logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

mantelpiece
ನಾಮವಾಚಕ
= mantel\((1)\).

mantelshelf
ನಾಮವಾಚಕ
= mantel\((2)\).

mantic
ಗುಣವಾಚಕ
(ಔಪಚಾರಿಕ) ಭವಿಷ್ಯ ಜ್ಞಾನದ; ಕಾಲಜ್ಞಾನದ; ಕಣಿಯ.

mantid
ನಾಮವಾಚಕ
= mantis.

mantilla
ನಾಮವಾಚಕ
  • ಹೆಂಗಸಿನ (ತಲೆಗೂದಲು, ಭುಜಗಳನ್ನು ಮುಚ್ಚುವಂತಿರುವ) ಮುಖಮರೆ; ಬುರುಕಿ; ಮುಖಮುಸುಕು; ಅವಕುಂಠನ; ಪರದೆ. Figure: mantilla-1
  • (ತೋಳಿಲ್ಲದ, ಸಡಿಲವಾದ) ಮೋಟು ಮೇಲಂಗಿ.

  • mantis
    ನಾಮವಾಚಕ ಪದಗುಚ್ಛ
    ಮಿಡತೆ ಜಾತಿಯ ಒಂದು ಕೀಟ. praying mantis ನಮಸ್ಕಾರಿ ಮಿಡತೆ; ಪ್ರಾರ್ಥಕ ಮಿಡತೆ; ಮ್ಯಾಂಟಿಸ್‍ ರಿಲಿಜಿಓಸ ಕುಲದ, ಎರೆಕೀಟದ ಮೇಲೆರಗಲು ತನ್ನ ಮುಂಗಾಲುಗಳನ್ನು, ನಮಸ್ಕರಿಸುವಾಗ ಇರುವ ಜೋಡಿಸಿದ ಕೈಗಳಂತೆ ಇಟ್ಟುಕೊಳ್ಳುವ, ಒಂದು ಮಿಡತೆ ಜಾತಿಯ ಕೀಟ.

    mantissa
    ನಾಮವಾಚಕ
    ಮ್ಯಾಂಟಿಸ; ಲಾಗರಿದಮ್‍ನಲ್ಲಿರುವ ಅಪೂರ್ಣಾಂಕ ಭಾಗ; ದಶಮಾಂಶ ಬಿಂದುವಿನ ತರುವಾಯದ ಭಾಗ.

    mantle
    ನಾಮವಾಚಕ
  • (ಮುಖ್ಯವಾಗಿ ಹೆಂಗಸಿನ) ಸಡಿಲವಾದ ತೋಳಿಲ್ಲದ ಮೇಲಂಗಿ.
  • (ರೂಪಕವಾಗಿ) ಹೊದಿಕೆ; ಆಚ್ಛಾದನ: a mantle of snow ಹಿಮದ ಹೊದಿಕೆ.
  • ಮ್ಯಾಂಟಲು; (ಉರಿಯುವ ಅನಿಲ ಧಾರೆಯ ಸುತ್ತಲೂ ಇರುವ, ನವಿರು ನವಿರಾಗಿರುವ, ಬೆಳಕು ನೀಡಲು ಬಳಸುವ) ಬಲೆನಾಳ; ಜಾಲರಿ ನಳಿಕೆ.
  • (ಭೂವಿಜ್ಞಾನ) ಮ್ಯಾಂಟಲ್‍; ಭೂಮಿಯ (ಅತ್ಯಂತ ಒಳಭಾಗವಾದ) ತಿರುಳಿಗೂ (ಅತ್ಯಂತ ಹೊರಭಾಗವಾದ) ಚಿಪ್ಪಿಗೂ ಮಧ್ಯದ ಭಾಗ.
  • ಮೃದ್ವಂಗಿಯ ಕರುಳು ಮೊದಲಾದ ಒಳ ಅಂಗಗಳನ್ನು ಬಳಸಿರುವ ಚರ್ಮದ ಹೊರ ಹೊದಿಕೆ, ಬಾಹ್ಯ ಪದರ.
  • ಆಧ್ಯಾತ್ಮಿಕ ಪ್ರಭಾವ ಯಾ ಅಧಿಕಾರ.
  • ಬೆನ್ನುಹೊದಿಕೆ; ಹಕ್ಕಿಯ ಬೆನ್ನು, ಹೆಗಲು ಮತ್ತು ರೆಕ್ಕೆಯ ಮೇಲಿನ ಪುಕ್ಕ (ಮುಖ್ಯವಾಗಿ ಇತರ ಭಾಗಗಳಿಗಿಂತ ಭಿನ್ನವಾದ ಬಣ್ಣವಿದ್ದಾಗ ಬಳಕೆ).

  • mantle
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
    (ಮೇಲಂಗಿ) ತೊಡಿಸು; ಮೇಲಂಗಿಯಿಂದ ಯಾ ಅದರಿಂದ ಮಾಡುವಂತೆ – ಹೊದಿಸು, ಕವಿಸು, ಮುಚ್ಚಿ ಮರೆಮಾಡು, ಆಚ್ಛಾದಿಸು, ಆವರಿಸು.
  • (ದ್ರವಗಳ ವಿಷಯದಲ್ಲಿ) ಪಾಚಿಕಟ್ಟು; ಪದರಕಟ್ಟು.
  • (ರಕ್ತದ ವಿಷಯದಲ್ಲಿ) ಕೆನ್ನೆಗಳಿಗೆ ತುಂಬಿ ಮುಖವನ್ನು ಕೆಂಪೇರಿಸು.
  • (ಮೇಲಂಗಿಯಿಂದ ಮುಚ್ಚುವಂತೆ) ತೊಡು; ಮುಚ್ಚಿಕೊ; ಮರೆ ಮಾಡಿಕೊ; ಆವರಣ ಹಾಕಿಕೊ.
  • (ಮುಖ) ಕೆಂಪಾಗು; ಕೆಂಪೇರು; ರಂಗೇರು; ರಂಗಾಗು.

  • mantlet
    ನಾಮವಾಚಕ
    = mantelet.


    logo