logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

capable
ಗುಣವಾಚಕ ಪದಗುಚ್ಛ
capable of
  • ಎಡೆಗೊಡುವ; ಅವಕಾಶವಿರುವ; ಅವಕಾಶ ನೀಡುವ; ತಕ್ಕ; ಸಾಧ್ಯ; ಸಾಧ್ಯತೆಯಿರುವ: the situation is capable of improvement ಪರಿಸ್ಥಿತಿ ಉತ್ತಮಗೊಳ್ಳುವ ಸಾಧ್ಯತೆಯಿದೆ.
  • ಸಮರ್ಥ; ಶಕ್ತ; ದಕ್ಷ; ಯೋಗ್ಯ; ಮಾಡಬಲ್ಲ; ನಿಪುಣ; ಕುಶಲ.

  • capably
    ಕ್ರಿಯಾವಿಶೇಷಣ
    ಸಮರ್ಥವಾಗಿ; ಶಕ್ತನಾಗಿ.

    capacious
    ಗುಣವಾಚಕ
    ದೊಡ್ಡ; ವಿಶಾಲ; ಇಂಬುಳ್ಳ; ವಿಸ್ತಾರವಾದ; ಬೇಕಾದಷ್ಟು ಜಾಗವಿರುವ; ಸಾಕಷ್ಟು ಸ್ಥಳವುಳ್ಳ: a capacious godown ವಿಶಾಲವಾದ, ದೊಡ್ಡದಾದ ಗೋದಾಮು.

    capaciously
    ಕ್ರಿಯಾವಿಶೇಷಣ
    ದೊಡ್ಡದಾಗಿ; ವಿಶಾಲವಾಗಿ.

    capaciousness
    ನಾಮವಾಚಕ
    ಇಂಬು; ವಿಸ್ತಾರ; ವಿಸ್ತೃತಿ; ವೈಶಾಲ್ಯ; ಜಾಗವಿರುವಿಕೆ; ಸ್ಥಳಾನುಕೂಲತೆ; ದೊಡ್ಡದಾಗಿರುವಿಕೆ.

    capacitance
    ನಾಮವಾಚಕ
    (ವಿದ್ಯುದ್ವಿಜ್ಞಾನ)
  • ಧಾರಣ; ಸಂಚಯನ:
    1. ವಿದ್ಯುದ್ವಾಹಕದ ಮೇಲೆ ಹೊರಿಸಿದ ವಿದ್ಯುದಂಶಕ್ಕೂ ಅದರ ಫಲವಾಗಿ ಉಂಟಾದ ವಿಭವದ ಹೆಚ್ಚಳಕ್ಕೂ ಇರುವ ಅನುಪಾತ.
    2. ವಿರುದ್ಧ ವಿದ್ಯುದಂಶ ಹೊತ್ತ ಎರಡು ವಾಹಕಗಳ ನಡುವೆ ಅವಾಹಕವಿದ್ದಾಗ ಆ ಒಂದೊಂದು ವಾಹಕದ ಮೇಲಿನ ವಿದ್ಯುದಂಶಕ್ಕೂ ಇರುವ ಅನುಪಾತ.
    3. ಅವಾಹಕದ ಆಚೆ ಈಚೆ ವಿಭವಾಂತರಗೊಳಿಸುವುದರಿಂದ ಅದರಲ್ಲಿ ವಿದ್ಯುದಂಶ ಸಂಚಯವಾಗುವ ಗುಣ.
  • ವಿದ್ಯುದ್ವೃತ್ತದಲ್ಲಿ ಇರುವ ಅಂಥ ಸಂಚಯನ ವ್ಯವಸ್ಥೆ.
  • (ವಿದ್ಯುದಾವೇಶದ) ಧಾರಣಶಕ್ತಿ; ಸಂಚಯನ ಸಾಮರ್ಥ್ಯ.

  • capacitate
    ಸಕರ್ಮಕ ಕ್ರಿಯಾಪದ
  • ಅರ್ಹವಾಗಿಸು; ಸಮರ್ಥವಾಗಿಸು; ತಕ್ಕುದಾಗಿಸು; ಶಕ್ತವಾಗಿಸು.
  • (ನ್ಯಾಯಶಾಸ್ತ್ರ) ಅರ್ಹನನ್ನಾಗಿಸು; ಅಧಿಕೃತನನ್ನಾಗಿಸು; ಕಾನೂನುರೀತ್ಯಾ ಅಧಿಕಾರವುಳ್ಳವನನ್ನಾಗಿಸು.

  • capacitative
    ಗುಣವಾಚಕ
    = capacitive.

    capacitive
    ಗುಣವಾಚಕ
    (ವಿದ್ಯುದ್ವಿಜ್ಞಾನ)ಧಾರಣಕ್ಕೆ ಯಾ ಸಂಚಯನಕ್ಕೆ ಸಂಬಂಧಿಸಿದ.

    capacitor
    ನಾಮವಾಚಕ
    (ವಿದ್ಯುದ್ವಿಜ್ಞಾನ)ಧಾರಕ; ಸಂಚಾಯಕ; ಸಮನಾದ ಮತ್ತು ವಿರುದ್ಧವಾದ ವಿದ್ಯುದಂಶಗಳನ್ನು ಹೊರಿಸಿದ ಎರಡು ವಾಹಕಗಳ ನಡುವೆ ಅವಾಹಕವನ್ನಿಟ್ಟು ವಿದ್ಯುತ್ತನ್ನು ಸಂಚಯಿಸುವ ಸಾಧನ.


    logo