logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

caoutchouc
ಗುಣವಾಚಕ
ಕಚ್ಚಾ ರಬ್ಬರಿನ.

cap
ನಾಮವಾಚಕ ಪದಗುಚ್ಛ ನುಡಿಗಟ್ಟು
  • (ದಾದಿ ಯಾ ಕೆಲಸದವಳು ಮನೆಯೊಳಗಿದ್ದಾಗ ಹಾಕಿಕೊಳ್ಳುವ) ಟೊಪ್ಪಿ; ಟೊಪ್ಪಿಗೆ; ಕುಲಾವಿ; ತಲೆಯುಡುಗೆ.
  • (ಮುಖ್ಯವಾಗಿ ಮನೆಯ ಹೊರಗೆ ಹಾಕಿಕೊಳ್ಳುವ, ಸಾಮಾನ್ಯವಾಗಿ ಮುಂಚಾಚಿರುವ, ಅಂಚಿಲ್ಲದ, ಮೃದುವಾದ) ಟೊಪ್ಪಿಗೆ; ಟೋಪಿ.
  • (ಕಾಲೇಜಿನ ಚೌಕನೆಯ, ಯಾ ಸ್ಕಾಟ್ಲಂಡಿನ ಪರ್ವತಪ್ರದೇಶದ ಉಡುಗೆಯ ಜೊತೆಗೆ ತೊಡುವ, ಯಾ ಬ್ರಿಟನ್ನಿನಲ್ಲಿ ಕ್ರೀಡಾ ತಂಡದ ಸದಸ್ಯನ ಗುರುತಾಗಿ ಕೊಡುವ) ಟೋಪಿ; ಟೊಪ್ಪಿಗೆ.
  • ಟೋಪಿಹಣ; ಟೋಪಿದುಡ್ಡು; ಬೇಟೆಸುಂಕ; ನರಿಬೇಟೆ ಮೊದಲಾದವುಗಳಲ್ಲಿ ಚಂದಾದಾರರಲ್ಲದ ಸದಸ್ಯರಿಂದ ಟೊಪ್ಪಿಗೆಯಲ್ಲಿ ಸಂಗ್ರಹಿಸಿದ ಹಣ.
  • ಮುಚ್ಚಿಕೆ; ಚಿಪ್ಪು; ಟೊಪ್ಪಿಗೆ; (ಅಣಬೆ ತಲೆ, ಮಂಡಿಯ ಚಿಪ್ಪು, ಮೊದಲಾದ ಸ್ವಾಭಾವಿಕವಾದ ಯಾ ಗಾಳಿಯಂತ್ರ, ಕಾಲ್ಬೆರಳುಗಳನ್ನು ಮುಚ್ಚುವ ಬೂಡ್ಸಿನ ಮುಂಭಾಗ, ಸೀಸೆಗೆ ಮೊಹರು ಮಾಡುವ ಸಾಧನ, ಪೆನ್ನಿನ ಮುಚ್ಚಳ, ಕ್ಯಾಮರಾದ ಲೆನ್ಸಿನ ಮುಚ್ಚಳ ಮೊದಲಾದವುಗಳಿಗಾಗಿ ತಯಾರಿಸಿದ, ಆಕಾರ, ಉಪಯೋಗ, ಸ್ಥಾನ, ಮೊದಲಾದವುಗಳಲ್ಲಿ) ಟೋಪಿಯನ್ನು ಹೋಲುವ ಹೊದಿಕೆ.
  • = Dutch cap.
  • = percussion cap.
  • (ನೌಕಾಯಾನ) ಸೇರುವೆಕೊರಡು; ಸೇರುವೆಮರ; ಕೂವೆಕಂಬಕ್ಕೆ ಇನ್ನೊಂದನ್ನು ಕೂಡಿಸಿ ಎತ್ತರಿಸಲು ಬರುವಂಥ ಕೊರಡು.
  • (ಶಂಕುವಿನಾಕಾರದ) ಕಾಗದದ–ಚೀಲ, ಪೊಟ್ಟಣ.
  • (ರೂಪಕವಾಗಿ) ನೆತ್ತಿ; ಅಗ್ರ; ತುದಿ; ಶಿಖರ; ತುತ್ತತುದಿ; ಪರಾಕಾಷ್ಠೆ.

