logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

actinotherapy
ನಾಮವಾಚಕ
(ವೈದ್ಯಶಾಸ್ತ್ರ) ಕಿರಣಚಿಕಿತ್ಸೆ; ಕಿರಣಗಳನ್ನುಪಯೋಗಿಸಿ ರೋಗವನ್ನು ಗುಣಪಡಿಸುವ ವಿಧಾನ.

action
ನಾಮವಾಚಕ ಪದಗುಚ್ಛ ನುಡಿಗಟ್ಟು
go into action ಕೆಲಸ ಪ್ರಾರಂಭಿಸು; ಕಾರ್ಯವನ್ನು ಆರಂಭಿಸು.
  • ಕೆಲಸ; ಎಸಕ; ಗೆಯ್ಮೆ; ಕ್ರಿಯೆ; ಕೃತ್ಯ; ಕಾರ್ಯ: men of action ಕಾರ್ಯನಿಷ್ಠ ವ್ಯಕ್ತಿಗಳು. put into action ಕೆಲಸಕ್ಕೆ ಹಚ್ಚು; ಕಾರ್ಯಗತ ಮಾಡು.
  • (ನಾಟಕ, ಸಿನಿಮಾಗಳಲ್ಲಿ) ಅಭಿನಯ; ಅಂಗ ವಿಕ್ಷೇಪ.
  • (ನಾಟಕ, ಸಿನಿಮಾಗಳ) ಕಥಾವಸ್ತು; ಕಥೆ; ಘಟನಾವಳಿ.
  • (ಪಿಯಾನೊ ಯಾ ಬೇರೆ ಯಂತ್ರದ ಯಾ ಯಂತ್ರಭಾಗದ) ಚಲನೆ; ಚಲನ-ರೀತಿ, ಕಾರ್ಯವಿಧಾನ.
  • ಕಾಳಗ; ಕದನ; ಸೈನಿಕ ಕಾರ್ಯಾಚರಣೆ: killed in action ಕದನದಲ್ಲಿ ಮಡಿದ.
  • (ನ್ಯಾಯಶಾಸ್ತ್ರ) ದಾವಾ; ಖಟ್ಲೆ; ಮೊಕದ್ದಮೆ; ವ್ಯವಹಾರ; ವ್ಯಾಜ್ಯ.
  • ಪ್ರಭಾವ; ಪರಿಣಾಮ: action of an acid on metal ಲೋಹದ ಮೇಲೆ ಒಂದು ಆಮ್ಲದ ಪರಿಣಾಮ.
  • ಮಾಡಿ ಮುಗಿಸಿದ–ಕೆಲಸ, ಕಾರ್ಯ.
  • (ಅಶಿಷ್ಟ) ಮುಖ್ಯವಾದ ಕಾರ್ಯ ಯಾ ಕೆಲಸ.
  • (ಆಟಗಾರ, ಕುದುರೆ, ಮೊದಲಾದವುಗಳ) ಶೈಲಿ; ಚಲನ ರೀತಿ; ನಡಗೆಯ ಯಾ ಚಲನೆಯ ರೀತಿ: action of a player ಆಟಗಾರನ ಶೈಲಿ.

  • action
    ಸಕರ್ಮಕ ಕ್ರಿಯಾಪದ
    ದಾವಾ ಹಾಕು; ಮೊಕದ್ದಮೆ ಹೂಡು; ಖಟ್ಲೆ ಹಾಕು.

    action committee
    ನಾಮವಾಚಕ
    ಕ್ರಿಯಾ–ಸಮಿತಿ, ಮಂಡಲಿ; (ಮುಖ್ಯವಾಗಿ ರಾಜಕೀಯದಲ್ಲಿ) ಧೋರಣೆಗಳನ್ನು ಕಾರ್ಯಗತಮಾಡಲು ರಚಿಸಿದ ಮಂಡಲಿ.

    action group
    ನಾಮವಾಚಕ
    = action committee.

    action painting
    ನಾಮವಾಚಕ
    ಕ್ರಿಯಾಚಿತ್ರಣ; ಕಲಾವಿದನು ಲಹರಿ ಬಂದಂತೆ ಯಾವ ಗುರಿಯೂ ಇಲ್ಲದೆ ಯಾ ಸ್ವಾಭಾವಿಕ ಕ್ರಿಯೆಯ ಪರಿಣಾಮವಾಗಿ ಬಣ್ಣವನ್ನು ಲೇಪಿಸಿ ರಚಿಸುವ ಚಿತ್ರಕಲಾ ವಿಧಾನ.

    action stations
    ನಾಮವಾಚಕ
    (ಸೈನ್ಯ) (ಯುದ್ಧದಲ್ಲಿ ಪಾತ್ರವಹಿಸುವ ಮೊದಲು ಪಡೆಗಳು ಸ್ಥಾಪಿಸಿಕೊಳ್ಳುವ ಕದನಾನುಕೂಲಿಯಾದ) ಕ್ರಿಯಾಸ್ಥಾನಗಳು; ಕಾರ್ಯದ ನೆಲೆಗಳು.

    actionable
    ಗುಣವಾಚಕ
    (ಕೋರ್ಟಿನಲ್ಲಿ) ವ್ಯವಹಾರ್ಯ; ವ್ಯಾಜ್ಯಯೋಗ್ಯ.

    actionably
    ಕ್ರಿಯಾವಿಶೇಷಣ
    ವ್ಯಾಜ್ಯಯೋಗ್ಯವಾಗಿ.

    activate
    ಸಕರ್ಮಕ ಕ್ರಿಯಾಪದ
  • ಚುರುಕುಗೊಳಿಸು; ತೀವ್ರಗೊಳಿಸು; ಪಟುಗೊಳಿಸು; ಸಕ್ರಿಯಗೊಳಿಸು.
  • (ಭೌತವಿಜ್ಞಾನ) ವಿಕಿರಣಪಟುಗೊಳಿಸು.


  • logo