ಇಂಪ್ರೆಷನಿಸಮ್; ಚಿತ್ತಪ್ರಭಾವ ನಿರೂಪಣ; ಸಾಹಿತ್ಯ, ಚಿತ್ರಕಲೆ ಯಾ ಸಂಗೀತದಲ್ಲಿ ಸೂಕ್ಷ್ಮ ವಿವರಗಳಿಗೆ ಹೋಗದೆ (ಒಂದು ವಸ್ತುವಿನ ಯಾ ದೃಶ್ಯದ) ಒಟ್ಟು ಪರಿಣಾಮವನ್ನು ಮಾತ್ರ ನಿರೂಪಿಸುವ ಪದ್ಧತಿ, ಶೈಲಿ.
impressionist
ನಾಮವಾಚಕ
ಇಂಪ್ರೆಷನಿಸ್ಟ್ (ಪಂಥೀಯ); ಚಿತ್ತಪ್ರಭಾವ ನಿರೂಪಣವಾದಿ; ಮುಖ್ಯವಾಗಿ ಹ್ರಾನ್ಸಿನಲ್ಲಿ 1874 – 1886ರ ಅವಧಿಯಲ್ಲಿ ಇಂಪ್ರೆಷನಿಸ್‍ಮ್ ವಿಧಾನಕ್ಕನುಸಾರವಾಗಿ ಚಿತ್ರ ರಚಿಸುತ್ತಿದ್ದ ಕಲಾವಿದರ ಗುಂಪಿಗೆ ಸೇರಿದವನು.
impressionistic
ಗುಣವಾಚಕ
ಇಂಪ್ರೆಷನಿಸ್ಟ್ ಪಂಥಕ್ಕೆ ಸೇರಿದ, ಮುಖ್ಯವಾಗಿ ಹ್ರೆಂಚ್ ಇಂಪ್ರೆಷನಿಸ್ಟ್ ಪಂಥದ.
impressive
ಗುಣವಾಚಕ
(ಭಾಷೆ, ದೃಶ್ಯ, ಮೊದಲಾದವುಗಳ ವಿಷಯದಲ್ಲಿ) ಮನತಟ್ಟುವ; ಹೃದಯಸ್ಪರ್ಶಿ; ಹೃದಯಂಗಮ; ಭಾವಪ್ರಚೋದಕ; ಗಾಢ ಭಾವನೆಗಳನ್ನು ಉತ್ತೇಜಿಸಬಲ್ಲ.
(ಮನಸ್ಸಿನ ಮೇಲೆ) ಪರಿಣಾಮಕಾರಿಯಾದ; ಪ್ರಭಾವಶಾಲಿಯಾದ; ಮುಖ್ಯವಾಗಿ ಸಮ್ಮತಿ ಯಾ ಮೆಚ್ಚುಗೆಯನ್ನು ಉಂಟುಮಾಡುವ.
impressively
ಕ್ರಿಯಾವಿಶೇಷಣ
ಮನತಟ್ಟುವಂತೆ.
ಪರಿಣಾಮಕಾರಿಯಾಗಿ.
impressiveness
ನಾಮವಾಚಕ
ಪರಿಣಾಮಕಾರಿತ್ವ; ಪ್ರಭಾವಕಾರಿತ್ವ.
impressment
ನಾಮವಾಚಕ
(ಚರಿತ್ರೆ) ಜುಲುಂ ಭರ್ತಿ; ಸೈನ್ಯಕ್ಕೆ ಜನರನ್ನು ಒತ್ತಾಯದಿಂದ ಸೇರಿಸುವುದು.
(ಚರಿತ್ರೆ) ಜುಲುಂ ಸಂಗ್ರಹಣೆ; ಸಾರ್ವಜನಿಕ ಉಪಯೋಗಕ್ಕಾಗಿ ಸರಕು ಮೊದಲಾದವನ್ನು ಬಲವಂತದಿಂದ ವಶಪಡಿಸಿಕೊಳ್ಳುವುದು.
imprest
ನಾಮವಾಚಕ
ಕೈಹಣ; ಸಂಚಕಾರ; ಮುಂಗಡ; ಸರ್ಕಾರಿ ಕೆಲಸದ ಖರ್ಚಿಗಾಗಿ ಮುಂಗಡವಾಗಿ ಕೊಟ್ಟ ಹಣ.
imprimatur
ನಾಮವಾಚಕ
ಮುದ್ರಣಾಧಿಕಾರ:
ಅಧಿಕೃತವಾಗಿ, ರೋಮನ್ ಕ್ಯಾಥೊಲಿಕ್ ಚರ್ಚು ಕೊಟ್ಟ ಮುದ್ರಣಾಧಿಕಾರ.