logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

acrostical
ಗುಣವಾಚಕ
= 2acrostic.

acrostically
ಕ್ರಿಯಾವಿಶೇಷಣ
ಪದ್ಯಬಂಧದಲ್ಲಿ ಯಾ ಪ್ರಥಮಾಕ್ಷರಿಯಲ್ಲಿ ಯಾ ಚಿತ್ರಾಕ್ಷರಿಯಲ್ಲಿ; ಇವುಗಳಂತೆ; ಇವುಗಳ ರೀತಿಯಲ್ಲಿ.

acroterion
ನಾಮವಾಚಕ
= acroterium.

acroterium
ನಾಮವಾಚಕ
  • ಶಿಖರಪೀಠ; ಅಗ್ರವೇದಿಕೆ; ಗ್ರೀಕ್‍ ಕಟ್ಟಡಗಳ ಮುಖಮಂಟಪದ ಮಾಡಿನ ಮೇಲ್ಗಡೆ ಪ್ರತಿಮೆ ಮೊದಲಾದವನ್ನು ಕೂರಿಸಲು ಅಳವಡಿಸುವ ಪೀಠ. Figure: acroterium
  • ಶಿಖರಾಲಂಕಾರ; ಅಂತಹ ಪೀಠಗಳ ಮೇಲೆ ಕೂರಿಸಿದ ಪ್ರತಿಮೆ ಮೊದಲಾದ ಅಲಂಕಾರ.

  • acrylic
    ಗುಣವಾಚಕ
    (ರಸಾಯನವಿಜ್ಞಾನ) ಅಕ್ರಿಲಿಕ್‍; ಅಕ್ರಿಲಿಕ್‍ ಆಮ್ಲಕ್ಕೆ ಯಾ ಅದರ ನಿಷ್ಪನ್ನ ವಸ್ತುಗಳಿಗೆ ಸಂಬಂಧಿಸಿದ.

    acrylic acid
    ನಾಮವಾಚಕ
    (ರಸಾಯನವಿಜ್ಞಾನ) ಅಕ್ರಿಲಿಕ್‍ ಆಮ್ಲ; ಪಾಲಿಮರೀಕರಣದಿಂದ ಅಕ್ರಿಲಿಕ್‍ ನೂಲು ಮೊದಲಾದ ಕೃತಕ ವಸ್ತುಗಳ ತಯಾರಿಕೆಯಲ್ಲಿ ಬಳಸುವ ಕಾರ್ಬನಿಕ ಆಮ್ಲ, ${\rm CH}_2 = {\rm CHCOOH}$.

    acrylic fibre
    ನಾಮವಾಚಕ
    (ರಸಾಯನವಿಜ್ಞಾನ) ಅಕ್ರಿಲಿಕ್‍ ನೂಲು; ಅಕ್ರಿಲೊನೈಟ್ರೈಲ್‍ನ ಪಾಲಿಮರೀಕರಣದಿಂದ ತಯಾರಿಸುವ ಆರ್ಲಾನ್‍ ಮೊದಲಾದ ಕೃತಕ ಬಟ್ಟೆಯ ನೂಲು.

    acrylic plastic
    ನಾಮವಾಚಕ
    = acrylic resin.

    acrylic resin
    ನಾಮವಾಚಕ
    (ರಸಾಯನವಿಜ್ಞಾನ) ಅಕ್ರಿಲಿಕ್‍ ರಾಳ; ಅಕ್ರಿಲಿಕ್‍ ಯಾ ಮೆಥಕ್ರಿಲಿಕ್‍ ಆಮ್ಲ ಯಾ ಅವುಗಳ ಜನ್ಯಗಳ ಪಾಲಿಮರೀಕರಣದಿಂದ ತಯಾರಿಸುವ ಗಾಜಿನಂಥ ಒಂದು ಬಗೆಯ ರಾಳ.

    act
    ನಾಮವಾಚಕ ಪದಗುಚ್ಛ ನುಡಿಗಟ್ಟು
  • ಕೆಲಸ; ಎಸಕ; ಕಾರ್ಯ; ಕ್ರಿಯೆ; ಕರ್ಮ; ಕೃತ್ಯ: a generous act ಉದಾರ ಕಾರ್ಯ. act of faith ನಂಬಿಕೆಯ ಕೆಲಸ.
  • ಗೆಯ್ಮೆ; (ಕೆಲಸ, ಕಾರ್ಯ) ಮಾಡುವಿಕೆ; ಮಾಡುವುದು: in word a wise man, in act a fool ಆಡುವುದರಲ್ಲಿ ಜಾಣ, ಮಾಡುವುದರಲ್ಲಿ ಕೋಣ.
  • (ನ್ಯಾಯಶಾಸ್ತ್ರ) ಕಾಯಿದೆ; ಕಾನೂನು; ಶಾಸನ; ಅಧಿನಿಯಮ; ವಿಧಿ; ನಿಬಂಧನೆ: Defence of India Act ಭಾರತದ ರಕ್ಷಣಾ ಕಾಯಿದೆ.
  • (ಕಾನೂನುಬದ್ಧ) ಪ್ರಮಾಣಪತ್ರ; ಕಾಯಿದೆ ಪತ್ರ.
  • (ನಾಟಕದ) ಅಂಕ; ದೃಶ್ಯ.
  • ದೃಶ್ಯ; ಪ್ರದರ್ಶನ; ಸರ್ಕಸ್ಸಿನ ಯಾ ವಿವಿಧ ವಿನೋದಾವಳಿಯ ಹಲವಾರು ಚಿಕ್ಕಚಿಕ್ಕ ಪ್ರದರ್ಶನಗಳಲ್ಲಿ ಒಂದು.
  • (ಈ ಪ್ರದರ್ಶನಗಳನ್ನು ಕೊಡುವ) ನಟ(ರು); ಪ್ರದರ್ಶನಕಾರ(ರು).
  • (ಚರಿತ್ರೆ) ವಿಶ್ವವಿದ್ಯಾನಿಲಯದ ಪದವಿಗಾಗಿ ಅಭ್ಯರ್ಥಿಯು ಸಮರ್ಥಿಸಿಕೊಳ್ಳುವ ಮಹಾಪ್ರಬಂಧ.
  • ನಟನೆ; ಸೋಗು; ಆಟ.


  • logo