logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

manufacturability
ನಾಮವಾಚಕ
ತಯಾರಿಸಬಲ್ಲಿಕೆ; ತಯಾರಿಕೆ ಸಾಧ್ಯತೆ; ಕೈಯಿಂದ ಯಾ ಯಂತ್ರದಿಂದ, ಮುಖ್ಯವಾಗಿ ಬೃಹತ್‍ ಪ್ರಮಾಣದಲ್ಲಿ, ತಯಾರು ಮಾಡಬಹುದಾಗಿರುವಿಕೆ.

manufacturable
ಗುಣವಾಚಕ
ತಯಾರಿಸಬಲ್ಲ; ತಯಾರಿಕೆ ಸಾಧ್ಯ; ಕೈಯಿಂದ ಯಾ ಯಂತ್ರದಿಂದ, ಮುಖ್ಯವಾಗಿ ಬೃಹತ್‍ ಪ್ರಮಾಣದಲ್ಲಿ, ತಯಾರು ಮಾಡಬಹುದಾದ.

manufacture
ನಾಮವಾಚಕ
  • (ಬೃಹತ್‍ ಪ್ರಮಾಣದ) ತಯಾರಿಕೆ; ಕೈಯಿಂದ, ದೇಹಶ್ರಮದಿಂದ ಯಾ ಯಂತ್ರಶಕ್ತಿಯಿಂದ ಮುಖ್ಯವಾಗಿ ದೊಡ್ಡ ಪ್ರಮಾಣದಲ್ಲಿ, ಸಾಮಾನುಗಳನ್ನು ತಯಾರಿಸುವುದು.
  • ಕೈಗಾರಿಕೆ; ಕೈಗಾರಿಕೆಯ ಶಾಖೆ ಯಾ ಬಗೆ: woollen manufacture ಉಣ್ಣೆಯ ಕೈಗಾರಿಕೆ.
  • (ಸಾಹಿತ್ಯ ಮೊದಲಾದವುಗಳ ವಿಷಯದಲ್ಲಿ ತಿರಸ್ಕಾರವಾಗಿ) ಯಾಂತ್ರಿಕ – ರಚನೆ, ಸೃಷ್ಟಿ, ತಯಾರಿಕೆ.

  • manufacture
    ಸಕರ್ಮಕ ಕ್ರಿಯಾಪದ
  • (ಕಚ್ಚಾ ವಸ್ತುಗಳನ್ನು) ಸಿದ್ಧವಸ್ತುಗಳನ್ನಾಗಿ ತಯಾರಿಸು.
  • (ಸಾಮಾನುಗಳನ್ನು, ಮುಖ್ಯವಾಗಿ ಬೃಹತ್‍ ಪ್ರಮಾಣದಲ್ಲಿ) ತಯಾರಿಸು; ಉತ್ಪಾದಿಸು; ತಯಾರು ಮಾಡು.
  • (ತಿರಸ್ಕಾರಾರ್ಥದಲ್ಲಿ) (ಸಾಹಿತ್ಯ, ಕಲಾಕೃತಿ ಮೊದಲಾದವುಗಳನ್ನು) ಯಾಂತ್ರಿಕವಾಗಿ (ಬೃಹತ್‍ ಪ್ರಮಾಣದಲ್ಲಿ) ತಯಾರಿಸು, ಉತ್ಪಾದಿಸು.
  • (ಸಾಕ್ಷ್ಯ, ಕಥೆ, ಮೊದಲಾದವನ್ನು) ಕಲ್ಪಿಸು; ಸೃಷ್ಟಿಸು.

  • manufacturer
    ನಾಮವಾಚಕ
    ತಯಾರಕ; ಮುಖ್ಯವಾಗಿ ಬೃಹತ್‍ ಪ್ರಮಾಣದಲ್ಲಿ ಯಾವುದೇ ವಸ್ತುವನ್ನು ತಯಾರಿಸುವವ.

    manuka
    ನಾಮವಾಚಕ
    (ಆಸ್ಟ್ರೇಲಿಯ ಮತ್ತು ನ್ಯೂಸಿಲಂಡ್‍) ಪರಿಮಳಯುಕ್ತವಾದ ಎಲೆಗಳೂ ಗಟ್ಟಿಯಾದ ದಾರುವೂ ಉಳ್ಳ, ಲೆಪ್ಟೋಸ್ಪರ್ಮಮ್‍ ಸ್ಕೊಪೇರಿಯಂ ಕುಲದ, ಒಂದು ಸಣ್ಣ ಮರ.

    manumission
    ನಾಮವಾಚಕ
    (ಚರಿತ್ರೆ) (ಗುಲಾಮನನ್ನು) ಬಿಡುಗಡೆ ಮಾಡುವುದು; (ಗುಲಾಮನ) ವಿಮೋಚನೆ.

    manumit
    ಸಕರ್ಮಕ ಕ್ರಿಯಾಪದ
    (ಭೂತರೂಪ ಮತ್ತು ಭೂತಕೃದಂತ manumitted, ವರ್ತಮಾನ ಕೃದಂತ manumitting). (ಚರಿತ್ರೆ) (ಗುಲಾಮನನ್ನು) ಬಿಡುಗಡೆ ಮಾಡು; ವಿಮೋಚನಗೊಳಿಸು.

    manure
    ನಾಮವಾಚಕ
  • ಗೊಬ್ಬರ; ತಿಪ್ಪೆ; (ಭೂಮಿಯನ್ನು ಫಲವತ್ತು ಮಾಡಲು ಬಳಸುವ ಮುಖ್ಯವಾಗಿ) ಕುದುರೆ ಮೊದಲಾದವುಗಳ ಗೊಬ್ಬರ.
  • ಯಾವುದೇ ಕೃತಕ ಗೊಬ್ಬರ.

  • manure
    ಸಕರ್ಮಕ ಕ್ರಿಯಾಪದ
    (ಜಮೀನಿಗೆ) ಗೊಬ್ಬರ – ನೀಡು, ಹಾಕು, ಒದಗಿಸು.


    logo