logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

electrovalency
ನಾಮವಾಚಕ
= electrovalence.

electrovalent
ಗುಣವಾಚಕ
(ರಸಾಯನವಿಜ್ಞಾನ) ವಿದ್ಯುದ್ವೇಲನ್ಸೀಯ; ಎಲೆಕ್ಟ್ರೋವೇಲನ್ಸೀಯ; ರಾಸಾಯನಿಕ ಸಂಯೋಗದಲ್ಲಿ ಪಾಲ್ಗೊಳ್ಳುವ ಪರಮಾಣುಗಳ ನಡುವೆ ಇಲೆಕ್ಟ್ರಾನುಗಳ ವರ್ಗಾವಣೆಯಾಗುವುದರ ಯಾ ಅದಕ್ಕೆ ಸಂಬಂಧಿಸಿದ.

electrovalent bond
ನಾಮವಾಚಕ
(ರಸಾಯನವಿಜ್ಞಾನ) ವಿದ್ಯುದ್ವೇಲನ್ಸಿ ಬಂಧ; ವಿದ್ಯುದ್ವೇಲನ್ಸಿಯ ಕಾರಣ ಪರಮಾಣುಗಳ ನಡುವೆ ಉಂಟಾಗುವುದೆಂದು ಭಾವಿಸಲಾಗುವ ಬಂಧ.

electrum
ನಾಮವಾಚಕ
ಇಲೆಕ್ಟ್ರಮ್‍:
  • ಪ್ರಾಚೀನರು ಉಪಯೋಗಿಸುತ್ತಿದ್ದ ಚಿನ್ನಬೆಳ್ಳಿಗಳ ಮಿಶ್ರಲೋಹ.
  • (ಖನಿಜಶಾಸ್ತ್ರ) ನಿಸರ್ಗದಲ್ಲಿ ದೊರಕುವ ನಸು ಹಳದಿ ಬಣ್ಣದ ಚಿನ್ನಬೆಳ್ಳಿಗಳ ಮಿಶ್ರಲೋಹ.

  • electuary
    ನಾಮವಾಚಕ
    ಲೇಹ್ಯ; ಜೇನುತುಪ್ಪ ಯಾ ಸಕ್ಕರೆಪಾಕದೊಡನೆ ಬೆರೆಸಿದ ಔಷಧಸಾಮಗ್ರಿ.

    eleemosynary
    ಗುಣವಾಚಕ
  • ಭೈಕ್ಷ; ಭಿಕ್ಷದ; ತಿರುಪೆಯ; ಭಿಕ್ಷೆಯನ್ನವಲಂಬಿಸಿದ.
  • ದಾನವಾಗಿ, ಧರ್ಮಾರ್ಥವಾಗಿ ಕೊಟ್ಟ; ಧರ್ಮಾರ್ಥದ.
  • ಉಚಿತ; ಬಿಟ್ಟಿ; ಪುಕ್ಕಟೆಯ.

  • elegance
    ನಾಮವಾಚಕ
  • ಲಾಲಿತ್ಯ; ಲಾವಣ್ಯ; ಅಂದಚೆಂದ; ಸೊಬಗು.
  • ಉತ್ತಮ ಅಭಿರುಚಿ.
  • ನಯ; ನಾಜೂಕು; ಸಂಸ್ಕೃತಿ.
  • ರಸಿಕತೆ.
  • ಉತ್ತಮಿಕೆ; ಉತ್ಕೃಷ್ಟತೆ; ಶ್ರೇಷ್ಠತೆ.

  • elegant
    ಗುಣವಾಚಕ
  • (ನಡಿಗೆ, ಸಾಹಿತ್ಯ ಯಾ ಕಲೆಯ ಶೈಲಿ, ಲೇಖಕ, ನಡವಳಿಕೆ–ಇವುಗಳ ವಿಷಯದಲ್ಲಿ) ಅಂದವಾದ; ಲಲಿತ; ಲಾವಣ್ಯಮಯ; ಚೆಂದದ; ಸೊಬಗುಳ್ಳ.
  • (ಉಡುಪು, ಹವ್ಯಾಸ, ಮೊದಲಾದವುಗಳ ವಿಷಯದಲ್ಲಿ) ಉತ್ತಮ ಅಭಿರುಚಿಯ; ಸದಭಿರುಚಿಯ.
  • (ತಿ ಮೊದಲಾದವುಗಳ ವಿಷಯದಲ್ಲಿ) ಪರಿಷ್ಕೃತ; ಸುಸಂಸ್ಕೃತ.
  • (ಜೀವನದ ರೀತಿ ಮೊದಲಾದವುಗಳ ವಿಷಯದಲ್ಲಿ) ರಸಿಕ; ವಿಲಾಸಮಯ.
  • (ಅಮೆರಿಕನ್‍ ಪ್ರಯೋಗ) ಅತ್ಯುತ್ತಮ; ಅತ್ಯುತ್ಕೃಷ್ಟ; ಶ್ರೇಷ್ಠ.
  • ನಯವಾದ; ನಾಜೂಕಾದ; ಕುಶಲತೆಯಿಂದ ಕೂಡಿದ; ಸರಳ ಮತ್ತು ಪರಿಣಾಮಕಾರಿಯಾಗಿರುವ.

  • elegant
    ನಾಮವಾಚಕ
    ಸೊಗಸುಗಾರ; ಒಳ್ಳೆಯ ಅಭಿರುಚಿ ಮತ್ತು ನೀಟುಗಾರಿಕೆಯನ್ನು ಪ್ರದರ್ಶಿಸುವವನು.

    elegantly
    ಕ್ರಿಯಾವಿಶೇಷಣ
    ಲಲಿತವಾಗಿ; ಸುಂದರವಾಗಿ; ಅಂದವಾಗಿ.


    logo