logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

active voice
ನಾಮವಾಚಕ
(ವ್ಯಾಕರಣ) ( ಕ್ರಿಯಾಪದದ) ಕರ್ತರಿ ಪ್ರಯೋಗ.

active volcano
ನಾಮವಾಚಕ
ಜೀವಂತ ಅಗ್ನಿಪರ್ವತ; ಜಾಗೃತ ಅಗ್ನಿಪರ್ವತ; ಆಗಾಗ್ಗೆ ಸ್ಫೋಟಿಸುವ ಅಗ್ನಿಪರ್ವತ.

actively
ಕ್ರಿಯಾವಿಶೇಷಣ
  • ಕಾರ್ಯತಃ; ಕಾರ್ಯತತ್ಪರವಾಗಿ; ಕಾರ್ಯದಲ್ಲಿ ತೊಡಗಿ.
  • ಸಕ್ರಿಯವಾಗಿ; ಕ್ರಿಯಾಶೀಲವಾಗಿ.

  • activeness
    ನಾಮವಾಚಕ
  • ಕಾರ್ಯಪರತೆ; ಕಾರ್ಯನಿರತತೆ.
  • ಕಾರ್ಯಪಟುತ್ವ.
  • ಸಕ್ರಿಯತೆ; ಸಕ್ರಿಯವಾಗಿ ಯಾವುದೇ ಕೆಲಸ ಮಾಡುವುದು.
  • (ಕೆಲಸದಲ್ಲಿ) ಚುರುಕಾಗಿರುವಿಕೆ; ಚೂಟಿಯಾಗಿರುವಿಕೆ; ಚಟುವಟಿಕೆಯಿಂದಿರುವಿಕೆ.

  • activism
    ನಾಮವಾಚಕ
    ಕ್ರಿಯಾವಾದ:
  • ರಾಜಕೀಯ ಉದ್ದೇಶಗಳನ್ನು ಸಾಧಿಸಲು ಸಶಕ್ತ ಕಾರ್ಯಾಚರಣೆ ಮುಖ್ಯವೆನ್ನುವ ವಾದ.
  • ಸತ್ಯದ ಮೂಲ ಸ್ವರೂಪವು ಶುದ್ಧಕ್ರಿಯೆ–ಅಂದರೆ ಆಧ್ಯಾತ್ಮಿಕ ಕ್ರಿಯೆ–ಎನ್ನುವ ತತ್ತ್ವ, ಸಿದ್ಧಾಂತ.
  • ಮನಸ್ಸು ಮತ್ತು ಬಾಹ್ಯ ಪದಾರ್ಥಗಳ ಪರಸ್ಪರ ಸಂಬಂಧವು ಮನಸ್ಸಿನ ಕ್ರಿಯೆಯನ್ನು ಅವಲಂಬಿಸಿದೆ ಎನ್ನುವ ಸಿದ್ಧಾಂತ.

  • activist
    ನಾಮವಾಚಕ
  • (ರಾಜಕೀಯ ಮೊದಲಾದ ಕ್ಷೇತ್ರಗಳಲ್ಲಿ) ಕ್ರಿಯಾವಾದಿ; ಕ್ರಿಯಾ ಸಿದ್ಧಾಂತಿ; ಕ್ರಿಯಾವಾದದ ಅನುಯಾಯಿ.
  • (ತತ್ತ್ವಶಾಸ್ತ್ರ) ತೀವ್ರವಾದಿ; ಯಾವುದೇ ವಾದ ಯಾ ಪಕ್ಷವನ್ನು ಶಕ್ತವಾಗಿ ಯಾ ಉಗ್ರವಾಗಿ ಪ್ರತಿಪಾದಿಸುವವನು.

  • activity
    ನಾಮವಾಚಕ
  • ಕ್ರಿಯಾಶೀಲತೆ; ಉದ್ಯೋಗಶೀಲತೆ.
  • ಚುರುಕು; ಚಟುವಟಿಕೆ; ಚೂಟಿ.
  • ಕ್ರಿಯಾಶಕ್ತಿ.
  • (ಭೌತವಿಜ್ಞಾನ) = radioactivity.
  • (ರಸಾಯನವಿಜ್ಞಾನ) = optical activity.
  • (ಬಹುವಚನ) ಕಾರ್ಯಕಲಾಪಗಳು; ಕಾರ್ಯ ಚಟುವಟಿಕೆಗಳು.

  • acton
    ನಾಮವಾಚಕ
  • ಒಳಮೆತ್ತೆ ಅಂಗಿ; ಉಕ್ಕಿನ ಕವಚದ ಒಳಗೆ ಧರಿಸುವ ಮೆತ್ತೆ ಅಂಗಿ.
  • ಚರ್ಮದ ಕವಚ; ಉಕ್ಕಿನ ಅಸ್ತರಿಯನ್ನು ಹಾಕಿ ಹೊಲಿದಿರುವ ತೊಗಲಂಗಿ.

  • actor
    ನಾಮವಾಚಕ
  • (ನಾಟಕ, ಸಿನೆಮಾ, ಮೊದಲಾದವುಗಳಲ್ಲಿ) ನಟ; ಅಭಿನಯಕಾರ.
  • (ವಿರಳ ಪ್ರಯೋಗ) ಕಾರ್ಯಕರ್ತ; ಕಾರ್ಯಭಾಗಿ.

  • actress
    ನಾಮವಾಚಕ
    ನಟಿ; ಅಭಿನಯಗಾರ್ತಿ; ಅಭಿನೇತ್ರಿ.


    logo