logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

impromptu
ಕ್ರಿಯಾವಿಶೇಷಣ
ಆಶು; ಪೂರ್ವಸಿದ್ಧತೆಯಿಲ್ಲದೆ; ಸಮಯಸ್ಫೂರ್ತಿಯಿಂದ.

impromptu
ಗುಣವಾಚಕ
ಆಶು; ಪೂರ್ವಸಿದ್ಧತೆಯಿಲ್ಲದೆ, ಸಮಯಸ್ಫೂರ್ತಿಯಿಂದ – ಮಾಡಿದ.

impromptu
ನಾಮವಾಚಕ
  • ಆಶುರಚನೆ; ಪೂರ್ವಸಿದ್ಧತೆಯಿಲ್ಲದೆ, ಸಮಯಸ್ಫೂರ್ತಿಯಿಂದ ಮಾಡಿದ – ಅಭಿನಯ, ಪ್ರದರ್ಶನ, ರಚನೆ, ಕವಿತೆ, ಭಾಷಣ, ಮೊದಲಾದವು.
  • (ಸಂಗೀತದ ವಿಷಯದಲ್ಲಿ) ಆಶುಕೃತಿ, ಮುಖ್ಯವಾಗಿ ತನಿವಾದ್ಯ ಸಂಗೀತಕ್ಕೆ ಸಮಯಸ್ಫೂರ್ತಿಯಿಂದ ರಚಿಸಿದ ಕೃತಿ.

  • improper
    ಗುಣವಾಚಕ
  • ಸರಿಯಿಲ್ಲದ; ತಪ್ಪಾದ: improper diagnosis of disease ಕಾಯಿಲೆಯ ತಪ್ಪು ನಿದಾನ.
  • ಅಪನಾಮದ; ಅನುಚಿತ ಹೆಸರಿನ, ನಾಮದ; ಹೆಸರು – ಸರಿಯಿಲ್ಲದ, ಉಚಿತವಾಗಿಲ್ಲದ.
  • ಅನುಚಿತ; ಅಯುಕ್ತ; ತಕ್ಕುದಲ್ಲದ.
  • ಅಯೋಗ್ಯ; ತಗದ; ತರವಲ್ಲದ; ಸಲ್ಲದ; ಅಸಭ್ಯ; ಅಶ್ಲೀಲ: improper stories ಅಶ್ಲೀಲ ಕಥೆಗಳು.

  • improperly
    ಕ್ರಿಯಾವಿಶೇಷಣ
  • ತಪ್ಪಾಗಿ; ಸರಿಯಲ್ಲದ ರೀತಿಯಲ್ಲಿ.
  • ಅಯುಕ್ತವಾಗಿ; ಅನುಚಿತವಾಗಿ.
  • ಅಸಭ್ಯವಾಗಿ; ಅಶ್ಲೀಲವಾಗಿ; ಅಯೋಗ್ಯ, ತರವಲ್ಲದ – ರೀತಿಯಲ್ಲಿ.

  • impropriate
    ಸಕರ್ಮಕ ಕ್ರಿಯಾಪದ
    (ಬ್ರಿಟಿಷ್‍ ಪ್ರಯೋಗ)
  • (ಧರ್ಮಸಂಸ್ಥೆಯ ದತ್ತಿಯನ್ನು ಒಂದು ಸಂಸ್ಥೆಯ ಯಾ ವ್ಯಕ್ತಿಯ) ಸ್ವಂತ ಆಸ್ತಿಯನ್ನಾಗಿ ಸೇರಿಸಿಕೊ; ಧರ್ಮಸ್ವಾಪಹಾರ ಮಾಡು.
  • (ಧರ್ಮಸಂಸ್ಥೆಗಳ ವರಮಾನವನ್ನು, ಆಸ್ತಿಯನ್ನು) ಲೌಕಿಕರ ಕೈಗೊಪ್ಪಿಸು; ಲೌಕಿಕರಿಗೆ ವಹಿಸು.

  • impropriation
    ನಾಮವಾಚಕ
    (ಬ್ರಿಟಿಷ್‍ ಪ್ರಯೋಗ)
  • ಧರ್ಮಸ್ವಾಪಹರಣ; ಧರ್ಮಸಂಸ್ಥೆಯ ದತ್ತಿಯನ್ನು (ಒಂದು ಸಂಸ್ಥೆಯ ಯಾ ವ್ಯಕ್ತಿಯ) ಸ್ವಂತ ಆಸ್ತಿಯನ್ನಾಗಿ ಸೇರಿಸಿಕೊಳ್ಳುವುದು.
  • (ಧರ್ಮ ಸಂಸ್ಥೆಗಳ ವರಮಾನ ಮೊದಲಾದವನ್ನು) ಲೌಕಿಕರ ಕೈಗೊಪ್ಪಿಸುವಿಕೆ.

  • impropriator
    ನಾಮವಾಚಕ
    (ಬ್ರಿಟಿಷ್‍ ಪ್ರಯೋಗ) ಚರ್ಚಿನ ಯಾ ಮಠದ ಆಸ್ತಿ ವಹಿಸಲ್ಪಟ್ಟವನು.

    impropriety
    ನಾಮವಾಚಕ
  • ಅನೌಚಿತ್ಯ; ತಗದ್ದು; ಸಲ್ಲದ್ದು.
  • ತಪ್ಪು; ದೋಷ; ಸರಿಯಾಗಿಲ್ಲದಿರುವುದು.
  • ಅಯೋಗ್ಯತೆ; ಅಸಭ್ಯತೆ; ಅಶ್ಲೀಲತೆ.
  • ಅನುಚಿತ ಭಾಷೆ, ನಡತೆ, ಮೊದಲಾದದ್ದು.

  • improvability
    ನಾಮವಾಚಕ
  • ಸುಧಾರಣೀಯತೆ; ಸುಧಾರಿಸಬಲ್ಲಿಕೆ; ಅಭಿವರ್ಧನೀಯತೆ; ಉತ್ತಮಪಡಿಸಲು ಸಾಧ್ಯವಿರುವಿಕೆ.
  • ಕೃಷಿಯೋಗ್ಯತೆ; ಬೇಸಾಯಕ್ಕೆ ತಕ್ಕದ್ದಾಗಿರುವುದು.
  • ಹೆಚ್ಚು ಫಲವತ್ತಾಗಿಸಬಹುದಾದ ಲಕ್ಷಣ.


  • logo