logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

impregnate
ಸಕರ್ಮಕ ಕ್ರಿಯಾಪದ
  • ಬಸಿರು ಮಾಡು; ಗರ್ಭಾಧಾನ ಮಾಡು; ವೀರ್ಯವಿಡು.
  • (ಜೀವವಿಜ್ಞಾನ) (ಅಂಡಾಣುವನ್ನು) ಫಲೀಕರಿಸು; ಗಬ್ಬವಾಗಿಸು; ಗರ್ಭಧರಿಸುವಂತೆ ಮಾಡು.
  • ತುಂಬು; ಪೂರಿತ ಮಾಡು; ವ್ಯಾಪ್ತಿಗೊಳಿಸು: impregnate a handkerchief with perfume ಸುಗಂಧ ದ್ರವ್ಯದಿಂದ ಕರವಸ್ತ್ರವನ್ನು ಸುಗಂಧಪೂರಿತ ಮಾಡು.
  • (ಭಾವನೆ, ನೀತಿ, ಮೊದಲಾದವುಗಳಿಂದ) ಗರ್ಭಿತಗೊಳಿಸು; ಪೂರಿತಗೊಳಿಸು; ಭರಿತವಾಗಿಸು: a poem impregnated with pessimism ನಿರಾಶಾಪೂರಿತವಾದ ಕವನ.

  • impregnation
    ನಾಮವಾಚಕ
  • ಗರ್ಭಾಧಾನ; ಬಸಿರುಮಾಡುವುದು; ಗಬ್ಬವಾಗಿಸುವುದು.
  • ತುಂಬುವಿಕೆ; ಪೂರಿತಗೊಳಿಸುವುದು.

  • impresario
    ನಾಮವಾಚಕ
    (ಸಂಗೀತ, ನಾಟಕ, ವಿವಿಧ ವಿನೋದಾವಳಿ, ಮೊದಲಾದವುಗಳ) ವ್ಯವಸ್ಥಾಪಕ; ಸಂಯೋಜಕ; ಸಂಚಾಲಕ.

    imprescriptible
    ಗುಣವಾಚಕ
    ಅನಪಹರಣೀಯ; ನಿರ್ಬಾಧಿತ; ನಿರುಪಾಧಿಕ; ಕಟ್ಟಳೆಗೊಳಪಡದ; ಕಾನೂನಿನ ಮೇರೆಗೆ ರದ್ದುಪಡಿಸಲಾಗದ ಯಾ ಕಿತ್ತುಕೊಳ್ಳಲಾಗದ: imprescriptible right ಅನಪಹರಣೀಯ ಹಕ್ಕು.

    impress
    ನಾಮವಾಚಕ
  • ಮುದ್ರೆ ಒತ್ತುವುದು; ಛಾಪು, ಠಸ್ಸೆ – ಹಾಕುವುದು.
  • ಮುದ್ರೆ; ಠಸ್ಸೆ; ಛಾಪು; ಮೊಹರು; ಮುದ್ರೆ ಮೊದಲಾದವುಗಳ ಗುರುತು.
  • (ರೂಪಕವಾಗಿ) ವೈಲಕ್ಷಣ್ಯ; ಯಾವುದೋ ಒಂದರ ವಿಶಿಷ್ಟ ಲಕ್ಷಣ, ಚಿಹ್ನೆ, ಗುರುತು, ಮುದ್ರೆ: the impress of a strong personality ದೃಢ ವ್ಯಕ್ತಿತ್ವದ ಮುದ್ರೆ.

  • impress
    ಸಕರ್ಮಕ ಕ್ರಿಯಾಪದ
  • (ಗುರುತು, ಠಸ್ಸೆ, ಮುದ್ರೆ, ಮೊಹರು, ಮೊದಲಾದವನ್ನು) ಒತ್ತು; ಹಾಕು: the footmark impressed on the grass ಹುಲ್ಲಿನ ಮೇಲೆ ಒತ್ತಿದ ಹೆಜ್ಜೆಗುರುತು.
  • (ಒಬ್ಬನ ಮೇಲೆ ಯಾ ಅವನ ಮನಸ್ಸಿನ ಮೇಲೆ ಭಾವನೆ ಮೊದಲಾದವನ್ನು) ಅಚ್ಚೊತ್ತು; ಮೂಡಿಸು; ಮನಗಾಣಿಸು; ಮನದಟ್ಟು ಮಾಡು; ಮನಸ್ಸಿಗೆ ನಾಟಿಸು: beliefs impressed on us in our childhood ನಮ್ಮ ಬಾಲ್ಯದಲ್ಲಿ ನಮ್ಮ ಮೇಲೆ ಅಚ್ಚೊತ್ತಿದ ನಂಬಿಕೆಗಳು.
  • (ಒಂದು ವಸ್ತುವಿನ ಮೇಲೆ) ಮುದ್ರೆ ಒತ್ತು; ಠಸ್ಸೆ ಹಾಕು; ಮೊಹರು ಹಾಕು (ರೂಪಕವಾಗಿ ಸಹ): impressed the wax with his seal ಅರಗಿನ ಮೇಲೆ ತನ್ನ ಮೊಹರನ್ನು ಒತ್ತಿದ.
  • ಗಾಢವಾದ – ಪರಿಣಾಮವನ್ನುಂಟು ಮಾಡು, ಪ್ರಭಾವ ಬೀರು: the letter does not impress me favourably ಆ ಕಾಗದ ನನ್ನ ಮೇಲೆ ಒಳ್ಳೆಯ ಪರಿಣಾಮ ಉಂಟುಮಾಡುತ್ತಿಲ್ಲ.
  • (ವ್ಯಕ್ತಿತ್ವ, ಭಾವನೆ, ಮೊದಲಾದವುಗಳ ಮೂಲಕ ಇತರರ ಮೇಲೆ ಒಳ್ಳೆಯ ಯಾ ಕೆಟ್ಟ) ಪ್ರಭಾವ ಬೀರು; ಪರಿಣಾಮ ಉಂಟುಮಾಡು: he tried to impress me with his importance ಅವನು ತನ್ನ ಪ್ರತಿಷ್ಠೆ ತೋರಿಸಿಕೊಳ್ಳುವುದರ ಮೂಲಕ ನನ್ನ ಮೇಲೆ ಪರಿಣಾಮ ಬೀರಲು ಪ್ರಯತ್ನಿಸಿದ.
  • (ವಿದ್ಯುದ್ವಿಜ್ಞಾನ) (ವೋಲ್ಟೇಜ್‍ ಮೊದಲಾದವನ್ನು) ಹೊರಗಿನಿಂದ ಹಾಕು, ಕೊಡು; ಬಾಹ್ಯವಾಗಿ ಒದಗಿಸು.

