logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

imprecation
ನಾಮವಾಚಕ
  • (ಮುಖ್ಯವಾಗಿ ಮಾತುಗಳ ಮೂಲಕ) ಶಪಿಸುವಿಕೆ; ಶಾಪ ಹಾಕುವುದು; ಅಹಿತವನ್ನು, ಕೇಡನ್ನು – ಕೋರುವುದು.
  • ಶಾಪ.

  • imprecatory
    ಗುಣವಾಚಕ
    ಶಪಿಸುವ; ಶಾಪಹಾಕುವ; ಶಾಪಾತ್ಮಕ; ಶಾಪರೂಪದ; ಕೇಡುಕೋರುವ; ಅಹಿತವನ್ನು ಬಯಸುವ.

    imprecise
    ಗುಣವಾಚಕ
    ನಿಖರವಲ್ಲದ; ಕರಾರುವಾಕ್ಕಲ್ಲದ; ಅನಿಷ್ಕೃಷ್ಟ.

    imprecisely
    ಕ್ರಿಯಾವಿಶೇಷಣ
    ನಿಖರವಲ್ಲದೆ; ಕರಾರುವಾಕ್ಕಾಗಿಲ್ಲದೆ; ಅನಿಷ್ಕೃಷ್ಟವಾಗಿ; ಖಚಿತವಾಗಿರದೆ.

    imprecision
    ನಾಮವಾಚಕ
    ಅನಿಷ್ಕೃಷ್ಟತೆ; ಅಖಚಿತತೆ; ನಿಖರವಲ್ಲದಿರುವಿಕೆ; ಕರಾರುವಾಕ್ಕಾಗಿಲ್ಲದಿರುವುದು.

    impregnability
    ನಾಮವಾಚಕ
  • ಅಜೇಯತೆ.
  • ಅಭೇದ್ಯತೆ.

  • impregnable
    ಗುಣವಾಚಕ
  • (ಕೋಟೆ ಮೊದಲಾದವುಗಳ ವಿಷಯದಲ್ಲಿ) ಅಜೇಯ; ಜಯಿಸಲಾಗದ; ಗೆಲ್ಲಲಾಗದ; ದಾಳಿಯಿಂದ ವಶಪಡಿಸಿಕೊಳ್ಳಲಾಗದ.
  • (ರೂಪಕವಾಗಿ) ಅಭೇದ್ಯ; ಖಂಡಿಸಲಾಗದ; ಅಪ್ರತಿಹತ: an impregnable argument ಅಭೇದ್ಯವಾಗಿರುವ ವಾದ.

  • impregnable
    ಗುಣವಾಚಕ
    ಗರ್ಭಾಧಾಯಿ; ಬಸಿರು ಮಾಡಬಲ್ಲ; ಬಸಿರಾಗುವಂತೆ ಮಾಡಬಲ್ಲ; ಗರ್ಭಧರಿಸುವಂತೆ ಮಾಡಬಲ್ಲ.

    impregnably
    ಕ್ರಿಯಾವಿಶೇಷಣ
  • ಅಜೇಯವಾಗಿ.
  • ಅಭೇದ್ಯವಾಗಿ.

  • impregnate
    ಗುಣವಾಚಕ
  • ಬಸಿರಾದ; ಗರ್ಭಿತ (ರೂಪಕವಾಗಿ ಸಹ).
  • (ರೂಪಕವಾಗಿ) ವ್ಯಾಪ್ತ; ತುಂಬಿರುವ; ವ್ಯಾಪಿಸಿರುವ.


  • logo