logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

imprimatura
ನಾಮವಾಚಕ
Italian (ವರ್ಣಚಿತ್ರಣದಲ್ಲಿ) ಪಾರಕ – ಪ್ರಥಮ ವರ್ಣಲೇಪ, ಮೊದಲ ಬಳಿತ; ಭಿತ್ತಿಯ ಮೇಲೆ ಮೊದಲಲ್ಲಿ ಬಳಿಯುವ ಬಣ್ಣದ ಪಾರದರ್ಶಕ ಬಳಿತ, ಲೇಪ.

imprimis
ಕ್ರಿಯಾವಿಶೇಷಣ
(ಪ್ರಾಚೀನ ಪ್ರಯೋಗ) ಮೊದಲನೆಯದಾಗಿ; ಪ್ರಥಮತಃ, ಆದ್ಯತಃ.

imprint
ನಾಮವಾಚಕ ಪದಗುಚ್ಛ
ಮುದ್ರೆ; ಅಚ್ಚು; ಅಂಕಿತ; ಗುರುತು; ಚಿಹ್ನೆ (ರೂಪಕವಾಗಿ ಸಹ): he has left the imprint of his thought on all his works ಅವನು ತನ್ನ ಎಲ್ಲ ಕೃತಿಗಳ ಮೇಲೆಯೂ ತನ್ನ ಚಿಂತನೆಯ ಮುದ್ರೆ ಬಿಟ್ಟು ಹೋಗಿದ್ದಾನೆ.
  • printer’s imprint ಮುದ್ರಕರ ಮುದ್ರೆ; ಅಚ್ಚುಗರ ಅಂಕಿತ.
  • publisher’s imprint ಪ್ರಕಾಶಕನ ಮುದ್ರೆ; ಪುಸ್ತಕದ ಹೆಸರಿನ ಪುಟದಲ್ಲಾಗಲಿ ಕೊನೆಯಲ್ಲಾಗಲಿ ಅಚ್ಚುಮಾಡುವ ಪ್ರಕಾಶಕರ ಹೆಸರು, ವಿಳಾಸ, ಮೊದಲಾದವನ್ನು ತಿಳಿಸುವ ಮುದ್ರೆ.

  • imprint
    ಸಕರ್ಮಕ ಕ್ರಿಯಾಪದ
  • (ಚಿತ್ರ ಮೊದಲಾದವುಗಳ) ಮುದ್ರೆಯೊತ್ತು; ಅಚ್ಚೊತ್ತು; ಠಸ್ಸೆಯೊತ್ತು.
  • (ಭಾವನೆ ಮೊದಲಾದವನ್ನು) ಮನಸ್ಸಿನ – ಮೇಲೆ ಅಚ್ಚೊತ್ತು, ನಾಟಿಸು, ಮುದ್ರೆಯೊತ್ತು; ಮನದಟ್ಟು ಮಾಡು.
  • (ಯಾವುದೇ ವಸ್ತುವಿನ ಯಾ ವ್ಯಕ್ತಿಯ ಮೇಲೆ ಅವುಗಳ ಯೋಗ್ಯತೆ, ಗುಣ, ಮೊದಲಾದವನ್ನು) ಮುದ್ರೆಯೊತ್ತು; ಅಚ್ಚೊತ್ತು.
  • (ವಸ್ತುವಿನ ಮೇಲೆ) ಚಿತ್ರ ಒತ್ತು; ಚಿತ್ರದ ಗುರುತು ಹಾಕು.
  • (ಮನಶ್ಶಾಸ್ತ್ರ) ಆಪ್ತವಾಗು; ಪ್ರಿಯ(ವಸ್ತು)ವಾಗು; ಮುಖ್ಯವಾಗಿ ಎಳೆಯ ಪ್ರಾಣಿಗೆ ಆಪ್ತ ಯಾ ಪ್ರಿಯಬಂಧುವೆಂದು ತೋರುವಂತೆ ಆಗು: the parent fish may become imprinted to the young as well as the young to the parent ತಾಯಿಈನು ಮರಿಗೆ ಆಪ್ತವಾಗಬಹುದಾದಂತೆಯೇ ಮರಿಯೂ ತಾಯಿಗೆ ಆಗಬಹುದು.
  • (ಮನಶ್ಶಾಸ್ತ್ರ) ಆಪ್ತವಾಗಿಸು; ಪ್ರಿಯವಸ್ತುವಾಗಿಸು; ಮುಖ್ಯವಾಗಿ ಎಳೆಯ ಮರಿಯೊಂದು ಬೇರೊಂದು ಪ್ರಾಣಿಯನ್ನು ಯಾ ವಸ್ತುವನ್ನು ತನ್ನ ಆಪ್ತ ಯಾ ಪ್ರಿಯಬಂಧುವಾಗಿ ಕಾಣುವಂತೆ ಒಗ್ಗಿಸು: we took ducklings from their natural mother and tried to imprint them to humans ಬಾತಿನ ಮರಿಗಳನ್ನು ಹೆತ್ತ ತಾಯಿಯಿಂದ ಬಿಡಿಸಿ ಅವುಗಳಿಗೆ ಮನುಷ್ಯರನ್ನು ಆಪ್ತವಾಗಿಸಿದೆವು.

  • imprison
    ಸಕರ್ಮಕ ಕ್ರಿಯಾಪದ
  • ಸೆರೆಯಲ್ಲಿಡು; ಕಾರಾಗೃಹದಲ್ಲಿಡು; ಜೈಲಿಗೆ ಹಾಕು.
  • ಬಂಧಿಸಿಡು; ಬಂಧನದಲ್ಲಿಡು; (ಹೊರಗೆ ಹೋಗದಂತೆ) ಕೂಡಿ ಹಾಕು (ರೂಪಕವಾಗಿ ಸಹ).

  • imprisonment
    ನಾಮವಾಚಕ
  • ಸೆರೆವಾಸ; ಬಂಧನ; ಜೈಲುವಾಸ; ತುರಂಗ ಶಿಕ್ಷೆ.
  • ಬಂಧನದಲ್ಲಿಡುವುದು; ಜೈಲಿನಲ್ಲಿ ಹಾಕುವುದು.

  • improbability
    ನಾಮವಾಚಕ
    ಅಸಂಭವತೆ:
  • ನಿಜವಲ್ಲದಿರಬಹುದಾದದ್ದು; ನಡೆಯದಿರಬಹುದಾದದ್ದು.
  • ಅಸಂಭವ ಎನಿಸುವಂಥದು.

  • improbable
    ಗುಣವಾಚಕ
    ಅಸಂಭವ:
  • ನಿಜವಲ್ಲದಿರಬಹುದಾದ; ನಡೆಯದಿರಬಹುದಾದ.
  • ಅಸಂಭವವೆನಿಸುವ; ನಿಜವಾಗಿದ್ದರೂ ನಂಬಲು ಕಷ್ಟವಾದ.

  • improbably
    ಕ್ರಿಯಾವಿಶೇಷಣ
    ಅಸಂಭವವಾಗಿ.

    improbity
    ನಾಮವಾಚಕ
  • ದುಷ್ಟತನ; ದೌರ್ಜನ್ಯ.
  • ಅಪ್ರಾಮಾಣಿಕತೆ.
  • ಭ್ರಷ್ಟತೆ; ಯಾವುದೇ ನೀತಿ, ತತ್ತ್ವ, ಧ್ಯೇಯ, ಮೊದಲಾದವು ಇಲ್ಲದಿರುವುದು.


  • logo