logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

latter
ಗುಣವಾಚಕ ಪದಗುಚ್ಛ ನುಡಿಗಟ್ಟು
latter end
  • ದ್ವಿತೀಯ; ಉತ್ತರ; ಹಿಂದೆ ಯಾ ಮೇಲೆ ಹೇಳಿದ ಎರಡರ ಪೈಕಿ ಎರಡನೆಯ ಯಾ ಇಬ್ಬರ ಪೈಕಿ ಎರಡನೆಯ: many support the former alternative, but I favour the latter ಅನೇಕರು ಮೊದಲನೆಯ ಪರ್ಯಾಯವನ್ನು ಬೆಂಬಲಿಸುತ್ತಾರೆ, ಆದರೆ ನನಗೆ ಎರಡನೆಯದು ಇಷ್ಟ.
  • (ಮೂರು ಯಾ ಹೆಚ್ಚು ವ್ಯಕ್ತಿ ಯಾ ವಸ್ತುಗಳಲ್ಲಿ) ಕೊನೆಯ ಯಾ ಕೊನೆಯಲ್ಲಿ ಸೂಚಿಸಿದ; ಅಂತಿಮ.
  • (ಒಂದು ಯುಗದ, ಪ್ರಪಂಚದ ಇತಿಹಾಸದ, ಒಂದು ಅವಧಿಯ) ಕಡೆಯ, ಅಂತ್ಯ, ಕೊನೆಯ, ಉತ್ತರ – ಭಾಗದ; ಅಂತಿಮ ಅವಧಿಯ: in these latter days (ಪ್ರಪಂಚದ ಇತಿಹಾಸದ) ಕಡೆಯ ಈ ದಿನಗಳಲ್ಲಿ. in the latter part of his life ಅವನ ಬದುಕಿನ ಅಪರಾವಧಿಯಲ್ಲಿ. the latter half of the year ವರ್ಷದ ಉತ್ತರಾರ್ಧದಲ್ಲಿ.
  • ಇತ್ತೀಚಿನ; ಈಗೀಗಿನ; ಈಚೀಚಿನ; ಇಂದಿನ ದಿನಗಳ: in the latter days ಇತ್ತೀಚಿನ ದಿನಗಳಲ್ಲಿ.
  • (ಪ್ರಾಚೀನ ಪ್ರಯೋಗ) ತರುವಾಯದ; ಅನಂತರದ; ಎರಡನೆಯ.

  • latter-day
    ಗುಣವಾಚಕ
    ಆಧುನಿಕ; ಈಚಿನ; ಇತ್ತೀಚಿನ; ಉತ್ತರಕಾಲೀನ; ಆಕ್ಷೇಪಣೀಯವಾದಷ್ಟು ಈಚಿನ, ಹೊಸದಾದ.

    Latter-day Saints
    ನಾಮವಾಚಕ
    (ಕ್ರೈಸ್ತಧರ್ಮ) ಮಾರ್ಮನ್‍ ಪಂಥದವರು (ತಮ್ಮನ್ನು ಕರೆದುಕೊಳ್ಳುವ ಹೆಸರು.).

    latter-wit
    ನಾಮವಾಚಕ
    (ಅಮೆರಿಕನ್‍ ಪ್ರಯೋಗ) ಕಾಲಮೀರಿದ ಬುದ್ಧಿ; ಪಶ್ಚಿಮ ಬುದ್ಧಿ; (ಮುಖ್ಯವಾಗಿ ಕಾಲ ಯಾ ಅವಕಾಶ ಕಳೆದುಹೋದ ಮೇಲೆ) ಪ್ರತ್ಯುತ್ತರ ಮೊದಲಾದವನ್ನು ಕೊಡಲು ಮಾಡುವ ಆಲೋಚನೆ.

    latterly
    ಕ್ರಿಯಾವಿಶೇಷಣ
  • (ಬಾಳಿನ ಯಾ ಯಾವುದೇ ಯುಗದ ಅವಧಿಯ) ಕೊನೆಯಲ್ಲಿ; ಉತ್ತರಭಾಗದಲ್ಲಿ; ಅಂತ್ಯದಲ್ಲಿ; ಕೊನೆಗೆ.
  • ಇಂದು; ಇತ್ತೀಚೆಗೆ; ಈಚೀಚೆಗೆ; ಈಗೀಗ; ಇಂದಿನ ದಿನಗಳಲ್ಲಿ.

  • lattice
    ನಾಮವಾಚಕ
  • ಜಾಲಕ; ಜಾಳಂದರ; ಜಾಲರಿ; ದಳಿ; ತಡಿಕೆ, ಕದ, ಬೇಲಿ, ಮೊದಲಾದವುಗಳಿಗೆ ಬಳಸುವ, ನಡುನಡುವೆ ಕಂಡಿಗಳುಳ್ಳ ಪಟ್ಟಿಗಳ ಚೌಕಟ್ಟು.
  • ಜಾಲರಿ ಜೋಡಣೆ; ಜಾಲಕವಾಗಿ ಜೋಡಿಸಿದ ಅಡ್ಡಪಟ್ಟಿಗಳು.
  • (ಸ್ಫಟಿಕ ವಿಜ್ಞಾನ) ಜಾಲರಿ; ಸ್ಫಟಿಕಾಕಾರದ ಘನವಸ್ತುವಿನಲ್ಲಿ ಪರಮಾಣುಗಳು, ಅಯಾನುಗಳು ಯಾ ಅಣುಗಳ ಕ್ರಮಬದ್ಧವಾದ ಆವರ್ತನೀಯ ವ್ಯವಸ್ಥೆ. Figure: lattice 3

  • lattice bridge
    ನಾಮವಾಚಕ
    ಜಾಲರಿ ಸೇತುವೆ; ಜಾಲಕದಂತೆ ರಚಿಸಿದ, ಉಕ್ಕಿನ ಪಟ್ಟಿಗಳ ಸೇತುವೆ.

    lattice frame
    ನಾಮವಾಚಕ
    ಜಾಲರಿ – ಜಂತಿ, ದೂಲ, ಚೌಕಟ್ಟು; ಎರಡು ಉದ್ದವಾದ ಸರಳು ಪಟ್ಟಿಗಳನ್ನು ಮೂಲೆಯಿಂದ ಮೂಲೆಗೆ ಹಾಯುವ ಅಡ್ಡಪಟ್ಟಿಗಳಿಂದ ಕೂಡಿಸಿ ಜಾಲರಿಯನ್ನು ಹೋಲುವಂತೆ ಮಾಡಿದ ಭಾರಿ ಜಂತಿ ಯಾ ಸರಕಟ್ಟು.

    lattice girder
    ನಾಮವಾಚಕ
    = lattice frame.

    lattice window
    ನಾಮವಾಚಕ
    ಜಾಲರಿ ಕಿಟಕಿ:
  • ಅನೇಕ ರಂಧ್ರಗಳಿರುವ ಯಾ ಕಂಡಿಗಳಿರುವ ಕಿಟಕಿ.
  • ವಜ್ರಾಕೃತಿಯ ಸಣ್ಣಗಾಜಿನ ಹಲಗೆಗಳನ್ನು ಸೀಸದ ಚೌಕಟ್ಟಿನಲ್ಲಿ ಕೂರಿಸಿ ಮಾಡಿದ ಕಿಟಕಿ.


  • logo