logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

elevation
ನಾಮವಾಚಕ
  • ಎತ್ತುವಿಕೆ; ಮೇಲೆತ್ತುವಿಕೆ.
  • ಮೇಲೆತ್ತಿದ ಸ್ಥಿತಿ; ಉನ್ನತಸ್ಥಿತಿ.
  • (ರೋಮನ್‍ ಕ್ಯಾತೊಲಿಕರ ಪ್ರಭುಭೋಜನ ವ್ರತದಲ್ಲಿ ಪವಿತ್ರ ಬ್ರೆಡ್ಡನ್ನು ಎಲ್ಲರೂ ಆರಾಧಿಸಲೆಂದು) ಮೇಲಕ್ಕೆತ್ತಿ ಹಿಡಿಯುವುದು.
  • (ಕಣ್ಣು, ಧ್ವನಿ, ಆಸೆ, ಭರವಸೆ, ಮೊದಲಾದವುಗಳ) ಏರಿಕೆ; ಎತ್ತರಿಸಿಕೆ; ಉತ್ಥಾನ.
  • (ಬಂದೂಕಿನ ಯಾ ಫಿರಂಗಿಯ) ಅಕ್ಷವನ್ನು ಎತ್ತರಿಸುವುದು.
  • (ಅಂತಸ್ತು, ದರ್ಜೆ ಮೊದಲಾದವುಗಳ) ಏರಿಕೆ; ಔನ್ನತ್ಯ.
  • (ಗುರಿ, ಧ್ಯೇಯ, ಉದ್ದೇಶ, ಶೈಲಿ, ಮೊದಲಾದವುಗಳ) ಉತ್ತಮಿಕೆ; ಉತ್ಕರ್ಷಣೆ.
  • ಉನ್ನತಿ; (ಮುಖ್ಯವಾಗಿ ಬಂದೂಕ ಯಾ ಆಕಾಶಕಾಯದ ದಿಕ್ಕಿನ ವಿಷಯದಲ್ಲಿ) ಬಂದೂಕಕ್ಕೂ ಕ್ಷಿತಿಜೀಯ ರೇಖೆಗೂ ಇರುವ ಕೋನ.
  • (ಒಂದು ನಿರ್ದಿಷ್ಟ ಮಟ್ಟದ ಮೇಲಿನ, ಮುಖ್ಯವಾಗಿ ಸಮುದ್ರಮಟ್ಟದ ಮೇಲಿನ) ಎತ್ತರ; ಉನ್ನತಿ.
  • ಉನ್ನತಿ; ಊರ್ಧ್ವ ಸಮತಲದ ಮೇಲೆ ಮಾಡುವ ಕಟ್ಟಡದ ಆತಿ ಯಾ ನಕ್ಷೆ; ಮನೆ ಮೊದಲಾದವುಗಳ ಪಕ್ಕ, ಮುಂಭಾಗ, ಹಿಂಭಾಗಗಳನ್ನು ತೋರಿಸುವ ಚಪ್ಪಟೆ ನಕಾಸೆ.
  • ಉನ್ನತಿ; ಔನ್ನತ್ಯ; ವೈಭವ; ಉಚ್ಛ್ರಾಯ; ಉತ್ಕರ್ಷ; ಘನತೆ; ಮೇಲ್ಮೆ.
  • ಎತ್ತರವಾದ ಸ್ಥಳ; ಉನ್ನತ ಸ್ಥಳ.
  • (ಬ್ಯಾಲೆ) ನೆಗೆತ; ಸ್ನಾಯುಗಳನ್ನು ಬಿಗಿಗೊಳಿಸಿ ಇಡೀ ಶರೀರವನ್ನು ನೆಲದಿಂದ ಮೇಲಕ್ಕೇರಿಸುವ ನೆಗೆತ.

  • elevational
    ಗುಣವಾಚಕ
    ಉನ್ನತಿಯ; ಎತ್ತರದ; ಎತ್ತರಕ್ಕೆ ಸಂಬಂಧಿಸಿದ.