  • impress
    ಸಕರ್ಮಕ ಕ್ರಿಯಾಪದ
  • (ಚರಿತ್ರೆ) (ಜನರನ್ನು ಸೈನ್ಯಕ್ಕೆ ಸೇರುವಂತೆ) ಒತ್ತಾಯ ಮಾಡು; ಬಲಾತ್ಕರಿಸು; ಯುದ್ಧಕ್ಕಾಗಿ ಜನರನ್ನು ಹಿಡಿ.
  • (ಚರಿತ್ರೆ) ಸ್ವಾಧೀನಪಡಿಸಿಕೊ; ಸರಕು ಮೊದಲಾದವನ್ನು ಸಾರ್ವಜನಿಕ ಉಪಯೋಗಕ್ಕಾಗಿ ವಶಪಡಿಸಿಕೊ.
  • (ಪ್ರಾಚೀನ ಪ್ರಯೋಗ) (ವಾದ ಮೊದಲಾದವುಗಳಲ್ಲಿ ಒಂದು ವಿಷಯವನ್ನು) ಬಳಸಿಕೊ; ಉಪಯೋಗಿಸಿಕೊ: philology was impressed into the service of the doctrine ಸಿದ್ಧಾಂತಕ್ಕೆ ಆಧಾರವಾಗಿ ಭಾಷಾಶಾಸ್ತ್ರವನ್ನು ಬಳಸಿಕೊಳ್ಳಲಾಯಿತು.

  • impression
    ನಾಮವಾಚಕ
  • ಅಂಕನ; ಗುರುತು, ಮುದ್ರೆ, ಠಸ್ಸೆ – ಹಾಕುವುದು, ಒತ್ತುವುದು.
  • (ಆ ರೀತಿ ಒತ್ತಿದ) ಠಸ್ಸೆ; ಛಾಪು; ಮೊಹರು; ಗುರುತು; ಚಿಹ್ನೆ.
  • (ಮುದ್ರಿತ) ಪ್ರತಿ; ಮುದ್ರಣದ ಮೊಳೆಗಳಿಂದ ಯಾ ಕೊರೆಯಚ್ಚುಗಳಿಂದ ತೆಗೆದ ಒಂದು ಪ್ರತಿ.
  • ಮುದ್ರಣ; ಆವೃತ್ತಿ:
    1. ಒಂದು ಸಲ ಮುದ್ರಿಸಿದ ಒಟ್ಟು ಪ್ರತಿಗಳ ಸಂಖ್ಯೆ.
    2. (ಪುಸ್ತಕ ಮೊದಲಾದವುಗಳ) ಪ್ರತಿಗಳನ್ನು ಒಂದು ಬಾರಿ ಮುದ್ರಿಸುವುದು.
  • (ಮೊದಲು ಮುದ್ರಿಸಿದ್ದನ್ನೇ ಬದಲಾವಣೆಯಿಲ್ಲದೆ ಮಾಡಿದ) ಪುನರ್ಮುದ್ರಣ; ಪುನರಾವೃತ್ತಿ.
  • (ಮುಖ್ಯವಾಗಿ ಮನಸ್ಸಿನ ಮೇಲೆ ಆದ) ಪರಿಣಾಮ; ಪ್ರಭಾವ.
  • (ಮನರಂಜನೆಗಾಗಿ ಮಾಡುವ ವ್ಯಕ್ತಿ, ಪ್ರಾಣಿ ಯಾ ಪಕ್ಷಿಗಳ) ಕಲಾತ್ಮಕ ಅನುಕರಣ.
  • ಎಣಿಕೆ; ಅನಿಸಿಕೆ; ಮನಸ್ಸಿನ ಮೇಲೆ ಉಂಟಾದ ಅಸ್ಪಷ್ಟವೋ ತಪ್ಪೋ ಆಗಿರುವ ಭಾವನೆ, ಅಭಿಪ್ರಾಯ: that is my impression ಅದು ನನ್ನ ಭಾವನೆ. I was under the impression that ಅದು ನನ್ನ ಎಣಿಕೆಯಾಗಿತ್ತು.

  • impressionability
    ನಾಮವಾಚಕ
    ಪ್ರಭಾವವಶ್ಯತೆ; ಸುಲಭವಾಗಿ ಪ್ರಭಾವಕ್ಕೊಳಗಾಗುವಿಕೆ.

    impressionable
    ಗುಣವಾಚಕ
    ಪ್ರಭಾವವಶ್ಯ; ಸುಲಭವಾಗಿ ಪ್ರಭಾವಕ್ಕೊಳಗಾಗುವ.


    logo