logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

olm
ನಾಮವಾಚಕ
ಆಲ್ಮ್‍; ಸಾಮಾನ್ಯವಾಗಿ ಪಾರಕವಾದ, ಆದರೆ ಬೆಳಕಿಗೆ ಬಂದರೆ ಕಂದುಬಣ್ಣಕ್ಕೆ ತಿರುಗುವ, ಕಿವಿರುಗಳು ಹೊರಗಿರುವ,. ಗುಹೆಯಲ್ಲಿ ವಾಸಿಸುವ, ಆಗ್ನೇಯ ಯೂರೋಪಿನ ಒಂದು ಕುರುಡು ಭೂಜಲಚರ ಪ್ರಾಣಿ, ಸಾಲಮ್ಯಾಂಡರ್‍.

ologotrophic
ಗುಣವಾಚಕ
(ಸರೋವರ ಮೊದಲಾದವುಗಳ ವಿಷಯದಲ್ಲಿ) ಸಸ್ಯಪೋಷಕ ದ್ರವ್ಯಗಳು ತಕ್ಕಷ್ಟು ಕಡಮೆಯಿರುವ.

ology
ನಾಮವಾಚಕ
  • (ಹಾಸ್ಯ ಪ್ರಯೋಗ) ಯಾವುದಾದರೂ ಶಾಸ್ತ್ರ, ವಿಜ್ಞಾನ.
  • (ಬಹುವಚನದಲ್ಲಿ) ಶಾಸ್ತ್ರಗಳು; ಬರಿಯ ತತ್ತ್ವ.

  • oloroso
    ನಾಮವಾಚಕ
    ಮಧ್ಯಸ್ಥ ಸಿಹಿಯುಳ್ಳ, ಸಾಂದ್ರವಾದ, ಒಂದು ಬಗೆಯ ಕಪ್ಪು ಶೆರಿಮದ್ಯ.

    Olympain
    ಗುಣವಾಚಕ
  • ಒಲಿಂಪಸ್‍ ಪರ್ವತದ; ಸಾಂಪ್ರದಾಯಿಕವಾಗಿ ಗ್ರೀಕ್‍ ದೇವತೆಗಳ ಆವಾಸವಾಗಿರುವ, ಈಶಾನ್ಯ ಗ್ರೀಸಿನಲ್ಲಿರುವ ಒಲಿಂಪಸ್‍ ಪರ್ವತದ ಯಾ ಅದಕ್ಕೆ ಸಂಬಂಧಿಸಿದ.
  • ಸ್ವರ್ಗದ; ದೇವ ಲೋಕದ.
  • ದೇವ–ಸದೃಶ, ಸಮಾನ; ದೇವತೆಯಂಥ; ದಿವ್ಯ: Olympian beauty ದಿವ್ಯ ಸೌಂದರ್ಯ.
  • (ನಡವಳಿಕೆ ಮೊದಲಾದವುಗಳ ವಿಷಯದಲ್ಲಿ) ಘನಗಂಭೀರ; ಮಹೋದಾತ್ತ; ಶ್ರೇಷ್ಠತೆಯ; ದೊಡ್ಡಸ್ತಿಕೆಯ; ಮೇಲಂತಸ್ತಿನ; ಅನುಗ್ರಹ ತೋರುವಂಥ: Olympian attitude ಅನುಗ್ರಹ ತೋರುವ ದೃಷ್ಟಿ.
  • ದಕ್ಷಿಣ ಗ್ರೀಸ್‍ನಲ್ಲಿರುವ ಪ್ರಾಚೀನ ಒಲಿಂಪಿಯ ಪ್ರದೇಶದ ಯಾ ಅದಕ್ಕೆ ಸಂಬಂಧಿಸಿದ.
  • = 1Olympic.