  • cap
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ ನುಡಿಗಟ್ಟು
    (ಒಬ್ಬರನ್ನು ಕಂಡಾಗ, ಗೌರವಾರ್ಥವಾಗಿ) ಟೋಪಿಯನ್ನು–ಮುಟ್ಟಿಕೊ ಯಾ ತೆಗೆ.
  • ಟೋಪಿ ಇಡು; ಟೋಪಿ ಹಾಕು.
  • (ಸ್ಕಾಟ್ಲಂಡ್‍ ಮತ್ತು ನ್ಯೂಸಿಲಂಡ್‍ಗಳಲ್ಲಿ) (ವಿದ್ಯಾ) ಪದವಿ ಕೊಡು; ಡಿಗ್ರಿ ನೀಡು.
  • (ಆಟಾಗಾರನಿಗೆ ಅವನ) ವಿಶಿಷ್ಟ ಟೋಪಿಯನ್ನು ಕೊಡು.
  • (ಬಂದೂಕದ ತೊಟ್ಟಿಗೆ) ಕೇಪು ತೊಡಿಸು.
  • (ದೂಲದ ಕೊನೆ ಮೊದಲಾದವಕ್ಕೆ ಲೋಹದ) ಅಣಚು ಹಾಕು; ತುದಿ ಮುಸುಕು ಹಾಕು.
  • (ಯಾರನ್ನೋ, ಯಾವುದನ್ನೋ) ತಲೆಮೆಟ್ಟು; ಮಿಗಿಲಾಗು; ಮೀರಿಸು; ಮೇಲಾಗು; ಅತಿಶಯಿಸು.
  • (ಒಂದರ) ಮೇಲಿರು; (ಒಂದನ್ನು) ಮುಚ್ಚಿರು; ಆವರಿಸು: the mountains were capped with mist ಮಂಜಿನಿಂದ ಪರ್ವತಗಳು ಮುಚ್ಚಿಹೋಗಿವೆ.
  • (ಯಾವುದರದೇ) ಮೇಲ್ಭಾಗವಾಗಿರು; ತುದಿಯಾಗಿರು; ಶಿಖರವಾಗಿರು; ಕಿರೀಟವಾಗಿರು.
  • (ಒಂದು ಕಥೆಯ ಸೂಕ್ತಿ ಮೊದಲಾದವುಗಳಿಗೆ, ಇನ್ನೊಂದು ಕಥೆಯ ಸೂಕ್ತಿಯಿಂದ) ಸರಿಯಾಗಿ ಉತ್ತರಿಸು; ಮಾರುತ್ತರ ಕೊಡು.
  • (ಒಬ್ಬರನ್ನು ಕಂಡಾಗ, ಗೌರವಾರ್ಥವಾಗಿ) ಟೋಪಿಯನ್ನು–ಮುಟ್ಟು ಯಾ ತೆಗೆ.
  • ಗಾಯಗೊಳಿಸು; ಗಾಯಮಾಡು:the horse caps its hocks ಕುದುರೆ ತನ್ನ ಮಂಡಿಯನ್ನು ಗಾಯಮಾಡಿಕೊಳ್ಳುತ್ತದೆ.

  • CAP
    ಸಂಕ್ಷಿಪ್ತ
    Common Agricultural Policy.

    cap sleeve
    ನಾಮವಾಚಕ
    ತುಂಡುತೋಳು; ಟೋಪಿ ತೋಳು; ರವಿಕೆಯಲ್ಲಿ ಭುಜದಿಂದ ತುಸು ಆಚೆಯವರೆಗೆ ಮಾತ್ರ ಇರುವ ತೋಳು.

    cap(e)lin
    ನಾಮವಾಚಕ
    ಕಿರುಮೀನು; ಕಾಡ್‍ಮೀನನ್ನು ಹಿಡಿಯಲು ಗಾಳಕ್ಕೆ ಸಿಕ್ಕಿಸುವ, ಚಿಕ್ಕ ಮೀನು.

    cap-a-pie
    ಕ್ರಿಯಾವಿಶೇಷಣ
    (ಪ್ರಾಚೀನ ಪ್ರಯೋಗ) ತಲೆಯಿಂದ ಕಾಲಿನವರೆಗೆ; ಮುಡಿಯಿಂದ ಅಡಿಯವರೆಗೆ; ನಖಶಿಖಾಂತವಾಗಿ (ಶಸ್ತ್ರಸಜ್ಜಿತನಾಗಿ, ಸಿದ್ಧವಾಗಿ ಮೊದಲಾದ).

    cap-paper
    ನಾಮವಾಚಕ
    ಪೊಟ್ಟಣ ಕಾಗದ; (ಪೊಟ್ಟಣ ಕಟ್ಟುವ) ಬಾದಾಮಿ ಕಾಗದ.

    cap.
    ಸಂಕ್ಷಿಪ್ತ
  • capital (letter)
  • chapter.

  • capability
    ನಾಮವಾಚಕ
  • (ದೈಹಿಕ, ಮಾನಸಿಕ, ನೈತಿಕ, ಕಾನೂನುರೀತ್ಯಾ ಇರುವ, ಯಾವುದನ್ನೇ ಮಾಡುವ, ಯಾವುದೇ ಕ್ರಿಯೆ ಯಾ ಸಂಸ್ಕರಣಕ್ಕೆ ಒಳಗಾಗುವ) ಶಕ್ತಿ; ಸಾಮರ್ಥ್ಯ; ಅರ್ಹತೆ; ಯೋಗ್ಯತೆ; ಅಳವು; ಆಪು: his capability is unquestionable ಅವನ ಯೋಗ್ಯತೆ ಪ್ರಶ್ನಿಸುವಂಥದಲ್ಲ. the capability of glass in resisting heat ಶಾಖವನ್ನು ತಡೆದುಕೊಳ್ಳುವ ಗಾಜಿನ ಸಾಮರ್ಥ್ಯ.
  • (ಸಾಮಾನ್ಯವಾಗಿ ಬಹುವಚನದಲ್ಲಿ) ಇನ್ನೂ ಬೆಳೆಯದಿರುವ ಯಾ ಉಪಯೋಗಿಸಿಕೊಂಡಿರದ ಶಕ್ತಿ, ಸಾಮರ್ಥ್ಯ.


  • logo