logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

laugher
ನಾಮವಾಚಕ
  • ನಗುವವ; ನಗೆಗಾರ; ನಗುವಿನ ಚಟವುಳ್ಳವನು.
  • ಗೇಲಿಗಾರ; ಲೇವಡಿಗಾರ; ಕುಚೋದ್ಯಗಾರ; ಹೀಯಾಳಿಸುವವನು; ಅಪಹಾಸ್ಯ ಮಾಡುವವ.
  • (ಅದರ ವಿಚಿತ್ರವಾದ ಕೂಗಿನಿಂದಾಗಿ ಈ ಹೆಸರು ಪಡೆದ) ಒಂದು ಬಗೆಯ ಪಾರಿವಾಳ.

  • laughing
    ನಾಮವಾಚಕ ಪದಗುಚ್ಛ
    ನಗೆ; ನಗುವುದು ನಗುವಿಕೆ. no laugh matter ನಗುವಂಥದ್ದಲ್ಲ; ಗಂಭೀರವಾದ ವಿಷಯ.

    laughing
    ಗುಣವಾಚಕ ಪದಗುಚ್ಛ
    ನಗುವ.
  • laughing hyena ನಗುವ ಕತ್ತೆಕಿರುಬ (ಇದರ ಊಳನ್ನು ಪಿಶಾಚಿಗಳ ನಗುವಿಗೆ ಹೋಲಿಸುತ್ತಾರೆ).
  • laughing jackass ನಗುವ ಕೊಕ್ಕರೆ; ಆಸ್ಟ್ರೇಲಿಯಾದ ಭಾರೀ ಗಾತ್ರದ, ಕರಾಳವಾಗಿ ಕೇಕೆ ಹಾಕುವ ಕೊಕ್ಕರೆ.

  • laughing-gas
    ನಾಮವಾಚಕ
    (ರಸಾಯನವಿಜ್ಞಾನ) ಹಾಸಾನಿಲ; ನಗೆವಾಯು; ಹಿಂದೆ ಆಮ್ಲಜನಕವಿಲ್ಲದೆ ಬಳಸುತ್ತಿದ್ದ, ಸೇವಿಸಿದಾಗ ಲವಲವಿಕೆಯನ್ನುಂಟುಮಾಡುವ, ಅಲ್ಪಾವಧಿಯ ಅರಿವಳಿಕವಾಗಿ ಬಳಸುವ, ನೈಟ್ರಸ್‍ ಆಕ್ಸೈಡ್‍, ${\rm N}_2{\rm O}$.

    laughing-stock
    ನಾಮವಾಚಕ
    ನಗೆಗೇಡು; ನಗೆಪಾಟಲು; ಹಾಸ್ಯಾಸ್ಪದ; ನಗೆಗೆ, ಹಾಸ್ಯಕ್ಕೆ, ಕುಚೋದ್ಯಕ್ಕೆ ಪಾತ್ರವಾದ, ಗುರಿಯಾದ ವ್ಯಕ್ತಿ, ವಸ್ತು ಯಾ ಸಂಗತಿ.

    laughingly
    ಕ್ರಿಯಾವಿಶೇಷಣ
  • ನಗುತ್ತಾ.
  • ನಗುವ ರೀತಿಯಲ್ಲಿ.

  • laughter
    ನಾಮವಾಚಕ
    ನಗೆ; ನಗು; ಹಾಸ; ನಗುವಿಕೆ ಯಾ ನಗುವ ಶಬ್ದ.

    launce
    ನಾಮವಾಚಕ
    ಮರಳ ಹಾವು ಮೀನು; ಉಬ್ಬರದ ಸಮಯದಲ್ಲಿ ಕರೆಯ ಮರಳಲ್ಲಿ ಹುದುಗಿಕೊಳ್ಳುವ, ಒಂದು ಬಗೆಯ ಕಡಲ ಹಾವುಮೀನು.

    launch
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ ಪದಗುಚ್ಛ
  • (ಮುಖ್ಯವಾಗಿ ಹೊಸ ನೌಕೆಯನ್ನು) ನೀರಿಗಿಳಿಸು; ನೀರಿನಲ್ಲಿ ತೇಲಿಬಿಡು.
  • (ಕ್ಷಿಪಣಿಯನ್ನು) ಹಾರಿಸು; ಉಡಾಯಿಸು; ಎಸೆ; ಪ್ರಕ್ಷೇಪಿಸು.
  • (ಏಟನ್ನು) ಕೊಡು; ಹೊಡೆ; ಬಿಗಿ.
  • (ಟೀಕೆ, ಖಂಡನೆ) ಮಾಡು; ಬೀರು.
  • (ಬೆದರಿಕೆ) ಹಾಕು; ಪ್ರಯೋಗಿಸು.
  • (ತೀರ್ಪನ್ನು) ಜಾರಿಮಾಡು; ಜಾರಿಗೆ ಕೊಡು; ಕಾರ್ಯಗತಗೊಳಿಸು.
  • (ವ್ಯಕ್ತಿಯನ್ನು ಉದ್ಯಮ, ಕಾರ್ಯರಂಗ, ಮೊದಲಾದವುಗಳಲ್ಲಿ) ತೊಡಗಿಸು; ತೊಡಗುವಂತೆ ಮಾಡು; (ಅವಕ್ಕೆ) ಹಚ್ಚು.
  • (ವ್ಯಕ್ತಿ, ರಾಕೆಟ್ಟು, ಉದ್ಯಮ, ಮೊದಲಾದವನ್ನು) (ಒಂದು ಮಾರ್ಗದಲ್ಲಿ) ಹೋಗುವಂತೆ ಮಾಡು; ಕಳುಹಿಸು.
  • (ಕಾರ್ಯ, ಉದ್ಯಮ, ಮೊದಲಾದವನ್ನು) ಮೊದಲು ಮಾಡು; ಶುರುಮಾಡು; ಪ್ರಾರಂಭಿಸು; ಉಪಕ್ರಮಿಸು: laugh an attack ಆಕ್ರಮಣ ಪ್ರಾರಂಭಿಸು.
  • (ಹೊಸ ಉತ್ಪನ್ನವನ್ನು, ಮಾಲನ್ನು) (ಪ್ರಚಾರ ಮೊದಲಾದವುಗಳಿಂದ) ವಿಧಿವತ್ತಾಗಿ, ಮಾರುಕಟ್ಟೆಗೆ – ಪ್ರವೇಶ ಮಾಡಿಸು, ಬಿಡು.

  • launch
    ನಾಮವಾಚಕ
    (ನೌಕೆಯನ್ನು) ಸಮುದ್ರಕ್ಕೆ ಬಿಡುವುದು; ನೀರಿಗೆ ಇಳಿಸುವಿಕೆ.


    logo