  • Olympain
    ನಾಮವಾಚಕ
  • ಒಲಿಂಪಿಯನ್‍; ಒಲಂಪಿಯವಾಸಿ; ಪುರಾತನ ಗ್ರೀಸ್‍ನ ಒಲಿಂಪಸ್‍ ಪರ್ವತದ ಮೇಲೆ ವಾಸಿಸುತ್ತಿರುವರೆಂದು ನಂಬಲಾಗಿರುವ ಹನ್ನೆರಡು ಮಹಾದೇವತೆಗಳಲ್ಲಿ ಒಬ್ಬ.
  • ದೇವತಾಪುರುಷ; ಅತಿಮಾನುಷ ಶಾಂತಿ ಮತ್ತು ನಿರ್ಲಿಪ್ತತೆ ಉಳ್ಳ ಯಾ ಮಹಾ ಸಾಧನೆಗಳನ್ನು ಮಾಡಿರುವ ವ್ಯಕ್ತಿ.

  • Olympiad
    ನಾಮವಾಚಕ
    1. ಒಲಿಂಪಿಕ್‍ ಶಕ; ಪುರಾತನ ಗ್ರೀಕರು ಕಾಲಗಣನೆಗಾಗಿ ಬಳಸುತ್ತಿದ್ದ, ಎರಡು ಒಲಿಂಪಿಕ್‍ ಪಂದ್ಯಗಳ ನಡುವಣ ನಾಲ್ಕು ವರ್ಷಗಳ ಅಂತರ. (ಒಲಿಂಪಿಕ್‍ ಪಂದ್ಯಗಳ ಮೊದಲನೆಯ ವರ್ಷ ಕ್ರಿಸ್ತಪೂರ್ವ 776, ಇಲ್ಲಿಂದ ಕಾಲಗಣನೆ).
    2. ನಾಲ್ಕು ವರ್ಷಕ್ಕೊಮ್ಮೆ ನಡೆಸುತ್ತಿದ್ದ ಪ್ರಾಚೀನ ಒಲಿಂಪಿಕ್‍ ಪಂದ್ಯಗಳ ಆಚರಣೆ.
  • ಒಲಿಂಪಿಕ್‍ ಪಂದ್ಯಗಳ ಆಧುನಿಕ ಆಚರಣೆ.
  • ನಿಯತವಾಗಿ ನಡೆಸುವ ಚದುರಂಗ ಮೊದಲಾದ ಆಟಗಳ ಅಂತರಾಷ್ಟ್ರೀಯ ಪಂದ್ಯ, ಸ್ಪರ್ಧೆ.

  • Olympic
    ಗುಣವಾಚಕ
  • ಗ್ರೀಸಿನ ಪ್ರಾಚೀನ ಒಲಿಂಪಿಯದ.
  • ಒಲಿಂಪಿಕ್‍ ಕ್ರೀಡೆಗಳ ಯಾ ಅವುಗಳಿಗೆ ಸಂಬಂಧಿಸಿದ.

  • Olympic
    ನಾಮವಾಚಕ
    (the Olympics ಎಂದು ಪ್ರಯೋಗ) = Olympic games.

    Olympic games
    ನಾಮವಾಚಕ
    ಒಲಿಂಪಿಕ್‍ ಕ್ರೀಡೆಗಳು, ಪಂದ್ಯಗಳು, ಸ್ಪರ್ಧೆಗಳು:
  • ಪುರಾತನ ಗ್ರೀಕರು ಒಲಿಂಪಿಯ ಪಟ್ಟಣದಲ್ಲಿ ನಾಲ್ಕು ವರ್ಷಕ್ಕೊಮ್ಮೆ ನಡೆಸುತ್ತಿದ್ದ ವ್ಯಾಯಾಮ, ಸಾಹಿತ್ಯ, ಸಂಗೀತ, ಮೊದಲಾದವುಗಳ ಸ್ಪರ್ಧೆಗಳು.
  • ಮೊದಲು ಅಥೆನ್ಸ್‍ನಲ್ಲಿ 1896ರಲ್ಲಿ ಪ್ರಾರಂಭವಾಗಿ ನಾಲ್ಕು ವರ್ಷಕ್ಕೆ ಒಮ್ಮೆ ಈಗ ಬೇರೆಬೇರೆ ಕಡೆ ನಡೆಯುವ ಅಂತರರಾಷ್ಟ್ರೀಯ ಕ್ರೀಡಾ, ವ್ಯಾಯಾಮ ಸ್ಪರ್ಧೆಗಳು.


  • logo