(ವಾಯುಯಾನ) ಎಲಿವಾನ್; ವಿಮಾನವು ಮೇಲಕ್ಕೇರುವುದನ್ನೂ ಪಕ್ಕಕ್ಕೆ ಹೊರಳುವುದನ್ನೂ ನಿಯಂತ್ರಿಸಬಲ್ಲ, ಅದರ ಡೆಲ್ಟ ರೆಕ್ಕೆಯ ಹಿಂಬದಿಯಲ್ಲಿರುವ, ಚಲಿಸಬಲ್ಲ ಭಾಗ.
elf
ನಾಮವಾಚಕ
(ಟ್ಯೂಟನ್ ಪುರಾಣ) ಪುಟ್ಟ ಅತಿಮಾನುಷ ವ್ಯಕ್ತಿ.
ಚೇಷ್ಟೆ ವ್ಯಕ್ತಿ; ಕೀಟಲೆಗುಳಿ.
ಗಿಡ್ಡ; ಗುಜ್ಜಾರಿ; ಕುಳ್ಳಿ.
ಸಣ್ಣವ್ಯಕ್ತಿ; ಚಿಣ್ಣ; ಚಿಳ್ಳೆ; (ಮುಖ್ಯವಾಗಿ) ತುಂಟಮಗು.
elf-arrow
ನಾಮವಾಚಕ
= elf-bolt.
elf-bolt
ನಾಮವಾಚಕ
(ಪ್ರಾಚೀನ ಪ್ರಯೋಗ) ಚಕಮಕಿ ಕಲ್ಲಿನ ಬಾಣದ ತುದಿ, ಅಂಬುತಲೆ; (ಮುಖ್ಯವಾಗಿ ದನಕರುಗಳತ್ತ ಪುಟ್ಟ ಅತಿಮಾನುಷ ವ್ಯಕ್ತಿಗಳು ಎಸೆಯುತ್ತಾರೆಂದು ಬ್ರಿಟನ್ನಿನಲ್ಲಿ ನಂಬಲಾದ, ಅದ್ಭುತ ಶಕ್ತಿಯುಳ್ಳ) ಬಾಣದ ತಲೆ.