logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

elementarily
ಕ್ರಿಯಾವಿಶೇಷಣ
ಮೂಲರೂಪದಲ್ಲಿ; ಪ್ರಾಥಮಿಕವಾಗಿ; ಪೀಠಿಕಾರೂಪದಲ್ಲಿ; ಸರಳರೂಪದಲ್ಲಿ.

elementariness
ನಾಮವಾಚಕ
ಮೂಲರೂಪತ್ವ; ಪ್ರಾಥಮಿಕತ್ವ; ಪೀಠಿಕೆಯಾಗಿರುವುದು; ಸರಳರೂಪತೆ.

elementary
ಗುಣವಾಚಕ
  • ಮೂಲರೂಪದ; ಪ್ರಾಥಮಿಕ; ಪೀಠಿಕಾರೂಪದ; ಸರಳರೂಪದ.
  • (ರಸಾಯನವಿಜ್ಞಾನ) ಧಾತ್ವಕ:
    1. ಧಾತುರೂಪದ; ವಿಭಜನೀಯವಲ್ಲದ.
    2. ಧಾತುಗಳಿಗೆ ಸಂಬಂಧಿಸಿದ.

  • elementary analysis
    ನಾಮವಾಚಕ
    ಧಾತ್ವಕ ವಿಶ್ಲೇಷಣೆ; (ಯಾವುದೇ ಪದಾರ್ಥದಲ್ಲಿ) ಯಾವಯಾವ ಧಾತುಗಳಿವೆ, ಎಷ್ಟೆಷ್ಟಿವೆ ಎಂಬುದರ ನಿರ್ಣಯ ಯಾ ಶೋಧನೆ.

    elementary particle
    ನಾಮವಾಚಕ
    (ಭೌತವಿಜ್ಞಾನ) ಮೂಲಕಣ; ಇನ್ನೂ ಮೂಲಭೂತವಾದ ಬೇರೆ ಕಣಗಳು ಸೇರಿ ಆಗಿದೆಯೆಂದು ಭಾವಿಸಿಲ್ಲದ (ಉದಾಹರಣೆಗೆ ಪ್ರೋಟಾನು, ನ್ಯೂಟ್ರಾನು, ಇತ್ಯಾದಿ) ಉಪಪರಮಾಣು ಕಣ.

    elementary school
    ನಾಮವಾಚಕ
    ಪ್ರಾಥಮಿಕ ಶಾಲೆ; ಚಿಕ್ಕ ಮಕ್ಕಳಿಗೆ ಪ್ರಾರಂಭಿಕ ವಿಷಯಗಳನ್ನು ಬೋಧಿಸುವ ಪಾಠಶಾಲೆ.

    elemi
    ನಾಮವಾಚಕ
    ಎಲಿಮಿ ಮುಲಾಮು; ವಾರ್ನಿಷ್‍ ಮೊದಲಾದವುಗಳಲ್ಲಿ ಬಳಸುವ, ಸಾಂಬ್ರಾಣಿ, ಗುಗ್ಗುಳ, ಲೋಬಾನ, ಧೂಪಗಳಂಥ, ಉಷ್ಣವಲಯದ ಮರದಿಂದ ಸಿಗುವ ಒಂದು ಸುಗಂಧ ರಾಳ.

    elenchus
    ನಾಮವಾಚಕ ಪದಗುಚ್ಛ
    (ತರ್ಕಶಾಸ್ತ್ರ) ಖಂಡನ; ನಿರಾಕರಣ; ನಿರಸನ; ಅಲ್ಲಗಳೆತ. Socratic elenchus (ಸಣ್ಣಸಣ್ಣ ಪ್ರಶ್ನೋತ್ತರಗಳ ಮೂಲಕ ಸತ್ಯವನ್ನು ಬಯಲುಮಾಡಲು ಬಳಸುವ) ಸಾಕ್ರಟೀಸನ ವಾದಸರಣಿ.

    elenctic
    ಗುಣವಾಚಕ
    ಖಂಡನಾತ್ಮಕ; ನಿರಸನದ; ಪ್ರತಿಪ್ರಶ್ನೆಯ; ಅಡ್ಡಪ್ರಶ್ನೆಯ; ಪಾಟೀಸವಾಲು ಮಾಡುವ.

    elephant
    ನಾಮವಾಚಕ ಪದಗುಚ್ಛ ನುಡಿಗಟ್ಟು
    double elephant $40”\times 26\frac{ 1}{ 2}”$ ಅಳತೆಯ ಕಾಗದ.
  • ಆನೆ; ಗಜ.
  • ಕಾಗದದ, ಹಾಳೆಯ ಒಂದು ಗೊತ್ತಾದ ಅಳತೆ ($28”\times 23”$ ಯಾ $711\times 584$ ಮಿ. ಮೀ).
  • ಆನೆ; ಅಸಾಧಾರಣ ಅಳತೆಯ (ಯಾವುದೇ) ಪ್ರಾಣಿ, ಮನುಷ್ಯ: he was an elephant of a man ಅವನೊಬ್ಬ ಆನೆ, ಹದಾಕಾರದ ಮನುಷ್ಯ(ನಾಗಿದ್ದ).


  • logo