ಆಲಿಗೋಸ್ಯಾಕರೈಡ್; ಕೆಲವೇ ಮಾನೊಸ್ಯಾಕರೈಡ್ ಅಣುಗಳ ಸಂಯೋಗದಿಂದ ಉಂಟಾಗುವ ಅಣುಗಳುಳ್ಳ ಕಾರ್ಬೊಹೈಡ್ರೇಟು.
oligotrophy
ನಾಮವಾಚಕ
(ಸರೋವರ ಮೊದಲಾದವುಗಳ ವಿಷಯದಲ್ಲಿ) ಸಸ್ಯ ಪೋಷಕ ದ್ರವ್ಯಗಳು ಕಡಮೆ ಇರುವ ಸ್ಥಿತಿ.
olio
ನಾಮವಾಚಕ
(ಮಾಂಸದ) ಕಲಸು ಮೇಲೋಗರ; ಹಲವು ಬಗೆಯ ಪದಾರ್ಥಗಳನ್ನು ಬೆರಸಿ ಮಾಡಿದ ಭಕ್ಷ್ಯ (ಮುಖ್ಯವಾಗಿ ಹಲವು ಬಗೆಯ ಮಾಂಸಗಳನ್ನೂ ತರಕಾರಿಗಳನ್ನೂ ಬೆರೆಸಿ ಮಾಡಿದ್ದು).
ಕಲಬೆರಕೆ; ಮಿಶ್ರ ಸಂಕಲನ; ಸಂಕೀರ್ಣ (ವಸ್ತು ಸಂಗ್ರಹ).
olivaceous
ಗುಣವಾಚಕ
ಆಲಿವ್ ಹಸುರು ಬಣ್ಣದ; ಮಬ್ಬು ಹಳದಿ ಹಸುರು ಬಣ್ಣದ.
olivary
ಗುಣವಾಚಕ
(ಅಂಗರಚನಾಶಾಸ್ತ್ರ) ಆಲಿವ್ ಆಕಾರದ; ಅಂಡಾಕಾರದ.
olive
ನಾಮವಾಚಕ
ಆಲಿವ್:
ಆಲಿವ್ ಮರ; ಓಲಿಯ ಕುಲಕ್ಕೆ ಸೇರಿದ, ಕಡುಹಸಿರು ಬಣ್ಣದ ಭಲ್ಲೆಯಾಕಾರದ ತೊಗಲಿನಂತಿದ್ದು, ಕೆಳಭಾಗದಲ್ಲಿ ಬಿಳುಪಾಗಿರುವ ಎಲೆಗಳುಳ್ಳ, ಮುಖ್ಯವಾಗಿ ಮೆಡಿಟರೇನಿಯನ್ ಪ್ರದೇಶದ ಆಲಿಯ ಯೂರೋಪಿಯ ಮತ್ತು ದಕ್ಷಿಣ ಆಹ್ರಿಕದ ಆಲಿಯ ಆಹ್ರಿಕಾನ ಕುಲಗಳಿಗೆ ಸೇರಿದ, ನಿತ್ಯ ಹರಿದ್ವರ್ಣದ ಯಾವುದೇ ಮರ.
ಆಲಿವ್ ಹಣ್ಣು; ಗಡುಸಾದ ಬೀಜ ಮತ್ತು ಅದನ್ನಾವರಿಸಿದ ಮೃದುವಾದ ಕಹಿ ತಿರುಳಿರುವ ಹಣ್ಣು ಬಿಡುವ, ಮಾಗಿಲ್ಲದಾಗ ಹಸುರಾಗಿಯೂ ಮಾಗಿದ ಮೇಲೆ ನೀಲಿ ಕಪ್ಪು ಬಣ್ಣದ್ದಾಗಿಯೂ ಇರುವ, ಅಂಡಾಕಾರದ ಚಿಕ್ಕ ಹಣ್ಣು.
ಆಲಿವ್ ಬಣ್ಣ; ಪಕ್ವವಾಗದ ಆಲಿವ್ ಹಣ್ಣಿನ ನಸು ಬೂದು ಹಸುರು ಬಣ್ಣ.
ಆಲಿವ್ (ಮರದ) ದಾರು.
(ಅಂಗರಚನಾಶಾಸ್ತ್ರ) ಆಲಿವ್ ಊತಕ; ಹಿಮ್ಮಿದುಳಿನ (medula oblongata)ಲ್ಲಿರುವ ಆಲಿವ್ ಕಾಯಿಯ ಆಕಾರದ ಉಬ್ಬು ಗುಬುಟುಗಳೆರಡರಲ್ಲಿ ಒಂದು.
(ಪ್ರಾಣಿವಿಜ್ಞಾನ) ಆಲಿವ ಕುಲಕ್ಕೆ ಸೇರಿದ, ಅಲಿವ್ ಹಣ್ಣಿನ ಆಕಾರದ ಉದರಪದಿ ಮೃದ್ವಂಗಿ ಯಾ ಈ ಮೃದ್ವಂಗಿಯ ಚಿಪ್ಪು.
(ದನದ ಯಾ ಕರುವಿನ) ಮಾಂಸದ ಚೂರು ಮೊದಲಾದವುಗಳನ್ನು ಆಲಿವ್ ಕಾಯಿನ ಆಕಾರದಲ್ಲಿ ಸುರುಳಿ ಮಾಡಿ ಬೇಯಿಸಿದ ಭಕ್ಷ್ಯ.
(ಶಾಂತಿ ಸಂಧಾನ ಸೂಚಕವಾಗಿ) ಆಲಿವ್–ಎಲೆ, ಕೊಂಬೆ , ಎಲೆಗಳ ದಂಡೆ.
ಆಲಿವ್ ಕಾಯಿನ ಆಕಾರದ (ಅದಕ್ಕೆ ಜವಾಬಾದ ಇನ್ನೊಂದು ಕುಣಿಕೆಯೊಳಕ್ಕೆ ಹಾಕಿ ಉಡುಪನ್ನು ಭದ್ರಪಡಿಸುವ) ಗುಂಡಿ ಮೊದಲಾದ ಸಾಧನ.
olive
ಗುಣವಾಚಕ
ಆಲಿವ್ ಬಣ್ಣದ; ಎಳೆಯ ಆಲಿವ್ ಕಾಯಿಯ ಬಣ್ಣದ.
(ಮೈಬಣ್ಣದ ವಿಷಯದಲ್ಲಿ) ಹಳದಿ ಕಂದು (ಬಣ್ಣದ).
olive branch
ನಾಮವಾಚಕ
ಪದಗುಚ್ಛ
hold out the olive branch ಶಾಂತಿಸಂಧಾನ ನಡೆಸು; ಸಂಧಾನಕ್ಕೆ ಬರಲು ಒಲವು ತೋರಿಸು.
(ಶಾಂತಿಸಂಧಾನಸೂಚಕವಾಗಿ) ಆಲಿವ್ ರೆಂಬೆ.
ರಾಜಿಯ ಯಾ ಸ್ನೇಹಸೂಚಕವಾದ ವರ್ತನೆ, ನಡೆವಳಿ.
(ಬೈಬ್‍ಲ್) (ಹಾಸ್ಯ ಪ್ರಯೋಗ) ಮಗು; ಮಕ್ಕಳು.
olive crown
ನಾಮವಾಚಕ
(ಜಯದ ಸಂಕೇತವಾಗಿ ತಲೆಯ ಮೇಲೆ ಧರಿಸಿದ) ಆಲಿವ್ ಎಲೆಗಳ ಶಿರೋಮಾಲೆ, ವಿಜಯಮಾಲೆ.