logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

impound
ಸಕರ್ಮಕ ಕ್ರಿಯಾಪದ
  • (ದನಗಳನ್ನು) ದೊಡ್ಡಿಯಲ್ಲಿ ಕೂಡು; ದೊಡ್ಡಿಗೆ ಹಾಕು.
  • (ಮನುಷ್ಯ, ವಸ್ತು, ಮೊದಲಾದವನ್ನು) ದೊಡ್ಡಿಯಲ್ಲಿ ಕೂಡುವಂತೆ ಕೂಡು.
  • (ಅಣೆಕಟ್ಟು ಮೊದಲಾದವುಗಳ ವಿಷಯದಲ್ಲಿ, ನೀರನ್ನು) ತಡೆದಿಡು; ತಡೆದು ನಿಲ್ಲಿಸು: water impounded in a reservoir ಜಲಾಶಯದಲ್ಲಿ ತಡೆದಿಟ್ಟ ನೀರು.
  • (ಕಾನೂನು ಪ್ರಕಾರ) ವಶಪಡಿಸಿಕೊ; ಸ್ವಾಧೀನಕ್ಕೆ ತೆಗೆದುಕೊ; ಮುಟ್ಟುಗೋಲು ಹಾಕಿಕೊ.

  • impoverish
    ಸಕರ್ಮಕ ಕ್ರಿಯಾಪದ
  • ಬಡತನಕ್ಕಿಳಿಸು; ದರಿದ್ರೀಕರಿಸು; ಬಡವನನ್ನಾಗಿ ಮಾಡು: a country impoverished by war ಯುದ್ಧದಿಂದ ಬಡವಾದ ದೇಶ.
  • ಶಕ್ತಿಯುಡುಗಿಸು; ದುರ್ಬಲಗೊಳಿಸು.
  • ನಿಸ್ಸಾರಗೊಳಿಸು; ನಿಷ್ಫಲಗೊಳಿಸು; ಫಲವತ್ತಿಲ್ಲದಂತೆ ಮಾಡು; ಸಾರ, ರುಚಿ, ಗುಣ, ಮೊದಲಾದವನ್ನು – ಕುಂದಿಸು, ಕಡಿಮೆಮಾಡು: impoverishes the soil ಭೂಮಿಯನ್ನು ನಿಸ್ಸಾರಗೊಳಿಸುತ್ತದೆ. impoverished cheese ನಿಸ್ಸಾರವಾದ ಚೀಸು.

  • impoverishment
    ನಾಮವಾಚಕ
  • ಬಡತನಕ್ಕಿಳಿಸುವುದು; ದರಿದ್ರೀಕರಣ.
  • ಬಡತನ; ದಾರಿದ್ರ್ಯ.
  • ಸಾರಹರಣ; ಶಕ್ತಿಯುಡುಗಿಸುವುದು; ನಿಸ್ಸಾರಗೊಳಿಸಿಕೆ.

  • impracticability
    ನಾಮವಾಚಕ
  • ಅಸಾಧ್ಯತೆ; ಕಾರ್ಯರೂಪಕ್ಕೆ ತರಲಾಗದಿರುವುದು.
  • ಹತೋಟಿಗೆ ತರಲಾಗದಿರುವಿಕೆ.
  • ದುರ್ಗಮತೆ.

  • impracticable
    ಗುಣವಾಚಕ
  • ಕಾರ್ಯಸಾಧ್ಯವಲ್ಲದ; ಅವ್ಯವಹಾರ್ಯವಾದ; ಕಾರ್ಯರೂಪಕ್ಕೆ ತರಲಾಗದ; ಆಚರಣೆಗೆ ತರಲಾಗದ: economically impracticable ಆರ್ಥಿಕವಾಗಿ ಕಾರ್ಯಸಾಧ್ಯವಲ್ಲದ.
  • (ಮನುಷ್ಯ, ವಸ್ತು, ಮೊದಲಾದವುಗಳ ವಿಷಯದಲ್ಲಿ) ಹತೋಟಿಗೆ ಸಿಗದ; ನಿರ್ವಹಿಸಲಾಗದ; ಅನಿರ್ವಾಹ್ಯ; ಏಗಲಾಗದ; ಏಗುವುದಕ್ಕಾಗದ.
  • (ರಸ್ತೆ ಮೊದಲಾದವುಗಳ ವಿಷಯದಲ್ಲಿ) ಹಾಯಲಾಗದ; ದುರ್ಗಮ(ವಾದ); ಹತ್ತಲಾರದ; ಏರಲಾರದ: an impracticable road ದುರ್ಗಮ ಮಾರ್ಗ. an impracticable cliff ಏರಲಾರದ ಕಡಿಬಂಡೆ.

  • impracticableness
    ನಾಮವಾಚಕ
    = impracticability.

    impracticably
    ಕ್ರಿಯಾವಿಶೇಷಣ
    ಕಾರ್ಯಸಾಧ್ಯವಲ್ಲದ ರೀತಿಯಲ್ಲಿ; ಕಾರ್ಯರೂಪಕ್ಕೆ ತರಲಾಗದಂತೆ.

    impractical
    ಗುಣವಾಚಕ
  • ಕಾರ್ಯಸಾಧ್ಯವಲ್ಲದ.
  • ವ್ಯವಹಾರ್ಯವಲ್ಲದ; ವ್ಯವಹರಿಸಲು ಸಾಧನವಾಗದ.
  • (ಮುಖ್ಯವಾಗಿ ಅಮೆರಿಕನ್‍ ಪ್ರಯೋಗ) = impracticable.

  • impracticality
    ನಾಮವಾಚಕ
  • ಕಾರ್ಯಾಸಾಧ್ಯತೆ; ಕಾರ್ಯಸಾಧ್ಯವಲ್ಲದಿರುವಿಕೆ.
  • ಅವ್ಯವಹಾರ್ಯತೆ.
  • (ಮುಖ್ಯವಾಗಿ ಅಮೆರಿಕನ್‍ ಪ್ರಯೋಗ) = impracticability.

  • imprecate
    ಸಕರ್ಮಕ ಕ್ರಿಯಾಪದ
    ಶಪಿಸು; ಶಾಪ ಹಾಕು; ಅಹಿತವನ್ನು, ಕೇಡನ್ನು – ಕೋರು.


    logo