logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

latish
ಕ್ರಿಯಾವಿಶೇಷಣ
ತುಸು ತಡವಾಗಿ; ಸ್ವಲ್ಪ ಹೊತ್ತು ಮೀರಿ.

latitude
ನಾಮವಾಚಕ ಪದಗುಚ್ಛ
  • (ಭೂಗೋಳಶಾಸ್ತ್ರ) ಅಕ್ಷಾಂಶ; ಭೂಮಿಯ ಮೇಲ್ಮೈ ಮೇಲಿನ ಯಾವುದೇ ಬಿಂದುವಿಗೆ ಸಂಬಂಧಿಸಿದಂತೆ (ಸಾಮಾನ್ಯವಾಗಿ ಉತ್ತರ ಯಾ ದಕ್ಷಿಣ ಎಂಬುದನ್ನು ಸೂಚಿಸಿ ನಿರೂಪಿಸುವ) ಆ ಬಿಂದುವನ್ನೂ ಭೂಕೇಂದ್ರವನ್ನೂ ಸೇರಿಸುವ ಸರಳರೇಖೆಗೂ ವಿಷುವದ್ವೃತ್ತಕ್ಕೂ ಇರುವ, ಡಿಗ್ರಿಗಳು ಮತ್ತು ಮಿನಿಟ್‍ಗಳಲ್ಲಿ ನಿರೂಪಿಸಲಾಗುವ, ಕೋನ.
  • (ಸಾಮಾನ್ಯವಾಗಿ ಬಹುವಚನದಲ್ಲಿ) (ಮುಖ್ಯವಾಗಿ ಉಷಾಂಶಕ್ಕೆ ಸಂಬಂಧಿಸಿದಂತೆ) ಪ್ರದೇಶಗಳು: warm latitudes ಬೆಚ್ಚನೆಯ ಪ್ರದೇಶಗಳು.
  • (ಪ್ರಾಚೀನ ಪ್ರಯೋಗ) ಹರವು; ವ್ಯಾಪ್ತಿ; ವೈಶಾಲ್ಯ; ಪೂರ್ಣವಿಸ್ತಾರ: understood in its proper latitude ಅದನ್ನು ಉಚಿತ ವ್ಯಾಪ್ತಿಯಲ್ಲಿ ಅರಿತರೆ; ಅದರ ಇತಿಮಿತಿ ತಿಳಿದು ಅದನ್ನು ಅರಿತರೆ.
  • (ಅರ್ಥ ವಿವರಣೆ, ವ್ಯಾಖ್ಯಾನ, ಕ್ರಿಯೆ ಯಾ ಅಭಿಪ್ರಾಯಗಳಲ್ಲಿ):
    1. ಔದಾರ್ಯ; ಮನೋವೈಶಾಲ್ಯ; ಉದಾರ – ಭಾವ, ವರ್ತನೆ; ಸಂಕುಚಿತ ಭಾವ, ಮನೋವೃತ್ತಿ ಇಲ್ಲದಿರುವುದು: was allowed much latitude ಬಹಳ ಔದಾರ್ಯ ತೋರಿಸಲಾಗಿತ್ತು.
    2. ಸ್ವಾತಂತ್ರ್ಯ; ಮುಕ್ತ ಅವಕಾಶ; ನಿಯಂತ್ರಣ ಇಲ್ಲದಿರುವಿಕೆ.: they allow their children too much latitude ಅವರು ತಮ್ಮ ಮಕ್ಕಳಿಗೆ ಅತಿಯಾದ ಸ್ವಾತಂತ್ರ್ಯ ಕೊಟ್ಟಿದ್ದಾರೆ.
    3. ಸಹನೆ; ಸಹಿಷ್ಣುತೆ; ಆಚಾರ, ವಿಚಾರ ಭೇದಗಳನ್ನು ಸಹಿಸಿಕೊಳ್ಳುವುದು, ಅವುಗಳಿಗೆ ಮುಕ್ತ ಅವಕಾಶಕೊಡುವುದು.
  • (ಖಗೋಳ ವಿಜ್ಞಾನ) ಖಾಗೋಳಿಕ ಅಕ್ಷಾಂಶ; (ಯಾವುದೇ ಖಾಗೋಳಿಕ ಬಿಂದುವಿಗೆ ಸಂಬಂಧಿಸಿದಂತೆ) ಆ ಬಿಂದುವನ್ನೂ ಕ್ರಾಂತಿವೃತ್ತದ ಕೇಂದ್ರವನ್ನೂ ಸೇರಿಸುವ ಗೆರೆಗೂ ಕಾಂತಿವೃತ್ತಕ್ಕೂ ಇರುವ ಕೋನ.
  • (ಹಾಸ್ಯ ಪ್ರಯೋಗ) ಅಗಲ: hat with great latitude of brim ತುಂಬ ಅಗಲದ ಅಂಚಿನ ಹ್ಯಾಟು.