    elevator
    ನಾಮವಾಚಕ
    ಎತ್ತುಗ; ಉತ್ಥಾನಕ; ಎಲಿವೇಟರು:
  • (ಏನನ್ನಾದರೂ) ಮೇಲೆತ್ತುವ ವ್ಯಕ್ತಿ, ವಸ್ತು, ಸಾಧನ, ಸಲಕರಣೆ.
  • ಅಂಗ ಮೊದಲಾದವನ್ನು ಮೇಲೆತ್ತುವ ಸ್ನಾಯು.
  • ಧಾನ್ಯ ಮೊದಲಾದವನ್ನು ಮೇಲೆತ್ತುವ ಯಂತ್ರ.
  • (ಅಮೆರಿಕನ್‍ ಪ್ರಯೋಗ) ಲಿಹ್ಟು; ಜನರನ್ನು, ವಸ್ತುಗಳನ್ನು ಮೇಲಕ್ಕೂ ಕೆಳಕ್ಕೂ ಕೊಂಡೊಯ್ಯುವ ಸಾಧನ.
  • (ವಾಯುಯಾನ) ಕ್ಷಿತಿಜಕ್ಕೆ ಸಂಬಂಧಿಸಿದಂತೆ ವಿಮಾನದ ಹಾರಾಟದ ಎತ್ತರವನ್ನು ಏರಿಸಲು ಯಾ ಇಳಿಸಲು ಬಳಸುವ, ವಿಮಾನದ ಬಾಲದ ಬಳಿಯ, ಚಲಿಸುವ ಭಾಗ.

  • elevatory
    ಗುಣವಾಚಕ
  • ಮೇಲೆತ್ತುವಂಥ; ಮೇಲೇರಿಸಬಲ್ಲ.
  • (ರೂಪಕವಾಗಿ) ಉನ್ನತಗೊಳಿಸುವ; ಉತ್ಕೃಷ್ಟವಾಗಿಸುವ.

  • eleven
    ನಾಮವಾಚಕ ಪದಗುಚ್ಛ
    the Eleven (ಜೂಡಾಸ್‍ನನ್ನು ಬಿಟ್ಟು) ಕ್ರಿಸ್ತನ ಹನ್ನೊಂದು ಮಂದಿ ಶಿಷ್ಯರು; ಏಕಾದಶ ಶಿಷ್ಯರು.
  • ಹನ್ನೊಂದು; ಏಕಾದಶ.
  • ಹನ್ನೊಂದರ ಚಿಹ್ನೆ (11, xi, XI).
  • ಹನ್ನೊಂದು ಗಂಟೆ.
  • ಹನ್ನೊಂದರಿಂದ ಸೂಚಿತವಾಗುವ ಅಳತೆ ಮೊದಲಾದವು.
  • (ಕ್ರಿಕೆಟ್‍, ಹುಟ್‍ಬಾಲ್‍, ಮೊದಲಾದ ಆಟಗಳಲ್ಲಿ) ಒಂದು ಪಕ್ಷದ ಹನ್ನೊಂದು ಮಂದಿ ಆಟಗಾರರು.

  • eleven
    ಗುಣವಾಚಕ
    ಹನ್ನೊಂದು; ಹನ್ನೊಂದನೆಯ.

    eleven-plus
    ನಾಮವಾಚಕ
    (ಬ್ರಿಟಿಷ್‍ ಪ್ರಯೋಗ) ಹನ್ನೊಂದು ಪ್ಲಸ್‍; ಮಾಧ್ಯಮಿಕ ಶಾಲೆಗೆ ಸೇರುವುದಕ್ಕೆ ಮುಂಚೆ, 11–12ನೆ ವಯಸ್ಸಿನಲ್ಲಿ ತೆಗೆದುಕೊಳ್ಳಬೇಕಾದ ಪರೀಕ್ಷೆ.

    elevenses
    ನಾಮವಾಚಕ
    (ಬ್ರಿಟಿಷ್‍ ಪ್ರಯೋಗ) (ಆಡುಮಾತು) (ಬೆಳಗ್ಗೆ) ಹನ್ನೊಂದು ಗಂಟೆ (ಸುಮಾರಿನ ಲಘು) ಉಪಾಹಾರ.

    eleventh
    ನಾಮವಾಚಕ
    ಹನ್ನೊಂದನೆಯದು ಯಾ ಹನ್ನೊಂದನೆಯವ(ಳು).

    eleventh
    ಗುಣವಾಚಕ ನುಡಿಗಟ್ಟು
    the eleventh hour ಕೊನೆಯ ನಿಮಿಷ; ಕಡೇ ಘಳಿಗೆ.
  • ಹನ್ನೊಂದನೆಯ.
  • ಹನ್ನೊಂದನೇ ಒಂದರ; ಹನ್ನೊಂದು ಭಾಗಗಳಲ್ಲಿ ಒಂದರ.


  • logo