logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

act
ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ ಪದಗುಚ್ಛ
  • (ಘಟನೆ ಯಾ ಕಥೆಯನ್ನು) ಅಭಿನಯಿಸು.
  • (ನಾಟಕ, ಸಿನಿಮಾಗಳಲ್ಲಿ ವ್ಯಕ್ತಿಯೊಬ್ಬನ) ವೇಷಹಾಕು; ಪಾತ್ರವಹಿಸು: he acted Macbeth ಅವನು ಮ್ಯಾಕ್‍ಬೆತ್‍ ಪಾತ್ರ ವಹಿಸಿದ.
  • ನಟಿಸು; ಸೋಗು ಹಾಕು; ನಟನೆ ಮಾಡು: she acted outraged virtue ಶೀಲಕ್ಕೆ ಅಪಚಾರವಾದಂತೆ ನಟಿಸಿದಳು.
  • ವರ್ತಿಸು; (ನಿರ್ದಿಷ್ಟ ರೀತಿಯಲ್ಲಿ) ನಡೆದುಕೊ: he acted a fool ಅವನು ಮೂರ್ಖನಂತೆ ವರ್ತಿಸಿದ.

  • ACT
    ಸಂಕ್ಷಿಪ್ತ
    Australian Capital Territory.

    ACTH
    ಸಂಕ್ಷಿಪ್ತ
    adrenocorticotrophic hormone.

    acting
    ಗುಣವಾಚಕ
  • ಹಂಗಾಮಿ; ಬದಲಿ; ತಾತ್ಕಾಲಿಕವಾಗಿ ಕೆಲಸ ಮಾಡುತ್ತಿರುವ: Acting Captian ಹಂಗಾಮಿ ಕ್ಯಾಪ್ಟನ್‍.
  • ಕಾರ್ಯನಿರತ; ಕಾರ್ಯನಿರ್ವಾಹಕ; ಕಾರ್ಯಕಾರಿ; ಕೆಲಸ ಮಾಡುವ: Acting Partner of the firm (ಹೆಸರಿಗೆ ಬೇರೆಯವರು ಪಾಲುದಾರರಾಗಿದ್ದರೂ, ನಿಜದಲ್ಲಿ) ಸಂಸ್ಥೆಯ ಕಾರ್ಯನಿರತ ಪಾಲುದಾರ. Acting Manager ಕಾರ್ಯನಿರ್ವಾಹಕ ಮ್ಯಾನೇಜರ್‍.
  • ರಂಗಭೂಮಿಗಾಗಿ–ರಚಿಸಿದ, ಅಳವಡಿಸಿದ, ಯೋಗ್ಯವಾದ, ನಿಯೋಜಿತವಾದ: acting play ರಂಗಭೂಮಿಗಾಗಿ ರಚಿಸಿದ ನಾಟಕ.

  • acting
    ನಾಮವಾಚಕ
  • (ನಾಟಕ, ಸಿನೆಮಾ, ಮೊದಲಾದವುಗಳಲ್ಲಿನ) ಅಭಿನಯ, ಪಾತ್ರ ಯಾ ವೇಷ ಹಾಕುವುದು.
  • ಸೋಗು; ನಟನೆ.
  • ಕಾರ್ಯಾಚರಣೆ; ಮಾಡುವುದು; ಮಾಡುವಿಕೆ: difference between thinking and acting ಯೋಚಿಸುವುದಕ್ಕೂ ಮಾಡುವುದಕ್ಕೂ ಇರುವ ಅಂತರ.
  • ನಟನ ಕಸಬು; ಅಭಿನಯ ವೃತ್ತಿ.

  • acting copy
    ನಾಮವಾಚಕ
    ಅಭಿನಯದ ಪ್ರತಿ; ನಾಟಕದ ಅಭಿನಯಿಸುವ ಭಾಗಗಳನ್ನು ಮತ್ತು ರಂಗಭೂಮಿಗೆ ಸಂಬಂಧಪಟ್ಟ ಸೂಚನೆಗಳನ್ನು ಒಳಗೊಂಡಿರುವ, ನಟರ ಉಪಯೋಗಕ್ಕಾಗಿ ಕೊಡುವ ಪುಸ್ತಕ.

    actinia
    ನಾಮವಾಚಕ
  • ಆಕ್ಟಿನಿಯ; ಅಕ್ಟಿನಿಡೇ ವಂಶಕ್ಕೆ ಸೇರಿದ, ಸಮುದ್ರದ ಅನಿಮನಿಗಳ ಪ್ರಾಣಿಕುಲ.
  • ಈ ಕುಲಕ್ಕೆ ಸೇರಿದ ಸಮುದ್ರದ ಅನಿಮನಿ.

  • actinic
    ಗುಣವಾಚಕ
    (ಭೌತವಿಜ್ಞಾನ) ಕಿರಣ ಕ್ರಿಯಾತ್ಮಕ; (ಕಿರಣಗಳ ಸಹಾಯದಿಂದ) ರಾಸಾಯನಿಕ ಪರಿವರ್ತನೆ ಉಂಟುಮಾಡುವ.

    actinide
    ನಾಮವಾಚಕ
    (ರಸಾಯನವಿಜ್ಞಾನ) ಆಕ್ಟಿನೈಡ್‍; ಆಕ್ಟಿನಿಯಮ್‍ನಿಂದ ಪ್ರಾರಂಭವಾಗುವ 15 ಧಾತುಗಳ ಶ್ರೇಣಿಯಲ್ಲಿಯ ಯಾವುದೇ ಧಾತು.

    actinism
    ನಾಮವಾಚಕ
    (ಭೌತವಿಜ್ಞಾನ) ಕಿರಣ ಕ್ರಿಯೆ; ರಾಸಾಯನಿಕ ಪರಿವರ್ತನೆ ಉಂಟು ಮಾಡುವ (ಕೆಲವು ಬಗೆಯ ಕಿರಣಗಳ) ಗುಣ.


    logo