾಂತದ ನಿವಾಸಿ.

    Cape Coloured
    ಗುಣವಾಚಕ
    (ಕೇಪ್‍ ಪ್ರಾಂತದ) ಮಿಶ್ರ ಸಂತತಿಯ.


    logo