logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

manoeuvre
ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
  • ಪೂರ್ವ ಯೋಜನೆಯಂತೆ – ನಡೆಸು, ಚಲಿಸುವಂತೆ ಮಾಡು, ಚಾಲನೆಗೊಳಿಸು: manoeuvred the car into the car-park ಕಾರ್‍ ನಿಲ್ದಾಣದೊಳಕ್ಕೆ ಕಾರನ್ನು ನಡೆಸಿದ.
  • (ಸೈನಿಕ ಪಡೆಗಳು ಮೊದಲಾದವನ್ನು) ಸೈನಿಕ ಕಾರ್ಯಾಚರಣೆಗಳನ್ನು ನಡೆಸುವಂತೆ ವ್ಯೂಹ ರಚನೆಗಳಲ್ಲಿ ತೊಡಗುವಂತೆ ಮಾಡು.
  • (ಕೃತ್ರಿಮದಿಂದ ಯಾ ಚಾತುರ್ಯದಿಂದ, ವ್ಯಕ್ತಿ ಮೊದಲಾದವರನ್ನು ಯಾವುದಾದರೂ ಒಂದನ್ನು ಮಾಡುವಂತೆ) ಒತ್ತಾಯಿಸು; ತಳ್ಳು; ನೂಕು; ಉಪಾಯಮಾಡು.

  • manoeuvrer
    ನಾಮವಾಚಕ
  • ವ್ಯೂಹಗಾರ; ಅಭ್ಯಾಸ ಕಾರ್ಯಾಚರಣೆ ಸಂಚಾಲಕ; (ಸೇನಾ ಪಡೆಗಳನ್ನು, ಸಮರನೌಕೆಗಳನ್ನು) ಪೂರ್ವಯೋಜನೆಯಂತೆ ಚಾಲನ ಮಾಡುವವನು, ವ್ಯೂಹ ಕಟ್ಟುವವನು, ರಚಿಸುವವನು.
  • ಕುತಂತ್ರಿ; ಕೃತ್ರಿಮಿ; ಉಪಾಯಗಾರ; ಕುತಂತ್ರ ಬಳಸುವವನು, ಪ್ರಯೋಗಿಸುವವನು.

  • manometer
    ನಾಮವಾಚಕ
    ಒತ್ತಡ ಮಾಪಕ; ಮನಾಮೀಟರ್‍; ದ್ರವಗಳ ಮತ್ತು ಅನಿಲಗಳ ಒತ್ತಡವನ್ನು ಅಳೆಯುವ ಉಪಕರಣ.

    manometric
    ಗುಣವಾಚಕ
    ಒತ್ತಡ ಮಾಪಕದ; ಮನಾಮೀಟರಿನ, ಅದಕ್ಕೆ ಸಂಬಂಧಿಸಿದ, ಯಾ ಅದರಲ್ಲಿ ಅಳೆದ.

    manor
    ನಾಮವಾಚಕ
  • (ಬ್ರಿಟಿಷ್‍ ಪ್ರಯೋಗ) (ಚರಿತ್ರೆ) ಜಹಗೀರು; ಮಾನ್ಯ:
    1. ಹಿಂದೆ ಊಳಿಗಮಾನ್ಯ ಪದ್ಧತಿಯ ಒಡೆತನದ ರೀತಿಯ, ಈಗ ಜಹಗೀರುದಾರನ ಸ್ವಾಧೀನಾನುಭವದಲ್ಲಿರುವ ಮತ್ತು ಹಿಡುವಳಿದಾರರಿಂದ ಕೆಲವು ತೆರಿಗೆಗಳನ್ನು ಎತ್ತುವ ಹಕ್ಕುಳ್ಳ ಭೂಮಿ.
    2. ಭೂಪ್ರದೇಶದ ಏಕಮಾನ್ಯ.
  • = manor-house.
  • (ಬ್ರಿಟಿಷ್‍ ಪ್ರಯೋಗ) (ಆಡುಮಾತು) ಮ್ಯಾನರ್‍; ಪೊಲೀಸ್‍ ಠಾಣೆಯ ವ್ಯಾಪ್ತಿಗೆ ಒಳಪಡುವ ಪ್ರದೇಶ, ಡಿಸ್ಟ್ರಿಕ್ಟ್‍.

  • manor-house
    ನಾಮವಾಚಕ
    ಜಹಗೀರುದಾರನ ಮನೆ, ಭವನ.

    manorial
    ಗುಣವಾಚಕ
  • ಜಹಗೀರುದಾರನ; ಜಹಗೀರುದಾರನಿಗೆ ಸೇರಿದ, ಸಂಬಂಧಿಸಿದ.
  • ಜಹಗೀರಿನ; ಮಾನ್ಯದ; ಜಹಗೀರಿಗೆ ಸೇರಿದ, ಸಂಬಂಧಿಸಿದ.

  • manpower
    ನಾಮವಾಚಕ
  • (ಸೈನ್ಯದ ಯಾ ಇತರ ಕೆಲಸಕ್ಕೆ ಒದಗಬಹುದಾದ) ಜನಬಲ; ಆಳುಬಲ; ಕೆಲಸಗಾರರ ಸಂಖ್ಯೆ.
  • ಮಾನವ ಬಲ; ಒಬ್ಬ ವ್ಯಕ್ತಿಯು ಕೆಲಸ ಮಾಡುವಾಗ (ಉತ್ಪತ್ತಿಯಾಗುವ, ಲಭ್ಯವಾಗುವ) ಬಲ.

  • manque
    ಗುಣವಾಚಕ
    ಆಗಬಹುದಾಗಿದ್ದು ಆಗದೆ ಹೋದ; ಸಾಧ್ಯವಿದ್ದು ಸಿದ್ಧಿಸದೆ ಹೋದ; ಎಟುಕಿನಲ್ಲಿದ್ದು ಸಿಗದೆ ಹೋದ (ನಾಮಪದದ ತರುವಾಯ ಬಳಕೆ).

    mansard
    ನಾಮವಾಚಕ
    = curb roof.


    logo