logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

activated carbon
ನಾಮವಾಚಕ
ಸಕ್ರಿಯ(ಕೃತ) ಕಾರ್ಬನ್‍; ಪಟುಗೊಳಿಸಿದ ಕಾರ್ಬನ್‍; ಸೂಕ್ತ ವಿಧಾನಗಳಿಂದ ಹೀರುವ ಸಾಮರ್ಥ್ಯ ಹೆಚ್ಚಿಸಿರುವ ಕಾರ್ಬನ್‍.

activated sludge
ನಾಮವಾಚಕ
ಸಕ್ರಿಯ ಕೊಚ್ಚೆ; ವಾಯುಜೀವಿ ಬ್ಯಾಕ್ಟೀರಿಯಗಳನ್ನೊಳಗೊಂಡ, ಗಾಳಿ ತುಂಬಿದ ರೊಚ್ಚು.

activation
ನಾಮವಾಚಕ
  • ಸಕ್ರಿಯಕರಣ; (ಯಾವುದೇ ಕಾರ್ಯವನ್ನು) ತೀವ್ರಗೊಳಿಸುವಿಕೆ; ಚುರುಕುಗೊಳಿಸುವಿಕೆ; ಪಟುಗೊಳಿಸುವಿಕೆ.
  • (ಭೌತವಿಜ್ಞಾನ) ವಿಕಿರಣಪಟುಗೊಳಿಸುವಿಕೆ.

  • activator
    ನಾಮವಾಚಕ
  • ಸಕ್ರಿಯಕಾರಿ; (ಯಾವುದೇ ಕಾರ್ಯವನ್ನು) ತೀವ್ರಗೊಳಿಸುವಂಥದು; ತೀವ್ರಗೊಳಿಸುವವನು.
  • = catalyst.

  • active
    ಗುಣವಾಚಕ
  • ಕ್ರಿಯಾಶೀಲ; ಉದ್ಯೋಗಶೀಲ; ಕ್ರಿಯೆ ನಡೆಸಲು ಸಮರ್ಥವಾದ.
  • ಚುರುಕಾದ; ಚೂಟಿಯಾದ; ಚಟುವಟಿಕೆಯಾದ; ಸುಟಿಯಾದ.
  • ಕ್ರಿಯಾಶಕ್ತ; ಪರಿಣಾಮಕಾರಿ.
  • ಉದ್ಯುಕ್ತ; ಕಾರ್ಯೋನ್ಮುಖ; ಸಕ್ರಿಯ; ಕ್ರಿಯೆಯಲ್ಲಿ ತೊಡಗಿರುವ.
  • ವ್ಯವಹಾರಕುಶಲ; ವ್ಯವಹಾರ–ಪಟು, ನಿಪುಣ, ಚತುರ.
  • (ವ್ಯಾಕರಣ) (ಕ್ರಿಯಾಪದದ ವಿಷಯದಲ್ಲಿ) ಕರ್ತರಿ ಪ್ರಯೋಗದ.
  • (ಭೌತವಿಜ್ಞಾನ) = radioactive
  • (ರೋಗದ ವಿಷಯದಲ್ಲಿ) ಗತಿಶೀಲ; ರೋಗವು ಉಲ್ಬಣವಾಗುತ್ತಿರುವ ಯಾ ಇಳಿಮುಖವಾಗುತ್ತಿರುವ.
  • (ರಸಾಯನವಿಜ್ಞಾನ) ಧ್ರುವೀಕೃತ ಬೆಳಕಿನ ಕಂಪನ ಸಮತಲವನ್ನು ತಿರುಗಿಸಬಲ್ಲ, ತಿರುಗಿಸಲು ಸಮರ್ಥವಾಗಿರುವ.

  • active
    ನಾಮವಾಚಕ
  • (ವ್ಯಾಕರಣ) = active voice.
  • ಕ್ರಿಯಾಪದದ ಕರ್ತರಿ (ಪ್ರಯೋಗದ) ರೂಪ.

  • active carbon
    ನಾಮವಾಚಕ
    = activated carbon.

    active list
    ನಾಮವಾಚಕ
    ಕಾರ್ಯಸಮರ್ಥರ ಪಟ್ಟಿ; ಅಗತ್ಯ ಒದಗಿದಾಗ ಯುದ್ಧಕ್ಕೆ ಕರೆಯಬಹುದಾದ ಅಧಿಕಾರಿಗಳ ಪಟ್ಟಿ.

    active principle
    ನಾಮವಾಚಕ
    (ವೈದ್ಯಶಾಸ್ತ್ರ) (ಔಷಧದ ವಿಷಯದಲ್ಲಿ) ಸತ್ತ್ವಾಂಶ; ಕಾರಕಾಂಶ; ನೈಸರ್ಗಿಕ ಪದಾರ್ಥವೊಂದರಿಂದ ಆಗುವ ಶಾರೀರಕ ಕ್ರಿಯೆಗೆ ಕಾರಣವಾಗಿರುವ ಮತ್ತು ಅದರಲ್ಲಿರುವ ನಿರ್ದಿಷ್ಟ ರಾಸಾಯನಿಕ ಸಂಯುಕ್ತ: the active principle of tobacco is nicotine ತಂಬಾಕಿನ ಸತ್ತ್ವಾಂಶ ನಿಕೊಟೀನ್‍.

    active service
    ನಾಮವಾಚಕ
    ಯುದ್ಧಸೇವೆ:
  • ರಣರಂಗದಲ್ಲಿ ಹೋರಾಡುವುದು.
  • (ಶಾಂತಿ ಕಾಲದಲ್ಲಿಯೂ ಸೇರಿದಂತೆ) ಪೂರ್ಣಕಾಲ ಸೈನ್ಯದಲ್ಲಿ ಉದ್ಯೋಗ ಮಾಡುವುದು.


  • logo