  • latitudinal
    ಗುಣವಾಚಕ
    (ಮುಖ್ಯವಾಗಿ ಭೂಗೋಳಿಕ) ಅಕ್ಷಾಂಶದ ಯಾ ಅದಕ್ಕೆ ಸಂಬಂಧಿಸಿದ.

    latitudinally
    ಕ್ರಿಯಾವಿಶೇಷಣ
    (ಮುಖ್ಯವಾಗಿ ಭೌಗೋಳಿಕ) ಅಕ್ಷಾಂಶೀಯವಾಗಿ; ಅಕ್ಷಾಂಶಕ್ಕೆ ಸಂಬಂಧಿಸಿದಂತೆ.

    latitudinarian
    ಗುಣವಾಚಕ
    (ಮುಖ್ಯವಾಗಿ ಧಾರ್ಮಿಕ ವಿಷಯದಲ್ಲಿ) ಉದಾರ (ಮನಸ್ಸಿನ, ಮನೋಭಾವದ); ಸಹಿಷ್ಣುತೆಯ; ಬೇರೆಬೇರೆ ಮತಧರ್ಮಗಳ ಪೂಜಾವಿಧಾನಗಳ ನಡುವೆ ಪಕ್ಷಪಾತ ಯಾ ಒಲವು ತೋರದ.

    latitudinarian
    ನಾಮವಾಚಕ
    (ಮುಖ್ಯವಾಗಿ ಧಾರ್ಮಿಕ ವಿಷಯಗಳಲ್ಲಿ) ಉದಾರಿ; ಉದಾರಮನಸ್ಕ; ಸಹಿಷ್ಣು; ಬೇರೆಬೇರೆ ಮತಗಳ ಪೂಜಾವಿಧಾನಗಳ ನಡುವೆ ಪಕ್ಷಪಾತ ಯಾ ಒಲವು ತೋರದವ.

    latitudinarianism
    ನಾಮವಾಚಕ
    (ಮುಖ್ಯವಾಗಿ ಧಾರ್ಮಿಕ ವಿಷಯದಲ್ಲಿ) ಉದಾರತೆ; ಔದಾರ್ಯ; ಉದಾರಮನಸ್ಕತೆ; ಸಹಿಷ್ಣುತೆ; ಪಕ್ಷಪಾತ ಯಾ ಒಲವು ತೋರದ ಸಿದ್ಧಾಂತ.

    latria
    ನಾಮವಾಚಕ
    (ದೇವತಾಶಾಸ್ತ್ರ) ದೇವರಿಗೆ ಮಾತ್ರ ಸಲ್ಲಿಸುವ ಪರಮಪೂಜೆ, ಪರಮಾರಾಧನೆ.

    latrine
    ನಾಮವಾಚಕ
    (ಮುಖ್ಯವಾಗಿ ಕ್ಯಾಂಪು, ಸೈನಿಕರ ಪಾಳೆಯ, ಆಸ್ಪತ್ರೆ, ಮೊದಲಾದವುಗಳಲ್ಲಿನ) ಕಕ್ಕಸು; ಪಾಯಿಖಾನೆ(ಮನೆ); ಶೌಚಗೃಹ; ಸಂಡಾಸ.

    latten
    ನಾಮವಾಚಕ
  • ಲ್ಯಾಟನ್‍; (ಹಿಂದೆ ಸ್ಮಾರಕವಸ್ತುಗಳ ನಿರ್ಮಾಣದಲ್ಲಿ ಬಳಸುತ್ತಿದ್ದ, ತಾಮ್ರ, ಸತು, ಸೀಸ ಮತ್ತು ತವರಗಳನ್ನು ಬೆರೆಸಿ ತಯಾರಿಸಿದ ಒಂದು) ಮಿಶ್ರಲೋಹ.
  • ತವರದ ತಗಡು.
  • ಲೋಹದ ತೆಳುತಗಡು ಯಾ ತಗಡುಗಳಾಗಿ ಮಾಡಿದ ಲೋಹ.


  • logo