(ಪ್ರಾಣಿವಿಜ್ಞಾನ) (ರೋಮಂಥ ಯಾ ಮೆಲುಕು ಹಾಕುವ ಪ್ರಾಣಿಗಳ) ಮೂರನೆಯ ಜಠರ: ತೃತೀಯ ಜಠರ; ತೃತೀಯಾಮಾಶಯ.
ombre
ನಾಮವಾಚಕ
(17–18ನೆಯ ಶತಮಾನಗಳಲ್ಲಿ ಜನಪ್ರಿಯವಾಗಿದ್ದ) ಒಂದು ಬಗೆಯ ಇಸ್ಪೀಟಾಟ.
ombre
ಗುಣವಾಚಕ
(ಬಟ್ಟೆ ಮೊದಲಾದವುಗಳ ವಿಷಯದಲ್ಲಿ) ನಸು ಬಣ್ಣದಿಂದ ಗಾಢವಾದ ಬಣ್ಣದವರೆಗೆ ಹರಡಿರುವ ವರ್ಣಛಾಯೆಯುಳ್ಳ.
ombro-
ಸಮಾಸ ಪೂರ್ವಪದ
ಮಳೆ, ವೃಷ್ಟಿ ಯಾ ಮಳೆಗೆ ಸಂಬಂಧಿಸಿದ, ಎಂಬ ಪದಗಳ ನಿಷ್ಪತ್ತಿಯಲ್ಲಿ ಬಳಸುವ ಸಮಾಸ ಪೂರ್ವಪದ: omrometer ವೃಷ್ಟಿಮಾಪಕ; ಮಳೆಯನ್ನು ಅಳೆಯುವ ಸಾಧನ. ombrology ವೃಷ್ಟಿವಿಜ್ಞಾನ; ಮಳೆಗೆ ಸಂಬಂಧಿಸಿದ ವಿಷಯಗಳ ಅಧ್ಯಯನ ನಡೆಸುವ ವಿಜ್ಞಾನ.
ombudsman
ನಾಮವಾಚಕ
ಸಾರ್ವಜನಿಕ ತನಿಖಾಧಿಕಾರಿ; ಸಾರ್ವಜನಿಕ ವ್ಯಕ್ತಿಗಳು ಮೊದಲಾದವರ ಮೇಲಿನ ದೂರುಗಳ ಬಗ್ಗೆ ತನಿಖೆ ನಡೆಸಲು ಸರ್ಕಾರದಿಂದ ನೇಮಕಗೊಂಡ ಅಧಿಕಾರಿ.
omega
ನಾಮವಾಚಕ
ಪದಗುಚ್ಛ
Alpha and Omega ಆದಿ ಮತ್ತು ಅಂತ್ಯ: between her Alpha and Omega, a span of fifty years ಅವಳ ಹುಟ್ಟುಸಾವುಗಳ ನಡುವಣ ಐವತ್ತು ವರ್ಷಗಳ ಅವಧಿ.
ಓಮೆಗ; ಗ್ರೀಕ್ ವರ್ಣಮಾಲೆಯ ಕೊನೆಯ (24ನೆಯ) ಅಕ್ಷರ $(\Omega, \omega)$.