logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

elephant bird
ನಾಮವಾಚಕ
= aepyornis.

elephant seal
ನಾಮವಾಚಕ
= sea elephant.

elephant's-ear
ನಾಮವಾಚಕ
  • = taro.
  • = begonia.

  • elephantiasis
    ನಾಮವಾಚಕ
    (ರೋಗಶಾಸ್ತ್ರ) ಆನೆಕಾಲು ರೋಗ; ಹುತ್ತಗಾಲು; ಜೀರ್ಕಾಲು; ಗಿಣ್ಣರೋಗ; ತಂತುವಿನಾಕಾರದ ಪರೋಪಜೀವಿಯಿಂದ ಉಂಟಾಗುವ, ಕಾಲು ಮೊದಲಾದವು ಅತಿಯಾಗಿ ಊದಿಕೊಳ್ಳುವ ಚರ್ಮರೋಗ.

    elephantine
    ಗುಣವಾಚಕ ಪದಗುಚ್ಛ
    elephantine epoch ಗಜಯುಗ; ಭೂಮಿಯ ಮೇಲೆ ಹತ್ಕಾಯದ ಗಜಚರ್ಮಿಗಳು ವಿಶೇಷವಾಗಿದ್ದ ಯುಗ.
  • ಆನೆಗಳ.
  • ಒರಟೊರಟಾದ; ಒಡ್ಡೊಡ್ಡಾದ; ಬೃಹತ್ಕಾಯದ: elephantine movements ಆನೆಯ (ಭಾರವಾದ) ನಡೆ. elephantine humour (ಆನೆ ನಕ್ಕಂತಿರುವ) ಒಡ್ಡು ಹಾಸ್ಯ.
  • ದೊಡ್ಡ; ಹತ್‍ ಗಾತ್ರದ; ದೈತ್ಯ: elephantine task ಕಷ್ಟಸಾಧ್ಯವಾದ ಕೆಲಸ; ದೈತ್ಯ ಕೆಲಸ.

  • elephantoid
    ಗುಣವಾಚಕ
    ಆನೆಯಂಥ; ಗಜಸಶ; ಆನೆಯಂಥ ಗಗಳ.

    Eleusinian
    ಗುಣವಾಚಕ
    ಗ್ರೀಸಿನ ಅಟಿಕ ಪ್ರಾಂತದ ಎಲ್ಯೂಸಿನ್‍ ನಗರದ ಯಾ ಅದಕ್ಕೆ ಸಂಬಂಧಪಟ್ಟ.

    Eleusinian mysteries
    ನಾಮವಾಚಕ
    (ಗ್ರೀಕ್‍ ಪ್ರಾಕ್ತನಶಾಸ್ತ್ರ). ಎಲ್ಯೂಸಿನ್‍ ರಹಸ್ಯಾಚರಣೆಗಳು; ಆಟಿಕ ಪ್ರಾಂತದ ಎಲ್ಯೂಸಿನ್‍ ಎಂಬಲ್ಲಿ ‘ಡೆಮಿಟರ್‍’ ದೇವತೆಯ ಪ್ರೀತ್ಯರ್ಥವಾಗಿ ಆಚರಿಸುತ್ತಿದ್ದ ಗೂಢಾಚರಣೆಗಳು, ಮತಪ್ರಕ್ರಿಯೆಗಳು.

    eleuthero-
    ಸಮಾಸ ಪೂರ್ವಪದ
    ಸ್ವತಂತ್ರ, ಬಿಡಿ ಎಂಬರ್ಥಗಳಲ್ಲಿ: eleutheromania ಸ್ವಾತಂತ್ರ್ಯ ಬೇಕೆಂಬ ಮದೋತ್ಸಾಹ; ಸ್ವಾತಂತ್ರ್ಯದ ಗೀಳು; ಸ್ವಾತಂತ್ರ್ಯೋನ್ಮಾದ. eleutherophyllous ಸ್ವತಂತ್ರಪರ್ಣ; ಬಿಡಿಬಿಡಿ ಎಲೆಗಳಿರುವ; ಪ್ರತ್ಯೇಕವಾಗಿರುವ ಎಲೆಗಳುಳ್ಳ.

    elevate
    ಸಕರ್ಮಕ ಕ್ರಿಯಾಪದ
  • ಮೇಲೆತ್ತು; ಎತ್ತು; ಮೇಲಕ್ಕೇರಿಸು.
  • (ರೋಮನ್‍ ಕ್ಯಾಥೊಲಿಕ್‍ರ ಪ್ರಭುಭೋಜನದಲ್ಲಿಯ ಪವಿತ್ರ ಬ್ರೆಡ್ಡನ್ನು ಎಲ್ಲರೂ ಆರಾಧಿಸಲೆಂದು) ಮೇಲಕ್ಕೆತ್ತಿ ಹಿಡಿ.
  • (ಕಣ್ಣು, ಧ್ವನಿ, ಆಸೆ, ಭರವಸೆ, ಮೊದಲಾದವನ್ನು) ಮೇಲಕ್ಕೆತ್ತು; ಏರಿಸು; ಎತ್ತರಿಸು.
  • (ಬಂದೂಕಿನ, ಫಿರಂಗಿಯ) ಅಕ್ಷವನ್ನು ಎತ್ತರಿಸು.
  • (ಅಂತಸ್ತು, ದರ್ಜೆ, ಮೊದಲಾದವನ್ನು) ಮೇಲ್ಪಡಿಸು; ಹೆಚ್ಚಿಸು; ಉನ್ನತಗೊಳಿಸು.
  • (ಮುಖ್ಯವಾಗಿ ಭೂತಕೃದಂತದಲ್ಲಿ) (ಗುರಿ, ಧ್ಯೇಯ, ಉದ್ದೇಶ, ಶೈಲಿ, ಮೊದಲಾದವನ್ನು ನೈತಿಕವಾಗಿ ಯಾ ಬೌದ್ಧಿಕವಾಗಿ) ಮೇಲೆತ್ತು; ಉತ್ತಮಗೊಳಿಸು; ಉನ್ನತಗೊಳಿಸು; ಉತ್ಕರ್ಷಗೊಳಿಸು (ಮುಖ್ಯವಾಗಿ ಭೂತಕೃದಂತದಲ್ಲಿ).
  • (ಆಡುಮಾತು) (ಭೂತಕೃದಂತದಲ್ಲಿ) ಸ್ವಲ್ಪ ಕುಡಿಸು; ಮತ್ತೇರಿಸು.
  • (ರೈಲುಕಂಬಿ, ಮೊದಲಾದವನ್ನು) ನೆಲದ ಮಟ್ಟದಿಂದ ಎತ್ತರಿಸು.


  • logo