(ಕಡಲತೀರಕ್ಕೆ ಹೋಗುವುದಕ್ಕೂ ಇತರ ಹಡಗುಗಳು ಮೊದಲಾದವನ್ನು ಭೇಟಿಯಾಗುವುದಕ್ಕೂ ಉಪಯೋಗಿಸುವ) ಯುದ್ಧನೌಕೆಯ ಅತ್ಯಂತ ದೊಡ್ಡ ದೋಣಿ; ಕಾಳಗದ ಹಡಗಿನ ಹೆದ್ದೋಣಿ: admiral’s launch ನೌಕಾಸೇನಾಧಿಪತಿಯ ದೋಣಿ; ನೌಕಾಸೇನಾಧಿಪತಿಯ ಉಪಯೋಗಕ್ಕಾಗಿ ಮಾಡಿದ ಮೇಲ್ಚಪ್ಪರವುಳ್ಳ ಯಾ (ಊಟದ, ಮಲಗುವ) ಕೋಣೆಯುಳ್ಳ ದೋಣಿ.
(ನದಿ ಮೊದಲಾದವುಗಳ ಮೇಲೆ, ಯಂತ್ರದಿಂದ ನಡೆಯುವ) ಮೋಟಾರು ದೋಣಿ; ವಿಹಾರದೋಣಿ.
launch pad
ನಾಮವಾಚಕ
= launching pad.
launcher
ನಾಮವಾಚಕ
ಲಾಂಚರು; (ಮುಖ್ಯವಾಗಿ) ರಾಕೆಟ್ಟನ್ನು ಉಡಾಯಿಸುವ ಕಾಲದಲ್ಲಿ ಅದನ್ನು ಹಿಡಿದುಕೊಳ್ಳುವ ಸಾಧನ ಯಾ ಹಿಡಿದುಕೊಳ್ಳಲು ಮಾಡಿರುವ ಏರ್ಪಾಡು, ವ್ಯವಸ್ಥೆ.