logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

mantling
ನಾಮವಾಚಕ
(ವಂಶಲಾಂಛನ ವಿದ್ಯೆ)
  • ಗುರಾಣಿಯ ಹಿಂದೆ ಮತ್ತು ಸುತ್ತ ಇರುವ ಆಲಂಕಾರಿಕ ನೆರಿಗೆಯ ತರೆ ಮೊದಲಾದವು.
  • ಅದರ ಚಿತ್ರ.

  • mantra
    ನಾಮವಾಚಕ
    ಮಂತ್ರ:
  • ಧ್ಯಾನದಲ್ಲಿ ಏಕಾಗ್ರತೆ ಸಾಧಿಸಲು ಪಠಿಸುವ ಪದ ಯಾ ಶಬ್ದ.
  • ಋಕ್ಕು; ವೈದಿಕ ಸ್ತೋತ್ರ.

  • mantrap
    ನಾಮವಾಚಕ
    (ಮುಖ್ಯವಾಗಿ ಅತಿಕ್ರಮ ಪ್ರವೇಶ ಮಾಡುವ) ಜನರನ್ನು ಹಿಡಿಯುವ ಬೋನು; ಮಾನವ ಬೋನು.

    mantua
    ನಾಮವಾಚಕ
    (17-18ನೇ ಶತಮಾನಗಳಲ್ಲಿ ಬಳಕೆಯಲ್ಲಿದ್ದ) ಹೆಂಗಸರ ಸಡಿಲವಾದ ಗೌನು, ಮೇಲುಡುಪು, ಕಪನಿ.

    mantua-maker
    ನಾಮವಾಚಕ
    ಹೆಂಗಸರ – ಉಡುಪುಗಾರ, ಉಡುಪು ತಯಾರಕ.

    manual
    ಗುಣವಾಚಕ
  • ಕೈಯ; ಕೈಯಿಂದ ಆದ, ಮಾಡಿದ: manual labour ಕೈ ದುಡಿಮೆ; ದೈಹಿಕ, ಶಾರೀರಿಕ – (ಪರಿ)ಶ್ರಮ; ಕಾಯಕ.
  • (ಯಂತ್ರದ ವಿಷಯದಲ್ಲಿ) ಕೈಯಿಂದ ನಡೆಸುವ, ಚಾಲನೆ ಮಾಡುವ, ಕೆಲಸ ಮಾಡಿಸುವ: manual fire-engine ಕೈಯಿಂದ ನಡೆಸುವ ಅಗ್ನಿಶಾಮಕ (ಯಂತ್ರ).

  • manual
    ನಾಮವಾಚಕ
  • ಕೈಪಿಡಿ:
    1. (ಮುಖ್ಯವಾಗಿ ಯಂತ್ರವೊಂದನ್ನು ನಡೆಸಲು ಯಾ ವಿಷಯವೊಂದನ್ನು ಕಲಿಯಲು ಒದಗಿಸಿರುವ) ನಿರ್ದೇಶನಗಳನ್ನೊಳಗೊಂಡ ಪುಸ್ತಕ: a computer manual ಗಣಕ ಯಂತ್ರಗಳ ಕೈಪಿಡಿ.
    2. ಯಾವುದೇ ಚಿಕ್ಕ ಪುಸ್ತಕ, ಕಿರುಹೊತ್ತಿಗೆ.
  • (ಬೆರಳಿಂದ ವಾದನ ಮಾಡುವ, ಆರ್ಗನ್‍ ವಾದ್ಯದ) ಕೀಲಕೈ ಮಣೆ.
  • (ಚರಿತ್ರೆ) (ಕ್ರೈಸ್ತ ಪಾದ್ರಿಗಳ ಬಳಕೆಗಾಗಿ ಬರೆದಿರುವ, ಧಾರ್ಮಿಕ ವಿಧಿಗಳ ಯಾ ಕ್ರಿಯೆಗಳ) ಪ್ರಯೋಗ ಪುಸ್ತಕ.
  • (ಸೈನ್ಯ) ಬಂದೂಕು ಮೊದಲಾದವನ್ನು ಪ್ರಯೋಗಿಸುವಲ್ಲಿ ಒಂದು ಅಭ್ಯಾಸ ಪಾಠ.

  • manual alphabet
    ನಾಮವಾಚಕ
    ಕೈಲಿಪಿ; ಹಸ್ತಭಾಷೆ; ಸಂಜ್ಞಾಭಾಷೆ.

    manually
    ಕ್ರಿಯಾವಿಶೇಷಣ
    ಕೈಯಿಂದ; ದೈಹಿಕವಾಗಿ; ಶಾರೀರಿಕವಾಗಿ.

    manufactory
    ನಾಮವಾಚಕ
    (ಪ್ರಾಚೀನ ಪ್ರಯೋಗ) ಕಾರ್ಖಾನೆ; ತಯಾರಿಕೆಯ ಕಾರ್ಯಾಗಾರ; ವರ್ಕ್‍ಷಾಪು.


    logo